Advertisement

ಆರೋಗ್ಯಮಯ ಆನಂದಮಯ : ಜೀವನಕ್ಕೆ ಅತ್ಯವಶ್ಯ ಬೇಕು ಯೋಗ

03:21 AM Jul 02, 2020 | Hari Prasad |

ಅವ್ಯವಸ್ಥಿತ ದಿನಚರಿ, ಕಲುಷಿತ ವಾತಾವರಣ ಮತ್ತು ಶಾರೀರಿಕ ಪರಿಶ್ರಮ ಇಲ್ಲದೇ ನಾವು ಹಲವಾರು ರೋಗಗಳಿಂದ ಬಳಲುತ್ತಿದ್ದೇವೆ. ನಾವು ಸೇವಿಸುವ ಆಹಾರ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ವಿಷಯುಕ್ತವಾಗಿದೆ.

Advertisement

ಅದರಿಂದ ಅತಿ ಚಿಕ್ಕ ವಯಸ್ಸಿನಲ್ಲಿ ಹಲವಾರು ಗಂಭೀರ ಕಾಯಿಲೆಗಳಿಗೆ ಜನರು ತುತ್ತಾಗುತ್ತಿರುವುದು ಕಂಡುಬರುತ್ತಿದೆ. ಇಂತಹ ಸಮಸ್ಯೆಗಳಿಗೆ ರಾಮಬಾಣವೆಂದರೆ ನಿರಂತರ ಯೋಗಾಭ್ಯಾಸ.

ಅವಶ್ಯಕತೆಗಿಂತ ಹೆಚ್ಚು ಆಹಾರ ಸೇವನೆ ಸಹ ಹಲವಾರು ತೊಂದರೆಗಳಿಗೆ ಕಾರಣವಾಗುತ್ತದೆ. ಇದರಿಂದ ದೇಹದಲ್ಲಿ ಬೊಜ್ಜು ಬೆಳೆಯುತ್ತದೆ. ಹೆಚ್ಚು ಆಹಾರ ಸೇವನೆಯಿಂದ ನಾವು ಶಕ್ತಿವಂತರಾಗುತ್ತೇವೆ ಎಂಬ ತಪ್ಪು ಕಲ್ಪನೆಯಿಂದ ನಾವು ಹೊರಬಂದು ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗಿ ದೇಹಕ್ಕೆ ಅವಶ್ಯವಿರುವ ಎಲ್ಲ ವಿಟಮಿನ್ಸ್‌, ಮಿನರಲ್ಸ್‌, ಕ್ಯಾಲ್ಸಿಯಂ ಒದಗಿಸುವ ಸಾತ್ವಿಕ ಆಹಾರ ಪದ್ಧತಿಯನ್ನು ನಾವು ರೂಢಿಸಿಕೊಳ್ಳಬೇಕಿದೆ.

ಸಮಯಕ್ಕೆ ಸರಿಯಾಗಿ ನಿದ್ದೆ, ವ್ಯಾಯಾಮ, ಯೋಗಾಸನ, ಧ್ಯಾನ ಮುಂತಾದವುಗಳ ಅಭ್ಯಾಸ  ಮಾಡುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮತ್ತು ನಮ್ಮ ಜೀವನ ಆರೋಗ್ಯಮಯ, ಆನಂದಮಯ ಮತ್ತು ಯೋಗಮಯವಾಗಲು ಯೋಗಾಭ್ಯಾಸ ಸಹಕಾರಿಯಾಗಿದೆ.

ಒಬ್ಬ ಆರೋಗ್ಯವಂತ ವ್ಯಕ್ತಿಗೆ ಪ್ರತಿದಿನ 6 ರಿಂದ 7 ಗಂಟೆ ನಿದ್ರೆ ಸಾಕು. ಮಕ್ಕಳಿಗೆ 8 ರಿಂದ 9 ಗಂಟೆ ನಿದ್ರೆ ಬೇಕು. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 4 ಗಂಟೆವರೆಗೆ ನಿದ್ರಿಸಲು ತುಂಬಾ ಉತ್ತಮವಾದ ಸಮಯವಾಗಿದೆ. ಬೆಳಿಗ್ಗೆ 4 ಗಂಟೆಯಿಂದ ಪ್ರಾರಂಭವಾಗುವ ಬ್ರಾಹ್ಮಿ ಮುಹೂರ್ತದಲ್ಲಿ ಪ್ರಾಣಾಯಾಮ, ಧ್ಯಾನ ಮಾಡಿದರೆ ಜೀವನದಲ್ಲಿ ನಾವು ಮಾಡಿದ ಸಂಕಲ್ಪಗಳು ಸಾಕಾರಗೊಳ್ಳುತ್ತವೆ ಮತ್ತು ಈ ಅಮೃತ ಘಳಿಗೆಯಲ್ಲಿ ಮಾಡಿದ ಸಾಧನೆ ಸಿದ್ಧಿಯಾಗುತ್ತದೆ.

Advertisement

ಬೆಳಿಗ್ಗೆ ಎದ್ದ ತಕ್ಷಣ ಅರ್ಧ ಲೀಟರ್‌ ಉಗುರು ಬೆಚ್ಚಗಿನ ನೀರು ಕುಡಿಯುವುದು, ಆಹಾರ ಸೇವನೆಯ ಅರ್ಧ ಗಂಟೆ ಮುಂಚಿತವಾಗಿ ನೀರು ಕುಡಿಯುವುದು ಮತ್ತು ಆಹಾರ ಸೇವನೆಯ 1ಗಂಟೆ ನಂತರ ನೀರು ಕುಡಿಯುವುದು, ಮದ್ಯಾಹ್ನ ಮಜ್ಜಿಗೆ ಮತ್ತು ರಾತ್ರಿ ಹಾಲು ಕುಡಿಯುವುದು, ಈ ಮುಂತಾದ ಸೂಕ್ಷ್ಮಸಂಗತಿಗಳು ಉತ್ತಮ ಆರೋಗ್ಯ ಹೊಂದಲು ಸರಳ ಉಪಾಯಗಳಾಗಿವೆ.

ಅಧ್ಯಯನಗಳ ಪ್ರಕಾರ ಕೆಳಗೆ ಕುಳಿತುಕೊಂಡು ನೀರು ಕುಡಿಯುವುದರಿಂದ ಎಸಿಡಿಟಿ, ವಾಯು ವಿಕಾರ ಹಾಗೂ ಮೋಣಕಾಲಿನ ನೋವು ಮುಂತಾದವುಗಳಿಂದ ಪಾರಾಗಬಹುದು. ನೀರು ಕುಡಿಯುವಾಗ ಸ್ವಲ್ಪ ಸ್ವಲ್ಪ ಕುಡಿಯಬೇಕು. ನೀರನ್ನು ಆಹಾರ ಸೇವನೆಯ ತರಹ ನಿಧಾನವಾಗಿ ಕುಡಿಯಬೇಕು. ಆಹಾರ ಸೇವನೆ ತುಂಬಾ ನಿಧಾನವಾಗಿ 32 ಬಾರಿ ಜಗಿದು ತಿನ್ನಬೇಕು. ನೀರನ್ನು ತಿನ್ನಬೇಕು, ಆಹಾರವನ್ನು ಕುಡಿಯಬೇಕು.

ಈ ತರಹ ಆಹಾರ ಸೇವನೆ ಮಾಡುವುದರಿಂದ ಹೆಚ್ಚು ಲಾಲಾ ರಸ ಉತ್ಪನ್ನವಾಗುತ್ತದೆ. ಆಹಾರವನ್ನು ದೇವರ ಪ್ರಸಾದವೆಂದು ತಿಳಿದು ಭಕ್ತಿಯಿಂದ ಸೇವನೆ ಮಾಡಿದಾಗ ಅದರಲ್ಲಿ ಇರುವ ಎಲ್ಲಾ ವಿಟಮಿನ್ಸ್‌, ಪ್ರೊಟಿನ್ಸ್ ಮತ್ತು ಖನಿಜಾಂಶಗಳು ಸಂಪೂರ್ಣವಾಗಿ ನಮ್ಮ ದೇಹಕ್ಕೆ ದೊರಕುತ್ತವೆ ಎಂದು ಪತಂಜಲಿ ಯೋಗ ಪೀಠದ ಕರ್ನಾಟಕ ಪ್ರಭಾರಿ ಯೋಗಾಚಾರ್ಯ ಭವರಲಾಲ್‌ ಆರ್ಯ ತಿಳಿಸುತ್ತಾರೆ.

ಈ ರೀತಿಯ ಇನ್ನೂ ಹಲವಾರು ಆರೋಗ್ಯಕರ ಪದ್ಧತಿಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಪತಂಜಲಿ ಯೋಗ ಪೀಠ ಹರಿದ್ವಾರದ ಪ್ರೇರಣೆಯಿಂದ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಉಚಿತ ಯೋಗ ತರಬೇತಿ ಹಾಗೂ ಆರೋಗ್ಯಮಯ ಜೀವನ ಪದ್ಧತಿಗಾಗಿ ಉಚಿತ ಸಲಹೆ ನೀಡಲಿಕ್ಕೆ ಸದಾ ಸಿದ್ಧವಾಗಿದೆ. ಕೊರೊನಾ ಕಾಯಿಲೆ ತಡೆಗಟ್ಟಲು ಮತ್ತು ಗುಣಪಡಿಸಲು ಪತಂಜಲಿಯ ಕೊರೋನಿಲ್‌ ಮತ್ತು ಎಲ್ಲ ತರಹದ ಶಾರೀರಿಕ ಮತ್ತು ಮಾನಸಿಕ ರೋಗಗಳನ್ನು ನಿವಾರಿಸಲು ಮತ್ತು ಉಚಿತ ಆರೋಗ್ಯ ಸಲಹೆಗಾಗಿ ಪತಂಜಲಿ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಡಿ.

ರಾಜ್ಯದ ಎಲ್ಲ ನಾಗರಿಕರು ಇದರ ಸದುಪಯೋಗ ಪಡೆಯಬೇಕಾಗಿ ವೈದ್ಯರ ದಿನಾಚರಣೆ ಅಂಗವಾಗಿ ಆತ್ಮೀಯ ಆಮಂತ್ರಣ ನೀಡುತ್ತಿದ್ದೇವೆ.


ಪತಂಜಲಿಯ ಎಲ್ಲ ತರಹದ ಉತ್ಪನ್ನಗಳನ್ನು ಮಾರಾಟ ಮಾಡಲು ಮಳಿಗೆಗಳನ್ನು ತೆರೆಯುವ ಇಚ್ಚೆಯುಳ್ಳವರು ಸಂಪರ್ಕಿಸಿ.

Advertisement

Udayavani is now on Telegram. Click here to join our channel and stay updated with the latest news.

Next