ಮಣಿಪಾಲ: ಯೋಗ ಹಾಗೂ ಆಧ್ಯಾತ್ಮಿಕ ಚಿಂತನೆಗಳ ಮಹತ್ವವನ್ನು ಮತ್ತು ಯುವ ಪೀಳಿಗೆ ನಿತ್ಯ ಜೀವನದಲ್ಲಿ ಅದನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂದು ದೇವಿಶ್ರೀ ಮಹಾಲಸ ನಾರಾಯಣಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಗುರೂಜಿ ಶ್ರೀ ಸುರೇಶ್ ಜೆ ಪೈ ಹೇಳಿದರು.
ಅವರು ಹರಿಖಂಡಿಗೆಯಲ್ಲಿರುವ ಮುನಿಯಾಲು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಯೋಗದ ಕುರಿತು ವಿಸ್ತಾರವಾಗಿ ಮಾರ್ಗದರ್ಶನ ನೀಡಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯಸ್ಥ ಡಾ| ಎಂ. ವಿಜಯಭಾನು ಶೆಟ್ಟಿ ವಹಿಸಿದ್ದರು.
10ನೇ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಹೊಟೇಲ್ ಮಧುವನ್ ಸೆರಾಯಿ ಆಡಳಿತ ನಿರ್ದೇಶಕ ದಾಮೋದರ ನಾಯಕ್ ಮುಖ್ಯ ಅತಿಥಿಯಾಗಿ ಆಗಮಿಸಿ ಹರಿಖಂಡಿಗೆ ಕ್ಷೇತ್ರದ ಮಹತ್ವ ತಿಳಿಸಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಉನ್ನತಿಗಾಗಿ ಈ ಕ್ಷೇತ್ರದ ಸದ್ಬಳಕೆಯಾಗಬೇಕೆಂದು ಹೇಳಿದರು.
ಮುಖ್ಯ ಅತಿಥಿ ಮುನಿಯಾಲ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ| ಸತ್ಯನಾರಾಯಣ ಬಿ ಮಾತನಾಡಿ, ಮಹಿಳಾ ಮತ್ತು ಯುವ ಜನಾಂಗದ ಸಬಲೀಕರಣದಲ್ಲಿ ಯೋಗದ ಪಾತ್ರವನ್ನು ಭಗವದ್ಗೀತಾ ಮತ್ತು ವೇದಗ್ರಂಥಗಳ ಉಲ್ಲೇಖದ ಮುಖಾಂತರ ತಿಳಿಸಿದರು.
ಮುಖ್ಯ ಅತಿಥಿ ಹಾಗೂ ಸಂಸ್ಥೆಯ ಟ್ರಸ್ಟಿ ಹೇಮಲತಾ ವಿ. ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಉಪ ಪ್ರಾಂಶುಪಾಲೆ ಡಾ| ಶುಭಾ ಕಾಲೇಜಿನ ಚಟುವಟಿಕೆಗಳ ಕುರಿತು ಹಾಗೂ ಯೋಗ, ಸಂಗೀತ ಮತ್ತು ಇತರ ಅರ್ಥಪೂರ್ಣ ಚಟುವಟಿಕೆಗಳ ಮೂಲಕ ಹೇಗೆ ನಮ್ಮ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿಕೊಟ್ಟರು.
ಮುನಿಯಾಲ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.ಯೋಗ ಪ್ರದರ್ಶನಕ್ಕೆ ಡಾ| ರಶ್ಮಿ ಮುಂದಾಳತ್ವ ವಹಿಸಿದರು.
ಡಾ। ಮೇಘಾಶ್ರೀ ಯೋಗ ದಿನದ ಪೂರ್ವಭಾವಿ ಕಾರ್ಯಗಾರ ಶಿಬಿರದ ವರದಿ ಓದಿದರು. ಡಾ. ಸೂರ್ತಿ ಸ್ವಾಗತಿಸಿ, ಡಾ। ಸುಕನ್ಯಾ ವಂದಿಸಿದರು. ಡಾ। ಚೈತ್ರ ಕಾರ್ಯಕ್ರಮದ ನಿರೂಪಿಸಿದರು. ವಿದ್ಯಾರ್ಥಿನಿ ಸಂಜನಾ ಹಾಗೂ ನಿಕ್ಷಿತಾ ಪ್ರಾರ್ಥಿಸಿದರು. ಕಾರ್ಕ್ರಮದ ರೂಪು – ರೇಷೆಯ ಬಗ್ಗೆ ಸಲಹೆ ನೀಡಿದ ಡಾ। ಶ್ರದ್ಧಾ ಶೆಟ್ಟಿ, ಗುರು ಸಂದೇಶ್ ಶೆಟ್ಟಿ, ಚಿರಂಜಿತ್ ಅಜಿಲ ಹಾಗೂ ಚೈತ್ರಾ ಸಿ ಅಜಿಲ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಆಡಳಿತ ಅಧಿಕಾರಿ ಯೋಗೀಶ್ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಸಭಾ ಕಾರ್ಯಕ್ರಮದ ನಂತರ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಭಾ ಕಾರ್ಯಕ್ರಮದ ಮುಂಚಿತವಾಗಿ ನಡೆದ ಕಾರ್ಯಕ್ರಮದ ವಿವರ:
ಆಯುಷ್ ಸಚಿವಾಲಯದ ಯೋಗ ಪ್ರೊಟೋಕಾಲ್ ಅನುಸಾರ ಯೋಗ ಪ್ರಾತ್ಯಕ್ಷಿಕೆಯಲ್ಲಿ ಮುನಿಯಾಲ್ ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ, ಹರಿಖಂಡಿಗೆ ಹಾಗೂ ಎಳ್ಳಾರೆ ಶಾಲಾ ಮಕ್ಕಳು, ಶಿಕ್ಷಕರು ಮತ್ತು ಹರಿಖಂಡಿಗೆಯ ಗ್ರಾಮಸ್ಥರು ಸೇರಿ ಒಟ್ಟು 126 ಜನ ಭಾಗಿಯಾಗಿದ್ದರು. ಡಾ| ದೀಕ್ಷಾ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಪ್ರಾತ್ಯಕ್ಷಿಕೆಯ ನಂತರ ಪ್ರಕೃತಿ ಚಿಕಿತ್ಸಾ ಆಹಾರ ಪದ್ಧತಿಯ ಅನುಸಾರ ಮೊಳಕೆ ಕಾಳುಗಳ ಹಾಗೂ ಹಣ್ಣಿನ ಸಲಾಡ್ ಮತ್ತು ಲಿಂಬೆ ಜೇನಿನ ರಸವನ್ನು ಸಭಿಕರಿಗೆ ವಿತರಿಸಲಾಯಿತು.