ದೇವನಹಳ್ಳಿ: ಆರೋಗ್ಯಕ್ಕೆ ಯೋಗ ಸಹಕಾರಿ. ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ರೋಗಗಳ ನಿಯಂತ್ರಣಕ್ಕೆ ಯೋಗ ಮದ್ದು ಎಂದು ಜಿಪಂ ಅಧ್ಯಕ್ಷೆ ಜಯಮ್ಮ ತಿಳಿಸಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಆಯುಷ್ ಇಲಾಖೆ ಹಾಗೂ ಇತರೆ ಸಂಘ ಸಂಸ್ಥೆಗಳ ವತಿಯಿಂದ ನಡೆದ ವಿಶ್ವ ಯೋಗ ದಿನಾಚರಣೆ ನಿಮಿತ್ತ ಗಿಡಕ್ಕೆ ನೀರುಣಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯಕ್ಕೆ ಯೋಗಾಭ್ಯಾಸ: ಮನುಷ್ಯ ಆರೋಗ್ಯವಾಗಿರಬೇಕಾದರೆ ಯೋಗದಿಂದ ಮಾತ್ರ ಸಾಧ್ಯ. ಪುರಾತನ ಕಾಲದಿಂದಲೂ ಯೋಗಕ್ಕೆ ತನ್ನದೇ ಕೊಡುಗೆ ಇದೆ. ಮನುಷ್ಯ ಹಿಂದಿನ ಕಾಲದಲ್ಲಿ ಯೋಗ ಮಾಡುವುದರಿಂದ 110-120 ವರ್ಷಗಳವರೆಗೆ ಬದುಕುತ್ತಿದ್ದ. ಈಗಿನ ಆಹಾರ ಪದ್ಧತಿಗಳಿಂದ ಮನುಷ್ಯ 40-60 ವರ್ಷದಲ್ಲಿ ತನ್ನ ಜೀವನದ ಬದುಕು ಮುಗಿಸುತ್ತಿದ್ದಾನೆ. ಅನೇಕ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾನೆ. ಸಮಾಜದಲ್ಲಿ ನಾವು ನೋಡದಂತಹ ಎಲ್ಲಾ ಕಾಯಿಲೆಗಳನ್ನು ನೋಡುತ್ತಿದ್ದೇವೆ. ಮೊದಲು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ಮುಖ್ಯ ಎಂದು ಸಲಹೆ ನೀಡಿದರು.
ಆರೋಗ್ಯವಿಲ್ಲದಿದ್ದರೆ ಎಲ್ಲವೂ ವ್ಯರ್ಥ: ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅಧ್ಯಕ್ಷರಾಗಿ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣ ಯೋಗದಿಂದ ಮಾತ್ರ ಸಾದ್ಯ, ಸಾವಿರಾರು ಮಂದಿ ಔಷಧ ಮಾತ್ರೆಗಳಿಲ್ಲದೆ ಉತ್ತಮ ಆರೋಗ್ಯ ರೂಢಿಸಿಕೊಂಡಿರುತ್ತಾರೆ. ನಿತ್ಯವು ಯೋಗಾಭ್ಯಾಸ ಮಾಡುವುದರಿಂದ ಮಾನಸಿಕ ಖನ್ನತೆ ದೂರವಾಗಿ ಏಕಾಗ್ರತೆ ಹೆಚ್ಚುತ್ತದೆ. ಮನುಷ್ಯ ಕೋಟಿ ಹಣ ಸಂಪಾದನೆ ಮಾಡಿದರೂ ಆರೋಗ್ಯ ಇಲ್ಲದಿದ್ದರೆ ಎಲ್ಲವೂ ವ್ಯರ್ಥ ಎಂದು ಹೇಳಿದರು.
ಬೆಳಗ್ಗೆ 5.30ರಿಂದ 8 ರವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಮತ್ತು ಇತರೆ ಸಮಿತಿಯ ಸದಸ್ಯರುಗಳು ವಿವಿಧ ಯೋಗಾಸನ ಪ್ರದರ್ಶಿಸಿದರು.
ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ, ತಹಶೀಲ್ದಾರ್ ಕೇಶವಮೂರ್ತಿ, ತಾಪಂ ಇಒ ಮುರುಡಯ್ಯ, ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ಜಿಪಂ ಮಾಜಿ ಅಧ್ಯಕ್ಷ ಬಿ.ರಾಜಣ್ಣ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಜಿಲ್ಲಾ ಎಸ್‌ಟಿ ಇಲಾಖೆ ಅಧಿಕಾರಿ ದೀಪಶ್ರೀ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ದೇವಿಕರಾಣಿ, ದೇವನಹಳ್ಳಿ ಎಸ್‌ಐ ಶಿವಕುಮಾರ್,
ಕುಂದಾಣ ವಿಎಸ್‌ಎಸ್‌ಎನ್ ಅಧ್ಯಕ್ಷ ಶ್ರೀನಿವಾಸ್, ಪುರಸಭೆ ಸದಸ್ಯ ಜಿ.ಎ.ರವೀಂದ್ರ, ಚೆ„ತ್ರಾ, ಭಾರತ ಸ್ಕೌಟ್ಸ್ ಮತ್ತು ಗೆ„ಡ್ಸ್ ಮುಖ್ಯ ಆಯುಕ್ತ ಬಿ.ಕೆ.ಶಿವಪ್ಪ, ಜೆಸಿಐ ಅಧ್ಯಕ್ಷ ಹರ್ಷ, ಪತಾಂಜಲಿ ಯೋಗ ಶಿಕ್ಷಣ ಸಮಿತಿ ಮಂಜುನಾಥ್ ಪ್ರಸಾದ್, ಗ್ರಾಪಂ ಸದಸ್ಯ ರಾಮಾಂಜಿನೇಯ ದಾಸ್, ಶಿಕ್ಷಕರ ಸಂಘದ ಉಪಾಧ್ಯಕ್ಷ ಪುಟ್ಟಸ್ವಾಮಿ, ನಿವೃತ್ತ ಶಿಕ್ಷಕ ಶ್ರೀರಾಮಯ್ಯ, ಪ್ರಜಾಪಿತ ಬ್ರಹ್ಮಕುಮಾರಿ ಸಮಾಜದ ಸುಕನ್ಯ ಇದ್ದರು.