ಕುಷ್ಟಗಿ : ಶಾಲಾ, ಕಾಲೇಜು, ಮನೆ ಮನೆಗೂ ಸಾರ್ವಜನಿಕ ಶಿಬಿರಗಳಿಗೆ ನಿರಂತರ ಯೋಗ ಶಿಕ್ಷಣದ ಮೂಲಕ ಮನೆ ಮಾತಾಗಿರುವ ಪಂಕಜ್, ಕುಷ್ಟಗಿ ತಾಲೂಕಿನಲ್ಲಿ ಪತಂಜಲಿ ಪಂಕಜ್ ಎಂದೇ ಗುರುತಿಸಿಕೊಂಡಿರುವ ಯೋಗ ಶಿಕ್ಷಣಕ್ಕಾಗಿ ತಮ್ಮ ಜೀವನ ಸಮರ್ಪಿಸಿಕೊಂಡಿದ್ದಾರೆ.
ಪಂಕಜ್ ಕುಮಾರ ವಿಶ್ವಾಸ್ ಮೂಲತಃ ಸಿಂಧನೂರು ತಾಲೂಕಿನ ಬಂಗಾಲಿ ಕ್ಯಾಂಪ್ ನಿವಾಸಿ. ಇವರ ಹಿರಿಯರು ಪಾಕೀಸ್ತಾನ ವಿಭಜನೆ ವೇಳೆ ಪ್ರಾತ್ಯೇಕತವಾದಿಗಳಿಗೆ ಸಿಲುಕಿ, ಅಲ್ಲಿಂದ ಸಿಂಧನೂರ ಕ್ಯಾಂಪ್ ನಲ್ಲಿ ಆಶ್ರಯಿಗಳಾಗಿದ್ದಾರೆ. ಪ್ರಶಾಂತಕುಮಾರ, ದೇವಿರಾಣಿ ಪುತ್ರರಾಗಿರುವ ಪಂಕಜ್ ಪಿಯುಸಿ ವಿಜ್ಞಾನ ದ್ವಿತೀಯ ವರ್ಷ ನಂತರ ನರ್ಸಿಂಗ್ ಹಾಗೂ ಜನಪದ ವೈದ್ಯ ಕೋರ್ಸ ಮುಗಿಸಿದ್ದಾರೆ.
ಅಲಬನೂರಿನಲ್ಲಿ ಪ್ರೌಢಶಾಲಾ ಶಿಕ್ಷಣದ ವೇಳೆ ದೈಹಿಕ ಶಿಕ್ಷಕ ಚೌಡಪ್ಪ ಅವರಿಂದ ಪ್ರಭಾವಿತರಾಗಿದ್ದರು. ವಿದ್ಯಾರ್ಥಿ ದಿಸೆಯಲ್ಲಿ ಪತಂಜಲಿ ಪುಸ್ತಕ ಖರೀಧಿಸಿದ್ದರಂತೆ. ಪತ್ನಿ ರಾಮವ್ವ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕುಷ್ಟಗಿ ಘಟಕದ ಬಸ್ ನಿರ್ವಾಹಕಿಯಾಗಿರುವ ಹಿನ್ನೆಲೆಯಲ್ಲಿ ಕಳೆದ 12 ವರ್ಷಗಳಿಂದ ಕುಷ್ಟಗಿ ಯಲ್ಲಿದ್ದಾರೆ. ಸದ್ಯ ನಿಲ್ದಾಣ ನಿಯಂತ್ರಕರಾಗಿರುವ ಅವರಪತ್ನಿ ಕೆಲಸಕ್ಕೆ ಹೋದಾಗ ಇಬ್ಬರು ಮಕ್ಕಳ ಆರೈಕೆಯ ಜೊತೆಯಲ್ಲಿ ಯೋಗದ ಪ್ರಚಾರಕ ಹಾಗೂ ಯೋಗ ಶಿಕ್ಷಣಕ್ಕೆ ತಮ್ಮ ಜೀವನ ಸಮರ್ಪಿಸಿಕೊಂಡಿದ್ದಾರೆ. ಸೌಮ್ಯ ಸ್ವಭಾವದ ಪಂಕಜ್ ಅವರು, ಯೋಗ ಶಿಕ್ಷಣವನ್ನು ಸ್ವಂತ ಖರ್ಚಿನಲ್ಲಿ ಹರಿದ್ವಾರದಲ್ಲಿ ಬಾಬಾ ರಾಮದೇವ ಸಮ್ಮುಖದಲ್ಲಿ ಯೋಗ ಶಿಬಿರದಲ್ಲಿ ಶಿಬಿರಾರ್ಥಿಯಾಗಿ ಯೋಗ ಕಲಿತಿರುವ ಪಂಕಜ್ ಕರ್ನಾಟಕ ಪತಂಜಲಿ ಯೋಗಪೀಠದ ರಾಜ್ಯ ಪ್ರಭಾರಿ ಭವಾರಿಲಾಲ್ ಆರ್ಯ ಹಾಗೂ ಕುಷ್ಟಗಿ ಯ ವೀರೇಶ ಬಂಗಾರಶೆಟ್ಟರ್, ಅಚಲಾರಾಂ ಅವರು ಮಾರ್ಗದರ್ಶಕರಾಗಿದ್ದಾರೆ.
ಪ್ರತಿ ದಿನ ಶಾಲಾ,ಕಾಲೇಜು ಸೇರಿದಂತೆ ಮನೆ ಮನೆಗೂ ಯೋಗ ಶಿಕ್ಷಣವನ್ನು ಸಮರ್ಪಣಾಭಾವದಿಂದ ನಿರ್ವಹಿಸುತ್ತಿದ್ದರಲ್ಲದೇ ಆಯುರ್ವೈದ ಉತ್ಪನ್ನಗಳ ಜಾಗೃತಿ, ಮಾರಾಟ ಮಾಡುತ್ತಿದ್ದಾರೆ.
ಈ ಕುರಿತು ಯೋಗ ಸಾಧಕ ಪಂಕಜ್ ಕುಮಾರ್ ವಿಶ್ವಾಸ್ ಪ್ರತಿಕ್ರಿಯಿಸಿ ಎಲ್ಲಾ ಬಗೆಯ ಯೋಗಾಸನ ಕಲಿತು, ಜನರಿಗೆ ಯೋಗ ಶಿಕ್ಷಣದಲ್ಲಿ ಸಂತೃಪ್ತಿ ಕಂಡುಕೊಂಡಿದ್ದೇನೆ. ಯೋಗದಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾದ್ಯವಿದ್ದು ಇದಕ್ಕಾಗಿ ಅಳಿಲು ಸೇವೆಯನ್ನು ಸಮರ್ಪಣಾ ಮನೋಭಾವದಿಂದ ನಿರ್ಮಿಸುತ್ತಿದ್ದೇನೆ ಎಂದರು.
– ಮಂಜುನಾಥ ಮಹಾಲಿಂಗಪುರ