Advertisement

“ಸಂಡೆ’ಜೀವನಕ್ಕೆ ಬಾಬಾ ರಾಮದೇವ್‌ ಸಲಹೆ

12:45 AM Nov 18, 2019 | Sriram |

ಉಡುಪಿ: ಪರ್ಯಾಯಶ್ರೀ ಪಲಿಮಾರು ಮಠಾಧೀಶರ ಆಸ್ಥೆಯಿಂದ ಆಯೋಜನೆಗೊಂಡಿರುವ ಪ್ರಸಿದ್ಧ ಯೋಗಪಟು ಬಾಬಾ ರಾಮದೇವ್‌ ಅವರ ಯೋಗ ಶಿಬಿರದಲ್ಲಿ ರವಿವಾರ ಎರಡನೇ ದಿನ ಜನರು ಹೆಚ್ಚಿನ ಆಸಕ್ತಿಯಿಂದ ಪಾಲ್ಗೊಂಡರು.

Advertisement

ಸಾಮಾನ್ಯವಾಗಿ ಸಮಾಜದಲ್ಲಿ ಕಂಡು ಬರುತ್ತಿರುವ ರವಿವಾರದ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವಂತೆ ರಾಮದೇವ್‌ ಕರೆ ನೀಡಿದರು.

ರವಿವಾರ ಇತರ ದಿನಗಳಿಗಿಂತ ಹೆಚ್ಚಿನ ಸಮಯವನ್ನು ಯೋಗಾಸನ, ಪ್ರಾಣಾಯಾಮ ಅಭ್ಯಾಸಗಳಿಗೆ ಕೊಡಬೇಕು ಎಂದರು.

ಸೂರ್ಯಾರ್ಘ್ಯ ಮಹತ್ವ
ಮುಖ್ಯಮಂತ್ರಿಯಾಗಿದ್ದ ಖಂಡೂರಿ ಸೂರ್ಯನಿಗೆ ಅರ್ಘ್ಯ ಕೊಟ್ಟದ್ದರಿಂದ ಅವರ ದೃಷ್ಟಿ ಸಮಸ್ಯೆ ನಿವಾರಣೆಯಾ ಯಿತು. ಸೂರ್ಯದೇವನಿಗೆ ನೀರಿನಲ್ಲಿ ಅರ್ಘ್ಯಕೊಡುವುದೂ ಮುಖ್ಯ. ರೇಡಿಯೇಶನ್‌ ತಡೆ ಶಕ್ತಿಯ ತುಳಸಿ ಗಿಡಕ್ಕೆ ಬೆಳಗ್ಗೆದ್ದು ನೀರೆರೆದು ಸೂರ್ಯನಿಗೆ ಅರ್ಘ್ಯ ಕೊಡುವುದೂ ವಿಜ್ಞಾನವಾಗಿದೆ. ಬಾಲ ಸೂರ್ಯನ ಬಿಸಿಲಿನಲ್ಲಿ ಒಂದು ಗಂಟೆ ಓಡಾಡಿದರೆ ವಿಟಮಿನ್‌ ಡಿ ಕೊರತೆಯಾಗುವುದಿಲ್ಲ ಎಂದರು.

ಪುಸ್ತಕ ಬಿಡುಗಡೆ
ಆಚಾರ್ಯ ಬಾಲಕೃಷ್ಣರು ಬರೆದ “ಆಯುರ್ವೇದ ಸಿದ್ಧಾಂತದ ರಹಸ್ಯ’ ಪುಸ್ತಕದ ಅನುವಾದವನ್ನು ಕರ್ಣಾಟಕ ಬ್ಯಾಂಕ್‌ ಎಂಡಿ ಮಹಾಬಲೇಶ್ವರ ಅವರ ಪತ್ನಿ ಅನ್ನಪೂರ್ಣ ಅವರು ಮಾಡಿದ್ದು ಈ ಕೃತಿಯನ್ನು ರಾಮದೇವ್‌ ಮತ್ತು ಪೇಜಾವರ ಶ್ರೀಗಳು ಬಿಡುಗಡೆಗೊಳಿಸಿದರು. ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಕರ್ಣಾಟಕ ಬ್ಯಾಂಕ್‌ ಎಜಿಎಂಗಳಾದ ಶ್ರೀನಿವಾಸ ದೇಶಪಾಂಡೆ, ಗೋಪಾಲಕೃಷ್ಣ ಸಾಮಗ, ಪತಂಜಲಿ ಸಮಿತಿಯ ಜ್ಞಾನೇಶ್ವರ ನಾಯಕ್‌, ಕರಂಬಳ್ಳಿ ಶಿವರಾಮ ಶೆಟ್ಟಿ, ಶಂಕರ ಶೆಟ್ಟಿ ಉಪಸ್ಥಿತರಿದ್ದರು. ಎರಡನೆಯ ದಿನದ ಕಾರ್ಯಕ್ರಮವನ್ನು ಪೇಜಾವರ ಶ್ರೀಗಳು ಉದ್ಘಾಟಿಸಿದರು. ಪರ್ಯಾಯ ಶ್ರೀ ಪಲಿಮಾರು ಮಠಾಧೀಶರು, ಪೇಜಾ
ವರ ಕಿರಿಯ, ಪಲಿಮಾರು ಕಿರಿಯ ಶ್ರೀಗಳು ಉಪಸ್ಥಿತರಿದ್ದರು. ಸುಜಾತಾ ಮಾರ್ಲ ಸ್ವಾಗತಿಸಿದರು.

Advertisement

ಬೊಜ್ಜು ಕರಗಿಸಿದ ಮಹಿಳೆಯರು
ಎಂಜಿನಿಯರಿಂಗ್‌ ಪದವೀಧರೆ ಗ್ರೀಷ್ಮಾ 30 ಕೆಜಿ ತೂಕ ಕಡಿಮೆ ಮಾಡಿ ರುವುದಾಗಿ ಹೇಳಿದಾಗ ಅವರನ್ನು ವೇದಿಕೆಗೆ ಕರೆದು ರಾಮದೇವ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರೀಷ್ಮಾ ಸಾಧನೆ ಅನುಕರಣೀಯ ಎಂದರು. ಅದೇ ರೀತಿ ವಿವಿಧ ಮಹಿಳೆಯರು 15, 16, 11 ಕೆ.ಜಿ. ಬೊಜ್ಜು ಇಳಿಸಿಕೊಂಡ ಅನುಭವವನ್ನು ಹೇಳಿಕೊಂಡರು. ಬೊಜ್ಜು ಕರಗಲು ಅಶ್ವಗಂಧ ಸಹಕಾರಿ ಎಂದು ರಾಮದೇವ್‌ ಹೇಳಿದರು.

ವಾಯುಮಾಲಿನ್ಯ ಪರಿಹಾರಕ್ಕೆ
ರಾತ್ರಿ 7 ಗಂಟೆಯೊಳಗೆ ಉಂಡರೆ ಉತ್ತಮ, 8 ಗಂಟೆ ಬಳಿಕ ಏನನ್ನೂ ತಿನ್ನಬಾರದು. ಅಕ್ಕಿ, ಗೋಧಿ ಪ್ರಮಾಣ ಕಡಿಮೆ ಮಾಡಿ ತರಹೇವಾರಿ ತರಕಾರಿಗಳ ಸೇವನೆ ಹೆಚ್ಚಿಸಬೇಕು. ದಿನಕ್ಕೆ ಮೂರು ಲೀ. ನೀರು ಕುಡಿಯಬೇಕು. ಮನೆ ಆವರಣದಲ್ಲಿ ತುಳಸಿ, ಅಲೊವೇರಾ, ಅಮೃತಬಳ್ಳಿಗಳನ್ನು ಬೆಳೆಸಿ. ಇವುಗಳಲ್ಲಿ ಅಗಾಧವಾದ ಔಷಧೀಯ ಗುಣವಿದೆ. ವಾತಾವರಣವೂ ಸರಿಯಾಗುತ್ತದೆ. ದಿಲ್ಲಿಯ ವಾತಾವರಣ ಕಲುಷಿತ ಎನ್ನುತ್ತೇವೆ. ಅಲ್ಲಿ ಇಂತಹ ಔಷಧೀಯ ಗಿಡಗಳಿಗೆ ಮಹತ್ವ ನೀಡದಿರುವುದೂ ಇದಕ್ಕೆ ಕಾರಣ. ಡೆಂಗ್ಯೂ, ಚಿಕೂನ್‌ಗುನ್ಯದಂತಹ ಜ್ವರಗಳಿಗೂ ಇವುಗಳು ಪರಿಣಾಮಕಾರಿ ಎಂದು ರಾಮದೇವ್‌ ಕಿವಿಮಾತು ನುಡಿದರು.

ಯೋಗಮಯ ಕರ್ನಾಟಕ
ಕರ್ನಾಟಕವನ್ನು ರೋಗಮುಕ್ತ ಮಾಡಲು “ಯೋಗಮಯ ಕರ್ನಾಟಕ’ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಇದಕ್ಕೆ ನುರಿತ ಯೋಗ ಶಿಕ್ಷಕರು ಬೇಕು. ಆಸಕ್ತರಿಗೆ ತರಬೇತಿ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next