Advertisement
ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಸೂಚನೆಯಂತೆ 2 ವರ್ಷಗಳ ಹಿಂದೆ ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪಟ್ಟಣ ಪಂಚಾಯತ್ ಸ್ಥಾನಮಾನ ಲಭಿಸಿರುವುದರಿಂದ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮೂಲಸೌಕರ್ಯಗಳ ಒದಗಣೆಗೆ ಹೆಚ್ಚಿನ ಅನುದಾನಗಳು ಲಭಿಸಲಿವೆ.
ಪ್ರಸ್ತಾವಿತ ಪಟ್ಟಣ ಪಂಚಾಯತ್ ವ್ಯಾಪ್ತಿಯ ಭೌಗೋಳಿಕ ವಿಸ್ತೀರ್ಣದ ಶೇ. 55 (3060.57 ಎಕರೆ) ಭಾಗ ಕೃಷಿಯೇತರ ಚಟುವಟಿಕೆಯ ಭೂಮಿಯಾಗಿದ್ದು, ಶೇ. 45 (2569.10 ಎಕರೆ) ಭಾಗ ಕೃಷಿ ಭೂಮಿಯಾಗಿದೆ. ಪಂಚಾಯತ್ ಸ್ವಾಮ್ಯದ ವಾಣಿಜ್ಯ ಸಂಕೀರ್ಣಗಳು, ಖಾಸಗಿ ಸ್ವಾಮ್ಯದ ವಾಣಿಜ್ಯ ಸಂಕೀರ್ಣಗಳು, 5 ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳು, ಈಗಾಗಲೇ ನಡೆಯುತ್ತಿರುವ ವಾರದ ಸಂತೆ, 2 ಪೆಟ್ರೋಲ್ ಬಂಕ್‌ಗಳು, ಸಭಾಭವನಗಳು, ವಿವಿಧ ಸಹಕಾರಿ ಸಂಘಗಳು, ಕೃಷಿ ಪತ್ತಿನ ಸಹಕಾರಿ ಸಂಘ, ಭೂ ಅಭಿವೃದ್ಧಿ ಬ್ಯಾಂಕ್ ಶಾಖೆ, ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು, ರೈಲು ನಿಲ್ದಾಣ, ಮೊಬೈಲ್ ಟವರ್‌ಗಳು, ಸಮುದಾಯ ಆರೋಗ್ಯ ಕೇಂದ್ರ, ತಹಶೀಲ್ದಾರರ ಕಚೇರಿ, ಸುಸಜ್ಜಿತ ರಸ್ತೆ ಸಂಪರ್ಕ ಇತ್ಯಾದಿಗಳನ್ನು ಪಟ್ಟಣ ಪಂಚಾಯತ್‌ಗೆ ಪೂರಕ ಅಂಶಗಳಾಗಿ ಪ್ರಸ್ತಾವನೆಯಲ್ಲಿ ಉಲ್ಲೇಖೀಸಲಾಗಿತ್ತು.
Related Articles
– ಚೆನ್ನಪ್ಪ ಗೌಡ ಕಜೆಮೂಲೆ, ಪಿಡಿಒ, ಕಡಬ ಗ್ರಾ.ಪಂ.
Advertisement