Advertisement

ವ್ಯಕ್ತಿತ್ವ ವಿಕಸನಕ್ಕೆ ಯೋಗ ಸಹಕಾರಿ

12:27 PM Jun 22, 2018 | |

ಮೊಳಕಾಲ್ಮೂರು: ವ್ಯಕ್ತಿತ್ವ ವಿಕಸನಕ್ಕೆ ಯೋಗ ಸಹಕಾರಿ ಎಂದು ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ
ಮಠದ ಪೀಠಾಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಕ್ಷರ ಗ್ರಾಮೀಣ ವಿಕಾಸ ಸಂಸ್ಥೆ, ಜನಮುಖೀ ಸೇವಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯೋಗ ಋಷಿ ಮುನಿಗಳಿಂದ ಬಂದ ಬಳುವಳಿ. ಕಠಿಣ ಪರಿಶ್ರಮ, ಮಹಾಪುರುಷರ ಜ್ಞಾನವನ್ನು ಜನರು
ಶ್ರದ್ಧಾ ಭಕ್ತಿಯಿಂದ ಅನುಸರಿಸಬೇಕು. 12ನೇ ಶತಮಾನದ ಶಿವಶರಣರು ಇಷ್ಟ ಲಿಂಗದ ಪರಿಕಲ್ಪನೆಯನ್ನು ಸಮಾಜಕ್ಕೆ
ನೀಡಿದ್ದಾರೆ. ಯೋಗ ಸಮಾಜದ ಎಲ್ಲಾ ಜಾತಿ, ಧರ್ಮ, ವರ್ಗಗಳ ಸ್ವತ್ತು. ದುಶ್ಚಟ ಮತ್ತು ದುವ್ಯಸನಗಳನ್ನು
ತ್ಯಜಿಸಿ ಸದ್ಗುಣಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಪಟ್ಟಣ ಪಂಚಾಯತ್‌ ಅಧ್ಯಕ್ಷ ಜಿ. ಪ್ರಕಾಶ್‌ ಮಾತನಾಡಿ, ಅತ್ಯಂತ ಪರಿಣಾಮಕಾರಿಯಾದ ಯೋಗ ನಮ್ಮ ಪೂರ್ವಿಕರು ವಿಶ್ವಕ್ಕೆ ನೀಡಿದ ಬಹು ದೊಡ್ಡ ಕೊಡುಗೆ. ಅಂದು ಋಷಿ ಮುನಿಗಳು, ರಾಜರು ಹಾಗೂ ಪ್ರಜೆಗಳು ಯೋಗವನ್ನು ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಸ್ವೀಕರಿಸಿದ್ದರು. ಯೋಗದಿಂದ ಉತ್ತಮ ಆರೋಗ್ಯ, ಚೈತನ್ಯ, ಉತ್ಸಾಹ, ಜ್ಞಾನ ದೊರೆತು ಏಕಾಗ್ರತೆ ಬೆಳೆಯುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮ ಸಂಯೋಜಕ ಡಿ.ಒ. ಮುರಾರ್ಜಿ ಮಾತನಾಡಿದರು. ಯೋಗ ಶಿಕ್ಷಕರಾದ ಮಹಾಂತೇಶ್‌
ಗುರೂಜಿ, ಸಂಪತ್‌ಕುಮಾರ್‌ ಯೋಗ ತರಬೇತಿ ನೀಡಿದರು. ಶಾಲೆಯ ಮುಖ್ಯ ಶಿಕ್ಷಕ ನಾಗರಾಜ, ಶಿಕ್ಷಕರಾದ ಒ. ಕರಿಬಸಪ್ಪ, ರಾಜು, ದಸ್ತಗಿರಿ, ಅಕ್ಷರ ಗ್ರಾಮೀಣ ಸಂಸ್ಥೆಯ ಎಸ್‌. ಪರಮೇಶ್‌, ಗಾಯಕರಾದ ಮಾರೇಶ್‌, ಡಿ.ಬಿ. ನಿಂಗರಾಜ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next