Advertisement

ಕಾಯಿಲೆಗೆ ಯೋಗವೇ ರಾಮಬಾಣ

03:20 PM Jun 23, 2018 | Team Udayavani |

ಬೀದರ: ಜಾಗತಿಕ ಭೀಕರ ಕಾಯಿಲೆಗಳಿಗೆ ಯೋಗ ರಾಮಬಾಣವಾಗಿದೆ ಎಂಬುದನ್ನು ಜಗತ್ತಿನ 200ಕ್ಕೂ ಅಧಿಕ ದೇಶಗಳು ಒಪ್ಪಿಕೊಂಡಿರುವುದು ಅಭಿಮಾನದ ಸಂಗತಿ ಎಂದು ಯೋಗ ಶಿಕ್ಷಕ ಯೋಗೇಂದ್ರ ಯದಲಾಪುರೆ ಹೇಳಿದರು.

Advertisement

ನಗರದ ಜನವಾಡಾ ರಸ್ತೆಯ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಭಾರತ ಸರಕಾರದ ನೆಹರು ಯುವ ಕೇಂದ್ರ ಹಾಗೂ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಯೋಗ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಬೀದರ ತಾಲೂಕು ಮಟ್ಟದ ನೆರೆ ಹೊರೆ ಯುವಜನ ಸಂಸತ್ತು ಕಾರ್ಯಕ್ರಮದಲ್ಲಿ ಯೋಗಾಭ್ಯಾಸ ಮಾಡಿಸಿ ಅವರು ಮಾತನಾಡಿದರು.

ಯೋಗವಿಲ್ಲದ ಜೀವನ ನರಕಕ್ಕೆ ಸಮಾನ. ಯೋಗವೇ ಎಲ್ಲ ಸಮಸ್ಯೆಗಳಿಗೆ ಮದ್ದು. ಉತ್ಸಾಹ ಹಾಗೂ ಹುಮ್ಮಸ್ಸು ವೃದ್ಧಿಯಾಗಲು ಯೋಗಾಸನಗಳು ಪುಷ್ಟಿ ನೀಡಬಲ್ಲವು. ದೇಹಕ್ಕೆ ಆರೋಗ್ಯ ಒದಗಿಸುವುದಲ್ಲದೆ ಮನಸ್ಸಿಗೆ ಹಿತ ನೀಡುವ, ಯಾವುದೇ ಮಾತ್ರೆಗಳನ್ನು ನುಂಗದ ಔಷಧ ಇದಾಗಿದೆ. ಸದೃಢ ಯುವಜನಾಂಗ ರೂಪುಗೊಳ್ಳಲು
ಯೋಗ ಹಾಗೂ ಪ್ರಾಣಾಯಾಮ ಅಗತ್ಯವಾಗಿದೆ ಎಂದು ಹೇಳಿದರು.

ಕರುನಾಡು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್‌ ಅಧ್ಯಕ್ಷ ಶಾಮರಾವ ನೆಲವಾಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಾನವಿಯ ಮೌಲ್ಯಗಳು ಹಾಗೂ ಭಾವನಾತ್ಮಕ ದೃಷ್ಟಿಕೋನ ಬೆಳೆಯಲು ಯೋಗ ಸಹಕಾರಿಯಾಗಿದೆ. ಪ್ರತಿನಿತ್ಯ ಕುಟುಂಬ ಸಮೇತ ಎಲ್ಲರೂ ಯೋಗ ಮಾಡುವ ಅಭ್ಯಾಸಬೆಳೆಸಿಕೊಳ್ಳಬೇಕು ಎಂದರು.

ಕರ್ನಾಟಕ ಕಾಲೇಜಿನ ಅತಿಥಿ ಉಪನ್ಯಾಸಕಿ ಡಾ| ಮಹಾನಂದಾ ಮಡಕಿ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ
ಯುವಜನರ ಪಾತ್ರ ಮುಖ್ಯವಾಗಿದೆ. ಪ್ರತಿ ತಲೆಗೊಂದು ಸಸಿ ನೆಡುವ ಅವಶ್ಯಕತೆ ಇದೆ. ಪ್ಲಾಸ್ಟಿಕ್‌ ಸಂಸ್ಕೃತಿ ದಮನ ಮಾಡಲು ಮುಂದಾಗಿರುವ ಜಿಲ್ಲಾಡಳಿತಕ್ಕೆ ನಾವೆಲ್ಲರು ಕೈ ಜೋಡಿಸಬೇಕಾಗಿದೆ ಎಂದರು. ಅಕ್ಕ ಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷೆ ಸಾವಿತ್ರಿಬಾಯಿ ಹೆಬ್ಟಾಳೆ, ವಸತಿ ನಿಲಯದ ಮೇಲ್ವಿಚಾರಕಿ ವಿಜಯಕುಮಾರಿ ಬಿರಾದಾರ ಮಾತನಾಡಿದರು. ಕರ್ನಾಟಕ ಜಾನಪದ ಪರಿಷತ್‌ ತಾಲೂಕು ಘಟಕದ ಸದಸ್ಯ ಮಹಾರುದ್ರ ಡಾಕುಳಗಿ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪೂರ, ಧನರಾಜ, ರಾಜಕುಮಾರ ಹೆಬ್ಟಾಳೆ, ಸವಿತಾ ಸಾಕುಳೆ, ಮಾಣಿಕಾದೇವಿ ಪಾಟೀಲ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next