Advertisement

ಯೋಗಾಭ್ಯಾಸದಿಂದ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿ

07:41 PM Jun 22, 2021 | Team Udayavani |

ಬಂಗಾರಪೇಟೆ: ಮಾನಸಿಕ, ಶಾರೀರಿಕ ಆರೋಗ್ಯಕ್ಕಾಗಿ ಯೋಗಾಭ್ಯಾಸವನ್ನು ಪ್ರತಿಯೊಬ್ಬರುಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಬಿಜೆಪಿಉಪಾಧ್ಯಕ್ಷ ಹಾಗೂ ಜಿಪಂ ಸದಸ್ಯ ಬಿ.ವಿ.ಮಹೇಶ್‌ಸಲಹೆ ನೀಡಿದರು.

Advertisement

ತಾಲೂಕಿನ ಡಿ.ಕೆ.ಹಳ್ಳಿ ಗ್ರಾಪಂನ ಜೈನ್‌ ಶಾಲೆಯಲ್ಲಿಬಿಜೆಪಿಯಿಂದಹಮ್ಮಿಕೊಂಡಿದ್ದವಿಶ್ವಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದಅವರು, ತಾಂತ್ರಿಕ ಜೀವನದಲ್ಲಿ ಮಾನವನಿಗೆ ಮಾನಸಿಕ ಒತ್ತಡವು ಹೆಚ್ಚಾಗಿದೆ. ಅದನ್ನು ನಿವಾರಣೆ ಮಾಡಿಕೊಳ್ಳಲು ಇಲ್ಲಸಲ್ಲದ ದಾರಿ ಹುಡುಕಿಕೊಳ್ಳುವುದರಬದಲು, ಪ್ರತಿ ನಿತ್ಯ ಯೋಗ್ಯಾಭ್ಯಾಸ ಮಾಡುವುದರಿಂದ ಮಾನಸಿಕ, ಶಾರೀರಿಕವಾಗಿ ಸದೃಢವಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲಎಂದು ತಿಳಿಸಿದರು.

ಆರೋಗ್ಯವೃದ್ಧಿ: ಋಷಿಮುನಿಗಳುಯೋಗಮುದ್ರೆಯಲ್ಲಿಕೇವಲಗಾಳಿಸೇವನೆಮಾಡುತ್ತ,ತಿಂಗಳಗಟ್ಟಲೆಆಹಾರ ಸೇವಿಸದಿದ್ದರೂ ಆರೋಗ್ಯವಾಗಿಯೇಇರುತ್ತಿದ್ದರು. ಅಂತೆಯೇ ನಾವು ಸಹ ಯೋಗದಹಾದಿಯನ್ನು ಹಿಡಿದರೆ ಆರೋಗ್ಯ ವೃದ್ಧಿಗೆ ಸಹಕಾರಿಆಗುತ್ತದೆ ಎಂದು ವಿವರಿಸಿದರು.

ವಿಶ್ವಕ್ಕೆಯೋಗಪರಿಚಯ:ಸ್ವಾಮಿವಿವೇಕಾನಂದರುಯೋಗ ಅಭ್ಯಾಸದಿಂದ ಜ್ಞಾನ, ಪ್ರೀತಿ, ಸಂತೋಷ,ಬೆಳಕಿನ ಭಾವ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ.ಯೋಗ ಭಾರತ ಜಗತ್ತಿಗೆ ನೀಡಿರುವ ಕೊಡುಗೆ.ಇದನ್ನು ವಿಶ್ವಸಂಸ್ಥೆಯೂ ಗುರುತಿಸಿ ಅದನ್ನುಪ್ರಚಾರಪಡಿಸಲೆಂದೇ ವಿಶ್ವಯೋಗ ದಿನವನ್ನುಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಯೋಗ ದೀಪದಂತೆ: ಯೋಗ ಎನ್ನುವುದು ದೇಹಹಾಗೂ ಮನಸ್ಸನ್ನು ಸದಾ ಕ್ರಿಯಾಶೀಲವಾಗಿಡುವಮಾರ್ಗ. ಯೋಗ ಎಂಬುವುದು ದೀಪ. ಒಮ್ಮೆನೀವುಅದನ್ನುಹೊತ್ತಿಸಿದರೆಅದರಬೆಳಕುಎಂದಿಗೂನಂದಿ ಹೋಗದು.ಪ್ರತಿದಿನ ಯೋಗಾಭ್ಯಾಸ ಮಾಡಿದಂತೆಲ್ಲ, ದೀಪಪ್ರಜ್ವಲಿಸಿದಂತೆ ಆರೋಗ್ಯವೂ ವೃದ್ಧಿ ಆಗುತ್ತದೆ.ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ದಿನನಿತ್ಯವೂಯೋಗ ಮಾಡುವುದನ್ನು ಅಳವಡಿಸಿ ಕೊಳ್ಳಬೇಕುಎಂದರು.

Advertisement

ವಿವಿಧ ಆಸನಗಳ ಪ್ರದರ್ಶನ: ಯೋಗ ಶಿಕ Òಕರುಸಾಮೂಹಿಕವಾಗಿ ಸೂರ್ಯ ನಮಸ್ಕಾರ, ಅರ್ಧಚಕ್ರಾಸನ, ಪಾದ ಹಸ್ತಾಸನ, ತ್ರಿಕೋನಾಸನ, ಪರಿವರ್ತಾಸನಾ ತ್ರಿಕೋನಾಸನ, ವಜ್ರಾಸನ, ಶಶಕಾಂಗಾಸನ, ಪಶ್ಚಿಮೊತ್ತಾಸನ, ಭುಜಾಂಗಾಸನ, ಧರ್ನೂಸನ,ಸರ್ವಾಂಗಾಸನ, ಹಾಲಾಸನ, ಚಕ್ರಾಸನ,ಕಪಾಲಾಭಾತಿ, ಪ್ರಾಣಾಯಾಮ, ನಾಡಿಶೋಧ, ಈರೀತಿಯ ಯೋಗಾಸನಗಳನ್ನು ಮಾಡಿಸಿದರು.

ಡಿ.ಕೆ.ಹಳ್ಳಿ ಗ್ರಾಪಂ ಅಧ್ಯಕ್ಷೆ ಕಲಾವತಿ, ಗ್ರಾಪಂಉಪಾಧ್ಯಕ್ಷೆ ರಾಧಮ್ಮ, ಸದಸ್ಯರಾದ ಸವಿತಾ ಬಾಬು,ಜಯಲಕ್ಷಿ ¾à ಕುಮಾರ್‌, ವಿಕ್ಟೋರಿಯಾಪುಣ್ಯಮೂರ್ತಿ, ರಾಣಿ ಗೋವಿಂದರಾಜ್‌, ಯೋಗಶಿಕ್ಷಕರಾದ ಬಾಹಾ ಶೇಖರಪ್ಪ, ಜೋಷಿ, ಪುನೀತ್‌,ಸುರೇಶ್‌, ಜಿಲ್ಲಾ ಬಿಜೆಪಿ ಉಪಾಧ್ಯಕ್ಷಬಿ.ಹೊಸರಾಯಪ್ಪ, ಮುಖಂಡರಾದ ಮಹದೇವ್‌,ವೆಂಕಟೇಶಮೂರ್ತಿ,ಕೃಷ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next