ನವದೆಹಲಿ: ಜೂನ್ 21ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲೇ ನಡೆಯುವ ಬೃಹತ್ ಯೋಗ ಕಾರ್ಯಕ್ರಮವನ್ನು ಆಯೋಜಿಸುವ ಅವಕಾಶವು ಈ ಬಾರಿಯೂ ಮೈಸೂರಿನ ಕೈತಪ್ಪಿದೆಯೇ? ಹೌದು ಎನ್ನುತ್ತಿದೆ ಕೇಂದ್ರ ಸರ್ಕಾರದ ಮೂಲಗಳು.
ಕೇಂದ್ರ ಆಯುಷ್ ಸಚಿವಾಲಯವು ಮೈಸೂರು, ದೆಹಲಿ, ಶಿಮ್ಲಾ, ಅಹಮದಾಬಾದ್ ಮತ್ತು ರಾಂಚಿ ನಗರಗಳ ಹೆಸರನ್ನು ಶಿಫಾರಸು ಮಾಡಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಿತ್ತು. ಆದರೆ, ಪ್ರಧಾನಿ ಕಾರ್ಯಾಲಯವು ಈ 5 ನಗರಗಳ ಪೈಕಿ ರಾಂಚಿಯನ್ನು ಆಯ್ಕೆ ಮಾಡಿದ್ದು, ಅದೇ ನಗರದಲ್ಲಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದು ನಿಜವೆಂದಾದರೆ, ಕಳೆದ ವರ್ಷದಂತೆ ಈ ಬಾರಿಯೂ ಅರ ಮನೆಗಳ ನಗರಿ ಮೈಸೂರಿಗೆ ಅವಕಾಶ ಕೈತಪ್ಪಿದಂತಾಗಲಿದೆ.
Advertisement
ಕಳೆದ ವರ್ಷ ಯೋಗ ದಿನದ ಪ್ರಧಾನ ಕಾರ್ಯಕ್ರಮವು ಡೆಹ್ರಾಡೂನ್‌ನಲ್ಲಿ ನಡೆದಿತ್ತು. ಅದಕ್ಕೂ ಮೊದಲಿನ ವರ್ಷಗಳಲ್ಲಿ ಲಕ್ನೋ, ಚಂಡೀಗಡ ಹಾಗೂ ದೆಹಲಿಯ ರಾಜಪಥ್‌ನಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು.