Advertisement

ಐಎನ್‌ಎಸ್‌ ಕದಂಬದಲ್ಲಿ ಯೋಗ

08:42 PM Jun 22, 2021 | Team Udayavani |

ಕಾರವಾರ: ಸೀಬಡ್‌ ನೌಕಾನೆಲೆಯ ಐಎನ್‌ಎಸ್‌ ಕದಂಬದಲ್ಲಿ ಯೋಗ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

Advertisement

ದೇಶದ ಅತ್ಯಾಧುನಿಕ ನೌಕೆ ವಿಕ್ರಮಾದಿತ್ಯದ ಆನ್‌ ಬೋರ್ಡ್‌ ತುತ್ತತುದಿಯಲ್ಲಿ (ಹೆಲಿಕಾಪ್ಟರ್‌ ರನ್‌ ವೇ ನೌಕೆಯ ನೆತ್ತಿನ ಮೇಲಿದೆ)ಹೆಲಿಕಾಪ್ಟರ್‌ ರನ್‌ ವೇ ಮೇಲೆ ನೇವಿ ಸಿಬ್ಬಂದಿ ಯೋಗಾಭ್ಯಾಸ ಮಾಡಿದರು.

ನೌಕೆಯ ಮುಂಭಾಗ ಹಾಗೂ ಇತರೆಡೆ ಸೇರಿ 2500 ಸಂಖ್ಯೆಯಲ್ಲಿ ಸಿಬ್ಬಂದಿ ಭಾಗವಹಿಸಿದ್ದರು. ನೇವಿ ಸಿಬ್ಬಂದಿ, ಅವರ ಕುಟುಂಬಸ್ಥರು ಹಾಗೂ ಸಾರ್ವಜನಿಕರೂ ವಿಕ್ರಮಾದಿತ್ಯದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಮೊರಾರ್ಜಿ ದೇಸಾಯಿ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಈ ಯೋಗ ಕಾರ್ಯಕ್ರಮ ನಿರ್ದೇಶಿಸಿತ್ತು. ಕರ್ನಾಟಕ ನೇವಲ್‌ ಬೇಸ್‌ ಕಮಾಂಡ್‌ ಯೋಗ ದಿನಾಚರಣೆ ವೀಕ್ಷಿಸಿತು.

Advertisement

Udayavani is now on Telegram. Click here to join our channel and stay updated with the latest news.

Next