Advertisement

ಯೋಗ ದಿನ ಆಚರಿಸಿದ ಜನಪ್ರತಿನಿಧಿಗಳು-ಅಧಿಕಾರಿಗಳು

09:16 AM Jun 22, 2020 | Suhan S |

ಬಾಗಲಕೋಟೆ: ಮಹಾಮಾರಿ ಕೋವಿಡ್‌-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮನೆಯಲ್ಲಿಯೇ ಯೋಗ ಮಾಡುವ ಮೂಲಕ ವಿಶ್ವ ಯೋಗ ದಿನ ರವಿವಾರ ಸರಳವಾಗಿ ಆಚರಿಸಿದರು.

Advertisement

ಕೇಂದ್ರ ಸರ್ಕಾರದ ಆದೇಶದನ್ವಯ ಮನೆಯಲ್ಲಿಯೇ ಯೋಗ, ಕುಟುಂಬದವರೊಂದಿಗೆ ಯೋಗ ಎಂಬ ಘೋಷ ವಾಕ್ಯದಂತೆ 6ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಪ್ರಸಾರ ಭಾರತಿ ದೂರದರ್ಶನದ ಎಲ್ಲ ಚಾನೆಲ್‌ಗ‌ಳಲ್ಲಿ ಭಿತ್ತರವಾಗುವ ಹಾಗೂ ವೆಬ್‌ಸೈಟ್‌ ಲಿಂಕ್‌ನಲ್ಲಿ ಲಾಗಿನ್‌ ಮಾಡಿಕೊಂಡು ಯೋಗ ಮಾಡಲು ಜಿಲ್ಲಾ ಆಯುಷ್‌ ಇಲಾಖೆ ಎಲ್ಲ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಸದಸ್ಯರಿಗೆ ತಿಳಿಸಲಾಗಿತ್ತು. ಅನುಬಂಧವನ್ನು ಧಿಗಳು-ಅಧಿಕಾರಿಗಳು ಭರ್ತಿ ಮಾಡಿ ಕೊಡಲು ಪತ್ರವನ್ನು ನೀಡಲಾಗಿತ್ತು.

ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ತಮ್ಮ ಮನೆಯಲ್ಲಿಯೇ ಕುಟುಂಬದರೊಂದಿಗೆ ಯೋಗ ಮಾಡಿದರು. ಕೇಂದ್ರ ಸರ್ಕಾರದ ಆದೇಶದನ್ವಯ ಮನೆಯಲ್ಲಿಯೇ ಯೋಗ ಮಾಡುವ ಮೂಲಕ ಯೋಗ ದಿನ ಆಚರಣೆ ಯಶಸ್ವಿ ಗೊಳಸಿರುವುದಾಗಿ ಜಿಲ್ಲಾ ಆಯುಷ ಅಧಿಕಾರಿಗಳು ತಿಳಿಸಿದ್ದಾರೆ. ಯೋಗ, ಧ್ಯಾನ, ಪ್ರಾಣಾಯಾಮದಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಉತ್ತಮಗೊಳಿಸಿ ರೋಗ ಮುಕ್ತ ದೇಹವನ್ನಾಗಿ ಪರಿವರ್ತಿಸಲು ಯೋಗ ಸಹಾಯವಾಗಿದೆ ಎಂದು ಡಾ| ಮಲ್ಲಣ್ಣ ತೋಟದ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next