ದೇರಳಕಟ್ಟೆ: ಮಾನಸಿಕ ಒತ್ತಡಗಳಿಂದ ಹಿಡಿದು ಕ್ಯಾನ್ಸರ್ ತಡೆಗಟ್ಟುವಿಕೆಗೆ ಯೋಗಾಭ್ಯಾಸ ಪರಿಣಾಮಕಾರಿಯಾಗಿದೆ. ನಿರಂತರ ಯೋಗಾಭ್ಯಾಸದಿಂದ ಜೀವನ ಶೈಲಿಯಲ್ಲಿ ಬದಲಾವಣೆಯಾಗಿ, ದುರಾಭ್ಯಾಸಗಳನ್ನು ದೂರವಾಗಿಸಲು ಸಾಧ್ಯ ಎಂದು ನಿಟ್ಟೆ ಪರಿಗಣಿಸಲ್ಪಟ್ಟಿರುವ ವಿವಿಯ ಉಪಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ ಹೇಳಿದರು.
ಯೇನಪೊಯ ಪರಿಗಣಿಸಲ್ಪಟ್ಟಿರುವ ವಿಶ್ವವಿದ್ಯಾನಿಲಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಮ್ಯಾರಥಾನ್ ಯೋಗ ಬೋಧನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಯೋಗ ಕುರಿತು ಒಂದು ಕಾಲದಲ್ಲಿ ಬಹಳಷ್ಟು ತಪ್ಪು ತಿಳುವಳಿಕೆಗಳು ಇದ್ದವು. ಅದೊಂದು ಧಾರ್ಮಿಕ ಸಂಬಂಧಿಸಿದ ವಿಚಾರವಲ್ಲ, ಜೀವನದ ಅವಶ್ಯ ಅಂಗ ಅನ್ನುವುದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಘೋಷಣೆಯಾದ ಬಳಿಕ ಅರಿವು ಮೂಡಿದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ| ಶೋಭಾರಾಣಿ ಮಾತನಾಡಿ, ಜೀವ ಮತ್ತು ಮನಸ್ಸನ್ನು ಒಗ್ಗೂಡಿಸಲು ಯೋಗ ಸಹಕಾರಿ. ಯೋಗ ಚಿಕಿತ್ಸೆಯಿಂದ ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ಗಟ್ಟಿಗೊಳಿಸುತ್ತದೆ ಎಂದರು.
ಯೇನಪೊಯ ವಿವಿ ಕ್ಯಾಂಪಸ್‌ನ ಎಂಡ್ಯೂರೆನ್ಸ್ ಸಭಾಂಗಣದಲ್ಲಿ ಕುಶಾಲಪ್ಪ ಗೌಡ ನೇತೃತ್ವದಲ್ಲಿ 15 ಗಂಟೆಗಳ ಮ್ಯಾರಥಾನ್ ಯೋಗ ಬೆಳಗ್ಗೆ 5 ಗಂಟೆಯಿಂದ ಆರಂಭಗೊಂಡು ಸಂಜೆ 8 ಗಂಟೆ ಯವರೆಗೆ ನಡೆದ ಒಂದೂವರೆ ಗಂಟೆ ಅವಧಿಯ ತರಬೇತಿಯಲ್ಲಿ ವಿದ್ಯಾರ್ಥಿಗಳು, ಸಿಬಂದಿಗಳು, ಸಹಿತ ಸಾವಿರಕ್ಕೂ ಮಿಕ್ಕೂ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಆಯುಷ್ ಬಿಡುಗಡೆಗೊಳಿಸಿದ ಯೋಗಾಭ್ಯಾಸದ ಶಿಷ್ಟಾಚಾರದಂತೆ ತರಬೇತಿ ನಡೆಯಿತು.
15 ಗಂಟೆ ಮ್ಯಾರಥಾನ್ ಯೋಗ