ಕಾಸರಗೋಡು: ಯೋಗವು ಭಾರತೀಯ ಸಂಸ್ಕೃತಿಯಾಗಿದ್ದು, ಮಕ್ಕಳು ದೊಡ್ಡವರು ಯೋಗಾಭ್ಯಾಸವನ್ನು ಮಾಡಬೇಕು. ಅದರಿಂದ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯ. ಯೋಗಾಭ್ಯಾಸವು ಮನಸ್ಸು, ಶರೀರ ಮತ್ತು ಆತ್ಮದ ಉನ್ನತಿಗಾಗಿ ಪ್ರಯೋಜನವಾಗುತ್ತದೆ. ನಕರಾತ್ಮಕ, ವ್ಯರ್ಥ ಚಿಂತನೆಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಡಾ| ಉಷಾ ಮೆನನ್ ಅವರು ಹೇಳಿದರು.
ಕಾಸರಗೋಡಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಆಯೋಜಿಸಿದ ವಿಶ್ವ ಯೋಗ ದಿನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗಾಸನದ ಜತೆ ಜತೆಗೆ ರಾಜಯೋಗ ಧ್ಯಾನವನ್ನು ತಮ್ಮ ಜೀವನದ ಅಂಗವಾಗಿ ಮಾಡಿಕೊಂಡರೆ ಶಾರೀರಿಕ ಆರೋಗ್ಯದ ಜೊತೆಗೆ ಮನೋಬಲವನ್ನು ವೃದ್ಧಿ ಪಡಿಸುವಲ್ಲಿ ಸಹಾಯ ಮಾಡುತ್ತದೆ. ರಾಜಯೋಗ ಮೆಡಿಟೇಶನ್ ಒಂದು ದಿವ್ಯ ಔಷಧಿಯಾಗಿದೆ. ಈಶ್ವರೀಯ ಕೊಟ್ಟ ವರ ಪ್ರಸಾದವಾಗಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಪ್ರಧಾನ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ವಿಜಯಲಕ್ಷ್ಮೀ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವೈದ್ಯರತ್ನ ವೈದ್ಯಶಾಲಾದ ಡಾ| ಅಂಬಿಳಿ, ಡಾ| ಗಣಪತಿ ಭಟ್, ಬಿಜೆಪಿ ಕಾಸರಗೋಡು ನಗರ ಕಾರ್ಯದರ್ಶಿ ಗುರುಪ್ರಸಾದ್ ಪ್ರಭು, ಯೋಗ ಶಿಕ್ಷಕಿ ತೇಜ ಕುಮಾರಿ, ಉದ್ಯಮಿ ಮಂಜುಳ, ಎಂಜಿನಿಯರ್ ಆದರ್ಶ್, ಕೆಎಸ್‌ಇಬಿ ವಿಭಾಗೀಯ ಅಧಿಕಾರಿ ಪುಷ್ಪರಾಜ್, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ವಿಜಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬಿ.ಕೆ. ರೇಷ್ಮಾ ಸ್ವಾಗತಿಸಿದರು. ಡಾ| ಸುಮತಿ ಅವರು ಸಂಸ್ಥೆಯನ್ನು ಪರಿಚಯಿಸಿದರು. ಬಿ.ಕೆ. ಕುಮಾರನ್ ವಂದಿಸಿದರು.