Advertisement

Theerthahalli: ಎಳ್ಳಮಾವಾಸ್ಯೆ ಜಾತ್ರೆ ಸಂಭ್ರಮ ಆರಂಭ

12:52 PM Jan 01, 2024 | Kavyashree |

ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ  ಜ.11 ರಿಂದ 13 ರವರೆಗೆ  3 ದಿನಗಳ ಪರ್ಯಂತ ನಡೆಯಲಿದ್ದು, ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಸಾವಿರಾರು ಭಕ್ತರು ಈ ಜಾತ್ರೆಗೆ ಆಗಮಿಸಲಿದ್ದಾರೆ.

Advertisement

ಮೂರು ದಿನಗಳು ನಡೆಯುವ ವಿಜೃಂಭಣೆಯ ಜಾತ್ರಾ ಮಹೋತ್ಸವದಲ್ಲಿ ಬರುವ ಭಕ್ತರರಿಗೆ ಮದ್ಯಾಹ್ನ ಅನ್ನಸಂತರ್ಪಣೆ ನೆಡೆಯಲಿದೆ. ಈ ಅನ್ನಸಂತರ್ಪಣೆಗೆ ಭಕ್ತರಿಂದ ಹೊರ ಕಾಣಿಕೆ ಸ್ವೀಕರಿಸುವ ವಾಹನಗಳು  ಸೊಮವಾರ ಇಂದಿನಿಂದ  ತಾಲ್ಲೂಕಿನಾದ್ಯಂತ ಸಂಚರಿಸಲಿದೆ.

ಇಂದು ರಾಮೇಶ್ವರ ದೇವಸ್ಥಾನದಲ್ಲಿ ತಹಶೀಲ್ದಾರ್ ಜಕ್ಕಣ್ಣ ಗೌಡರ್ ಈ ಹೊರೆ ಕಾಣಿಕೆ ವಾಹನಗಳಿಗೆ ಚಾಲನೆ ನೀಡಿದರು. ಈಗಾಗಲೇ ದೇವಸ್ಥಾನದಿಂದ ನಾಲ್ಕು ವಾಹನಗಳು ಹೊರಟಿದ್ದು ತಾಲೂಕಿನ ವಿವಿಧ ಭಾಗಗಳಿಗೆ ತಲುಪಲಿದೆ. ಒಂದು ವೇಳೆ ವಾಹನ ತಲುಪದೆ ಇಲ್ಲದಿದ್ದಲ್ಲಿ  ಶ್ರೀರಾಮೇಶ್ವರ ದೇವಸ್ಥಾನ ಸಮೀಪದ ಅನ್ನದಾಸೋಹ  ಕಚೇರಿಯಲ್ಲಿ ಹೊರ ಕಾಣಿಕೆ ನೀಡಲು ಸಮಿತಿಯವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ಗೀತಾ ರಮೇಶ್, ಜಾತ್ರಾ ಸಮಿತಿ ಸಂಚಾಲಕ ಪ. ಪಂ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ, ಕಂದಾಯ ಇಲಾಖೆ ಅಧಿಕಾರಿಗಳಾದ ಲೋಕೇಶ್, ಸಂದೇಶ್ ಜವಳಿ ಟೆಂಕಬೈಲು ನಾಗರಾಜ್, ಮಿಲ್ಕೆರಿಅನಿಲ್, ಗಿರೀಶ್, ಕಿಶೋರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next