Advertisement

Yoga Day: ಮಹಿಳೆಯರ ಆರೋಗ್ಯ, ಸ್ವಾವಲಂಬಿ ಬದುಕಿಗೆ ಪೂರಕ ಯೋಗ

10:49 PM Jun 20, 2024 | Team Udayavani |

“ಮಹಿಳಾ ಸಶಕ್ತೀಕರಣಕ್ಕೆ ಯೋಗ’ ಎಂಬ ಧ್ಯೇಯದೊಂದಿಗೆ ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಯೋಗದ ಶಬ್ದದ ಅರ್ಥವೇ ಮಾನವ ಪ್ರಜ್ಞೆ ಮತ್ತು ಪರ ಮಾತ್ಮನ ಅರಿವು. ಸಶಕ್ತೀಕರಣವೆಂದರೆ ಸ್ವಸಾ ಮರ್ಥ್ಯದ ಅರಿವು ಹಾಗೂ ಪ್ರಜ್ಞಾಪೂರ್ವಕವಾಗಿ ನಿರ್ಧಾರ ತೆಗೆದುಕೊಂಡು, ತಾನು ಅಭಿವೃದ್ಧಿ ಯಾಗುವುದರೊಂದಿಗೆ ಸರ್ವರ ಶ್ರೇಯಸ್ಸಿಗೆ ಶ್ರಮಿಸುವುದಾಗಿದೆ. ಮಹಿಳೆ ವಿಶೇಷವಾಗಿ ತನ್ನ ಹಾಗೂ ತನ್ನ ಪರಿವಾರದ ಕಾಳಜಿಯನ್ನು ಮನೆಯ ಲ್ಲಿಯೂ, ಸಮಾಜದಲ್ಲಿಯೂ ನಿರ್ವಹಿಸಿದರೆ ಎಲ್ಲರ ಬಾಳು ನೆಮ್ಮದಿ, ಸಾಮರಸ್ಯ, ಶಾಂತಿಯಿಂದ ಕೂಡಿರಬಹುದು. ಸ್ವತಂತ್ರ, ಸ್ವಾವಲಂಬಿ ಬದುಕು ಕಟ್ಟಲು ಯೋಗವು ಒಂದು ದಾರಿಯಾಗಬೇಕು. ಯೋಗ ಶಿಕ್ಷಕಿಯಾಗಿ, ಚಿಕಿತ್ಸಕಿಯಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಯೋಗದ ಸೊÌàದ್ಯೋಗ ಹಾಗೂ ಯೋಗ ಸಂಬಂಧಿ ಉದ್ಯಮವನ್ನು ಮಹಿಳೆ ಯರು ನಡೆಸಬಹುದು. ವೈಯಕ್ತಿಕ ಆರೋಗ್ಯ, ಸಂಸಾರದ ಆರೋಗ್ಯ ಹಾಗೂ ಸಾಮಾಜಿಕ ಆರೋಗ್ಯ ಕಾಪಾಡಲು ಯೋಗ ಒಂದು ಉಪ ಯುಕ್ತ ವಿದ್ಯೆಯಾಗಿದೆ.

Advertisement

ಮಹಿಳೆಯರ ಸಾಧನೆ, ಯಶೋಗಾಥೆ, ಇತರ ರಿಗೆ ಪ್ರೇರಣಾದಾಯಕವಾದ ಮಹಿಳೆಯರನ್ನು ಗುರುತಿಸುವುದೇ ಮಹಿಳಾ ಸಶಕ್ತೀಕರಣ. ಪ್ರತೀ ಮನೆಯಲ್ಲಿಯೂ ಪ್ರತೀ ಮಹಿಳೆಯೂ ಇತರರಿಗೆ ಪ್ರೇರಣೆ, ಮನೆಯಲ್ಲಿ ಮಹಿಳೆಯೊಬ್ಬರು ಕಲಿತರೆ ನಿರ್ಧಾರಕರು, ಪ್ರಧಾನ ಚಿಂತಕರು. ಮನೆಯ ಮಹಿಳೆ ಆರೋಗ್ಯವಾಗಿದ್ದರೆ, ಇಡೀ ಕುಟುಂಬಕ್ಕೆ ನೆಮ್ಮದಿ. ಮಹಿಳೆಯರ ಆರೋಗ್ಯವೆಂದರೆ ಕೇವಲ ದೈಹಿಕ ಕ್ಷಮತೆ ಮಾತ್ರವಲ್ಲದೆ, ಮಾನಸಿಕ ಸ್ಥಿತಿ, ತಾಳ್ಮೆ, ಸಹನೆ, ಪ್ರಶಾಂತತೆ, ಎಲ್ಲವನ್ನು ಸಮಭಾ ವದಿಂದ ಸರಿದೂಗಿಸುವ ಬುದ್ಧಿವಂತಿಕೆ, ಭವಿಷ್ಯತ್ತಿನ ಚಿಂತನೆ ಇವೆಲ್ಲವೂ ಆರೋಗ್ಯದ ಭಾಗವೇ ಆಗುತ್ತದೆ. ಇನ್ನು ಆಧ್ಯಾತ್ಮಿಕ ಚಿಂತನೆ ಮತ್ತು ಆಚರಣೆ ಮನೆಯ ಸಮೃದ್ಧಿಗೆ ಪೂರಕವಾದಂತೆ.

ಮಹಿಳೆಯರಿಗೆ ಯೋಗದ ಪ್ರಯೋಜನಗಳನ್ನು ಹಲವಾರು ಶಾಸ್ತ್ರೀಯ ಗ್ರಂಥಗಳಲ್ಲಿ ವಿಮರ್ಶಿ ಸಲಾಗಿದೆ. ಯೋಗ ಯಾವ ಯಾವ ಹಂತದಲ್ಲಿ ಮಹಿಳೆಯರಿಗೆ ಪ್ರಯೋಜನವಾಗಬಲ್ಲದು ಎಂದು ತಿಳಿಯೋಣ.

ಸಾಧಕಿಯರಿಗೆ ಯೋಗ: ಸಮಾಜದಲ್ಲಿ ಸಾಧಕ ರಾಗಿ ಗುರುತಿಸಲ್ಪಡುವವರ ಹಿಂದೆ ಇರುತ್ತದೆ ದಿನನಿತ್ಯದ ಬದುಕಿನ ಜೀವನ ಶೈಲಿ. “ತಪಸ್ಸಿನ’ ರೀತಿಯಲ್ಲಿ ತಮ್ಮ ಕಾರ್ಯದಲ್ಲಿ ತೊಡಗಿಸಿ ಕೊಂಡಾಗ ಮಾತ್ರ ಅವರ ಕಾರ್ಯ ಸಾಧನೆ ಯಾಗುತ್ತದೆ. ದೇಹದ ಆರೋಗ್ಯ ಕಾಪಾಡಲು ಯೋಗಾಭ್ಯಾಸದ ಶುದ್ಧೀಕರಣ ಕ್ರಿಯೆ, ಯೋಗಾ ಸನಗಳು, ಬಂಧ, ಮುದ್ರಾಗಳು ಸಹಕಾರಿ. ಮಾನಸಿಕ ಸ್ಥಿರತೆಯನ್ನು ಹೊಂದಲು ಪ್ರಾಣಾ ಯಾಮವನ್ನು ಪರಿಣಾಮಕಾರಿಯಾಗಿ ಬಳಸಿ ಕೊಳ್ಳಬಹುದು.

ಸೌಂದರ್ಯ ಪ್ರಜ್ಞೆಗೆ ಯೋಗ: ಮಹಿಳೆಯರು ಸೌಂದರ್ಯ ಪ್ರಿಯರು. ಅವರ ಸೌಂದರ್ಯ ಪ್ರಜ್ಞೆಗೆ ಯೋಗವು ಒಂದು ಸಾಧನವಾಗಬಲ್ಲುದು. ಮಹಿಳೆಯರಲ್ಲಿ ಎರಡು ರೀತಿಯ ಸೌಂದರ್ಯ ಕಾಣಬಹುದು. ಒಂದು ಆಂತರಿಕ ಸೌಂದರ್ಯ ಗಳಾದ ತಾಳ್ಮೆ, ಸಹನೆ, ಸಹಾನುಭೂತಿ, ಮಮಕಾರ, ಪ್ರೀತಿ, ವಾತ್ಸಲ್ಯ ಇತ್ಯಾದಿ ಗುಣಗಳು; ಇನ್ನೊಂದು ಬಾಹ್ಯ ಸೌಂದರ್ಯ ಎಂದರೆ, ದೇಹದ ಮೈಕಟ್ಟು, ಮುಖದ ಹೊಳಪು ಮತ್ತು ಅಂಗಾಗಳ ಕ್ಷಮತೆಯೂ ಸೌಂದರ್ಯದ ಭಾಗವಾಗುತ್ತದೆ. ನಿತ್ಯ ಸೂರ್ಯ ನಮಸ್ಕಾರ ಮಾಡುವುದು, ಹಲವಾರು ಯೋಗಾ ಸನಗಳನ್ನು ನಿತ್ಯ ಅಭ್ಯಾಸ ಮಾಡಿದರೆ, ದೇಹದ ಮಾಂಸಖಂಡಗಳು ಸದೃಢವಾಗಿದ್ದು, ಮುಖ ಚರ್ಯೆ ಹೊಳಪಿನಿಂದ ಕೂಡಿದ್ದು, ಅಂಗಾಂಗಗಳು ಸುಸ್ಥಿತಿಯಲ್ಲಿರುತ್ತವೆ.

Advertisement

ಉದ್ಯೋಗಸ್ಥೆಯರಿಗೆ ಯೋಗ: ಗೃಹಿಣಿಯ ರಿಂದ ಪ್ರಾರಂಭವಾಗಿ ಉನ್ನತ ಅಧಿಕಾರಿಣಿಯ ರಾಗಿ ಮಹಿಳೆಯರೆಲ್ಲರೂ ಉದ್ಯೋಗಸ್ಥರೇ. ಇಂತಹ ಮಹಿಳೆಯರು ಮೂರು ರೀತಿಯ ಒತ್ತಡದಲ್ಲಿರುತ್ತಾರೆ. ಒಂದನೆಯದು ಕುಟುಂಬದ ಜವಾಬ್ದಾರಿ, ಎರಡನೆಯದು ಕೆಲಸದ ನಿರ್ವಹಣೆ, ಮೂರನೆಯದ್ದು ಆರೋಗ್ಯ ನಿರ್ವಹಣೆ. ಈ ಮೂರು ವಿಷಯವನ್ನು ಕೌಶಲಯುಕ್ತವಾಗಿ ನಿರ್ವಹಿಸಿದಾಗ ಮಹಿಳೆಯರು ಸಾರ್ಥಕವಾಗಿ ಬದುಕಬಲ್ಲರು. ನಿತ್ಯ ಯೋಗಾಭ್ಯಾಸದ ಅನುಷ್ಠಾನ ಮಾಡಿದಾಗ ಮಹಿಳೆಯರು ಉದ್ಯೋಗದೊಂದಿಗೆ ತಮ್ಮ ಆರೋಗ್ಯ ಕಾಪಾಡುವುದರ ಜತೆಯಲ್ಲಿ ಸಾಂಸಾರಿಕ ಜವಾಬ್ದಾರಿಯನ್ನು ನಿರ್ವಹಿಸಬಲ್ಲರು.

ಯೋಗದಲ್ಲಿನ ಉದ್ಯೋಗಾವಕಾಶ: ಇಂದು ಯೋಗ ವಿಜ್ಞಾನದ ಅಧ್ಯಯನ ಪೂರೈಸಿಕೊಂಡು ಯೋಗ ಶಿಕ್ಷಕಿ, ಯೋಗ ತರಬೇತುದಾರರು, ಯೋಗ ಚಿಕಿತ್ಸಕರು, ಯೋಗ ಉಪನ್ಯಾಸಕಿಯರು, ಯೋಗ ಸಂಶೋಧಕರಾಗಿ ಮಹಿಳೆಯರು ತೊಡಗಿ ಸಿಕೊಂಡಿರುವುದು ಗಮನಾರ್ಹ ಸಂಗತಿ. ಅತೀ ಕಡಿಮೆ ಬಂಡವಾಳದಲ್ಲಿ ತಮ್ಮದೇ ಸ್ವಂತ ಯೋಗ ತರಬೇತಿ ಯಾ ಚಿಕಿತ್ಸಾ ಕೇಂದ್ರ ಪ್ರಾರಂಭಿಸಿ ಉತ್ತಮ ಸಂಪಾದನೆ ಮಾಡಬಹುದಾದ ಒಂದು ವೃತ್ತಿ ಯೋಗವಾಗಿದೆ. ಒಟ್ಟಿನಲ್ಲಿ ಯೋಗ ವೃತ್ತಿಯೂ ಮಹಿಳೆಯರಿಗೆ ವೈಯಕ್ತಿಕ ಮತ್ತು ಸಂಪಾದನೆಗೆ ಒಂದು ಉಪಯುಕ್ತ ಕ್ಷೇತ್ರವಾಗಿದೆ.

ಗರ್ಭಿಣಿಯರಿಗೆ ಯೋಗದ ಪ್ರಯೋಜನ: ಸರಳವಾದ ಆಯ್ದ ಯೋಗಾಸನಗಳು, ಪ್ರಾಣಾ ಯಾಮ, ಧ್ಯಾನದ ಅಭ್ಯಾಸ ಗರ್ಭಿಣಿಯರಿಗೆ ತುಂಬಾ ಪ್ರಯೋಜನ ನೀಡುವುದರೊಂದಿಗೆ ಮಗುವಿನ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ದೇಹ ತೂಕ ನಿರ್ವಹಣೆಯಿಂದ ಸಾಮಾನ್ಯ ಹೆರಿಗೆ ಸಾಧ್ಯ. ಪ್ರಸವಾನಂತರದ  ಸಮಸ್ಯೆಗಳಿಗೂ ಯೋಗ ಪರಿಹಾರ ನೀಡಬಲ್ಲದು. ಅಷ್ಠಾಂಗ ಯೋಗದ ಯಮ, ನಿಯಮದ ಅನುಷ್ಠಾನ ಮಗುವಿನಲ್ಲಿ ಧನಾತ್ಮಕ ಗುಣಗಳನ್ನು ಮೂಡಿಸಬಲ್ಲದು.

ಮಹಿಳೆಯರಲ್ಲಿ ಕಂಡುಬರುವ ಮತ್ತೂಂದು ಸಮಸ್ಯೆಯೆಂದರೆ ಮೆನೋಪಾಸ್‌. ದೇಹದ ತಾಪಮಾನದಲ್ಲಿ ವ್ಯತ್ಯಾಸ, ಶೀತ, ತಲೆನೋವು, ರಾತ್ರಿ ಬೆವರುವಿಕೆ, ದೇಹ ತೂಕ ಹೆಚ್ಚಳ, ಜೀರ್ಣ‌ ಕ್ರಿಯೆ ನಿಧಾನವಾಗುವುದು ಮತ್ತು ಮಾನಸಿಕ ವೇದ ನೆಗಳಿಗೆ ಯೋಗಾಭ್ಯಾಸ ಒಂದು ಪರಿಣಾ ಮಕಾರಿ ಚಿಕಿತ್ಸಾ ಕ್ರಮ. ಒಟ್ಟಿನಲ್ಲಿ ಮಹಿಳೆಯರ ಆರೋಗ್ಯವು ಕುಟುಂಬದ ಆರೋಗ್ಯಕ್ಕೆ ಮಾದರಿ.

-ಕುಶಾಲಪ್ಪ ಗೌಡ ಎನ್‌,ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next