Advertisement

ಯೋಗ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಿ

12:13 PM Feb 11, 2022 | Team Udayavani |

ದೇವನಹಳ್ಳಿ: ರಥಸಪ್ತಮಿ ಅಂಗವಾಗಿ ಪತಾಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಪಟ್ಟಣದ ಹಳೇತಾಲೂಕು ಕಚೇರಿ ರಸ್ತೆಯ ತರಗು ಆಂಜನೇಯ ಸ್ವಾಮಿಸಮುದಾಯ ಭವನದಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ ಮಾಡಲಾಯಿತು.

Advertisement

ರಥಸಪ್ತಮಿಯಂದು ಸೂರ್ಯ ಪಥ ಬದ ಲಾವಣೆ ಮಾಡಿ ಭೂಮಿಯ ಸಮೀಪಕ್ಕೆ ಬರುತ್ತಾನೆ. ಅದಕ್ಕಾಗಿ ಸೂರ್ಯ ನನ್ನು ಸ್ವಾಗತಿಸುವ ಸಲುವಾಗಿ ಈ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ. ಸಾಮೂಹಿಕವಾಗಿ ಸೂರ್ಯ ನಮಸ್ಕಾರ, ಅಗ್ನಿ ಹೋತ್ರ, ಆದಿತ್ಯ ಸೂತ್ರ, ಪಠಣ ಸೇರಿದಂತೆ ಹಲವು ರೀತಿಯ ನಮಸ್ಕಾರ ಮಾಡಲಾಯಿತು. ಸುಮಾರು 100ಕ್ಕೂ ಹೆಚ್ಚಿನ ಜನರು108 ಸಾರಿ 22 ಸಾವಿರ ಸೂರ್ಯ ನಮಸ್ಕಾರವನ್ನು ಮಾಡಲಾಯಿತು.

ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಮುನಿವೆಂಕಟಪ್ಪ ಮಾತನಾಡಿ, ಪ್ರತಿ ವರ್ಷವೂ ರಥ ಸಪ್ತಮಿದಿನ 108 ಸೂರ್ಯ ನಮಸ್ಕಾರವನ್ನು ಸಾಮೂಹಿಕವಾಗಿ ಮಾಡಲಾಗು ತ್ತದೆ. ನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ನರಮಂಡಲ ಚೇತನಗೊಳ್ಳುತ್ತದೆ. ಜೀರ್ಣ ಶಕ್ತಿ ಹೆಚ್ಚುತ್ತದೆ. ರಕ್ತ ಪರಿಚಲನೆ ಕ್ರಮಬದ್ಧವಾಗುತ್ತದೆ. ಚರ್ಮದ ಕಾಂತಿ ಹೆಚ್ಚುತ್ತದೆ ಎಂದರು.

ಮೈ ಮನಸ್ಸುಗಳ ಆರೋಗ್ಯ ಪ್ರತೀಕವಾದ ಸೂರ್ಯಸ್ಥಾನವನ್ನು ಆಬಾಲ ವೃದ್ಧರೆಲ್ಲರೂ ಮಾಡ ಬಹುದು. ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಇದರಿಂದ ದೊರೆಯುವ ಪ್ರಯೋಜನಗಳು ಒಂದಲ್ಲ ಎರಡಲ್ಲ ಸೂರ್ಯನ ಕಿರಣಗಳಲ್ಲಿರುವ ವಿವಿಧ ಬಣ್ಣಗಳುಮನುಷ್ಯನ ಮೇಲೆ ವೈಶಿಷ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಜೇಸಿಐ ಚಪ್ಪರದ ಕಲ್ಲು ಚಂದನ ಅಧ್ಯಕ್ಷ ಹಾಗೂ ಪತಂಜಲಿ ಯೋಗ ಸಮಿತಿ ಕಾರ್ಯದರ್ಶಿ ನೆರಗನ ಹಳ್ಳಿಶ್ರೀನಿವಾಸ್‌ ಮಾತನಾಡಿ, ದಿನದ ಕೆಲ ಸಮಯ ವನ್ನು ಯೋಗಕ್ಕೆ ಮೀಸಲಿಡುವುದರಿಂದ ಆರೋಗ್ಯ ವನ್ನು ಹೆಚ್ಚಿಸಿ ಕೊಳ್ಳಬಹುದು. ರಥಸಪ್ತಮಿ ದಿನ ಅತ್ಯಂತ ಶ್ರೇಷ್ಠವಾದದಿನವಾಗಿದೆ. ಪತಂಜಲಿ ಯೋಗ ಶಿಕ್ಷಣದಿಂದ ಪ್ರತಿಯೊಬ್ಬರು ಯೋಗವನ್ನು ಕಲಿಯು ತ್ತಾರೆ.ಯೋಗದಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬ ಹುದು. ಈ ದಿನ ಸೂರ್ಯ ನಮಸ್ಕಾರ ಮಾಡುವುದ ರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.

Advertisement

ಪುರಸಭಾ ಅಧ್ಯಕ್ಷೆ ರೇಖಾವೇಣುಗೋಪಾಲ ಮಾತನಾಡಿ, ಸೂರ್ಯ ನಮಸ್ಕಾರ ಮಾಡುವುದ ರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಪ್ರತಿಯೊಬ್ಬರೂ ಯೋಗಾಸನ ಮಾಡಬೇಕು. ನಮ್ಮ ಆರೋಗ್ಯ ಚನ್ನಾಗಿರಬೇಕಾದರೆ ಯೋಗ ಅತಿ ಮುಖ್ಯವಾಗಿದೆ ಎಂದು ಹೇಳಿದರು.

ಖಜಾಂಚಿ ವಿನಯ್‌ಕುಮಾರ್‌, ಶಿಕ್ಷಕ ಪ್ರಮುಖ್‌ ನಾಗೇಶ್‌, ಗಾಯತ್ರಿ, ಜಿಲ್ಲಾ ಸಹ ಸಂಚಾಲಕ ಸುರೇಶ್‌ಕುಮಾರ್‌, ಶಿಕ್ಷಣ ಪ್ರಮುಖ್‌ ಹೇಮಾವತಿ, ಅಂಬುಜಸುನಂದ, ಸಂಘಟನಾ ಪ್ರಮುಖ್‌ ಸತೀಶ್‌, ಸರಸ್ಪತಿ, ವರದಿ ಪ್ರಮುಖ್‌ ಮಹಾಲಕ್ಷ್ಮೀ, ಪ್ರಕಾಶ್‌, ಶಿಕ್ಷಕರಾದ ನವೀನ್‌, ಉಷಾ, ಶ್ಯಾಮಲಾ, ಕೋಮಲಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next