Advertisement
ಮಹಿಳೆಯರ ಸಾಧನೆ, ಯಶೋಗಾಥೆ, ಇತರ ರಿಗೆ ಪ್ರೇರಣಾದಾಯಕವಾದ ಮಹಿಳೆಯರನ್ನು ಗುರುತಿಸುವುದೇ ಮಹಿಳಾ ಸಶಕ್ತೀಕರಣ. ಪ್ರತೀ ಮನೆಯಲ್ಲಿಯೂ ಪ್ರತೀ ಮಹಿಳೆಯೂ ಇತರರಿಗೆ ಪ್ರೇರಣೆ, ಮನೆಯಲ್ಲಿ ಮಹಿಳೆಯೊಬ್ಬರು ಕಲಿತರೆ ನಿರ್ಧಾರಕರು, ಪ್ರಧಾನ ಚಿಂತಕರು. ಮನೆಯ ಮಹಿಳೆ ಆರೋಗ್ಯವಾಗಿದ್ದರೆ, ಇಡೀ ಕುಟುಂಬಕ್ಕೆ ನೆಮ್ಮದಿ. ಮಹಿಳೆಯರ ಆರೋಗ್ಯವೆಂದರೆ ಕೇವಲ ದೈಹಿಕ ಕ್ಷಮತೆ ಮಾತ್ರವಲ್ಲದೆ, ಮಾನಸಿಕ ಸ್ಥಿತಿ, ತಾಳ್ಮೆ, ಸಹನೆ, ಪ್ರಶಾಂತತೆ, ಎಲ್ಲವನ್ನು ಸಮಭಾ ವದಿಂದ ಸರಿದೂಗಿಸುವ ಬುದ್ಧಿವಂತಿಕೆ, ಭವಿಷ್ಯತ್ತಿನ ಚಿಂತನೆ ಇವೆಲ್ಲವೂ ಆರೋಗ್ಯದ ಭಾಗವೇ ಆಗುತ್ತದೆ. ಇನ್ನು ಆಧ್ಯಾತ್ಮಿಕ ಚಿಂತನೆ ಮತ್ತು ಆಚರಣೆ ಮನೆಯ ಸಮೃದ್ಧಿಗೆ ಪೂರಕವಾದಂತೆ.
Related Articles
Advertisement
ಉದ್ಯೋಗಸ್ಥೆಯರಿಗೆ ಯೋಗ: ಗೃಹಿಣಿಯ ರಿಂದ ಪ್ರಾರಂಭವಾಗಿ ಉನ್ನತ ಅಧಿಕಾರಿಣಿಯ ರಾಗಿ ಮಹಿಳೆಯರೆಲ್ಲರೂ ಉದ್ಯೋಗಸ್ಥರೇ. ಇಂತಹ ಮಹಿಳೆಯರು ಮೂರು ರೀತಿಯ ಒತ್ತಡದಲ್ಲಿರುತ್ತಾರೆ. ಒಂದನೆಯದು ಕುಟುಂಬದ ಜವಾಬ್ದಾರಿ, ಎರಡನೆಯದು ಕೆಲಸದ ನಿರ್ವಹಣೆ, ಮೂರನೆಯದ್ದು ಆರೋಗ್ಯ ನಿರ್ವಹಣೆ. ಈ ಮೂರು ವಿಷಯವನ್ನು ಕೌಶಲಯುಕ್ತವಾಗಿ ನಿರ್ವಹಿಸಿದಾಗ ಮಹಿಳೆಯರು ಸಾರ್ಥಕವಾಗಿ ಬದುಕಬಲ್ಲರು. ನಿತ್ಯ ಯೋಗಾಭ್ಯಾಸದ ಅನುಷ್ಠಾನ ಮಾಡಿದಾಗ ಮಹಿಳೆಯರು ಉದ್ಯೋಗದೊಂದಿಗೆ ತಮ್ಮ ಆರೋಗ್ಯ ಕಾಪಾಡುವುದರ ಜತೆಯಲ್ಲಿ ಸಾಂಸಾರಿಕ ಜವಾಬ್ದಾರಿಯನ್ನು ನಿರ್ವಹಿಸಬಲ್ಲರು.
ಯೋಗದಲ್ಲಿನ ಉದ್ಯೋಗಾವಕಾಶ: ಇಂದು ಯೋಗ ವಿಜ್ಞಾನದ ಅಧ್ಯಯನ ಪೂರೈಸಿಕೊಂಡು ಯೋಗ ಶಿಕ್ಷಕಿ, ಯೋಗ ತರಬೇತುದಾರರು, ಯೋಗ ಚಿಕಿತ್ಸಕರು, ಯೋಗ ಉಪನ್ಯಾಸಕಿಯರು, ಯೋಗ ಸಂಶೋಧಕರಾಗಿ ಮಹಿಳೆಯರು ತೊಡಗಿ ಸಿಕೊಂಡಿರುವುದು ಗಮನಾರ್ಹ ಸಂಗತಿ. ಅತೀ ಕಡಿಮೆ ಬಂಡವಾಳದಲ್ಲಿ ತಮ್ಮದೇ ಸ್ವಂತ ಯೋಗ ತರಬೇತಿ ಯಾ ಚಿಕಿತ್ಸಾ ಕೇಂದ್ರ ಪ್ರಾರಂಭಿಸಿ ಉತ್ತಮ ಸಂಪಾದನೆ ಮಾಡಬಹುದಾದ ಒಂದು ವೃತ್ತಿ ಯೋಗವಾಗಿದೆ. ಒಟ್ಟಿನಲ್ಲಿ ಯೋಗ ವೃತ್ತಿಯೂ ಮಹಿಳೆಯರಿಗೆ ವೈಯಕ್ತಿಕ ಮತ್ತು ಸಂಪಾದನೆಗೆ ಒಂದು ಉಪಯುಕ್ತ ಕ್ಷೇತ್ರವಾಗಿದೆ.
ಗರ್ಭಿಣಿಯರಿಗೆ ಯೋಗದ ಪ್ರಯೋಜನ: ಸರಳವಾದ ಆಯ್ದ ಯೋಗಾಸನಗಳು, ಪ್ರಾಣಾ ಯಾಮ, ಧ್ಯಾನದ ಅಭ್ಯಾಸ ಗರ್ಭಿಣಿಯರಿಗೆ ತುಂಬಾ ಪ್ರಯೋಜನ ನೀಡುವುದರೊಂದಿಗೆ ಮಗುವಿನ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ದೇಹ ತೂಕ ನಿರ್ವಹಣೆಯಿಂದ ಸಾಮಾನ್ಯ ಹೆರಿಗೆ ಸಾಧ್ಯ. ಪ್ರಸವಾನಂತರದ ಸಮಸ್ಯೆಗಳಿಗೂ ಯೋಗ ಪರಿಹಾರ ನೀಡಬಲ್ಲದು. ಅಷ್ಠಾಂಗ ಯೋಗದ ಯಮ, ನಿಯಮದ ಅನುಷ್ಠಾನ ಮಗುವಿನಲ್ಲಿ ಧನಾತ್ಮಕ ಗುಣಗಳನ್ನು ಮೂಡಿಸಬಲ್ಲದು.
ಮಹಿಳೆಯರಲ್ಲಿ ಕಂಡುಬರುವ ಮತ್ತೂಂದು ಸಮಸ್ಯೆಯೆಂದರೆ ಮೆನೋಪಾಸ್. ದೇಹದ ತಾಪಮಾನದಲ್ಲಿ ವ್ಯತ್ಯಾಸ, ಶೀತ, ತಲೆನೋವು, ರಾತ್ರಿ ಬೆವರುವಿಕೆ, ದೇಹ ತೂಕ ಹೆಚ್ಚಳ, ಜೀರ್ಣ ಕ್ರಿಯೆ ನಿಧಾನವಾಗುವುದು ಮತ್ತು ಮಾನಸಿಕ ವೇದ ನೆಗಳಿಗೆ ಯೋಗಾಭ್ಯಾಸ ಒಂದು ಪರಿಣಾ ಮಕಾರಿ ಚಿಕಿತ್ಸಾ ಕ್ರಮ. ಒಟ್ಟಿನಲ್ಲಿ ಮಹಿಳೆಯರ ಆರೋಗ್ಯವು ಕುಟುಂಬದ ಆರೋಗ್ಯಕ್ಕೆ ಮಾದರಿ.
-ಕುಶಾಲಪ್ಪ ಗೌಡ ಎನ್,ಮಂಗಳೂರು