Advertisement

KGF ವೇಳೆ YGF: ತಾಯಿಯಾಗಲಿದ್ದಾರೆ ರಾಧಿಕಾ!

10:46 AM Jul 25, 2018 | Team Udayavani |

ಬೆಂಗಳೂರು: ಸ್ಯಾಂಡಲ್‌ವುಡ್‌ನ‌ ಯುವ ದಂಪತಿಗಳಾದ ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ಪಂಡಿತ್‌ ಡಿಸೆಂಬರ್‌ನಲ್ಲಿ ಹೊಸ ಅತಿಥಿಯ ನಿರೀಕ್ಷೆಯಲ್ಲಿದ್ದಾರೆ. ಹೌದು ರಾಧಿಕಾ ಈಗ 4 ತಿಂಗಳ ಗರ್ಭಿಣಿ. 

Advertisement

ಸಿಹಿ ಸುದ್ದಿಯನ್ನು ವಿಶೇಷ ವಿಡಿಯೋ ಮೂಲಕ ಯಶ್‌ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ನಾನು ನಿಮಗೆ ವಿಶೇಷವೊಂದನ್ನು ಬಹಿರಂಗ ಪಡಿಸುತ್ತಿದ್ದೇನೆ  ನಾವೀಗ ಮೂವರು… ಎಂದು ಡಿಸೆಂಬರ್‌ನಲ್ಲಿ ಹೊಸ ಅತಿಥಿ ಬರುವ ಬಗ್ಗೆ ಬಹಿರಂಗಪಡಿಸಿದ್ದಾರೆ. 

ಅಭಿಮಾನಿಗಳು ಭಾರೀ ಬಜೆಟ್‌ನ ಅದ್ಧೂರಿ ಚಿತ್ರ ಕೆಜಿಎಫ್ ಬಿಡುಗಡೆಗೆ ಎದುರು ನೋಡುತ್ತಿರುವ ವೇಳೆ ‘ವೈಜಿಎಫ್- ಯಶ್‌ ಇಸ್‌ ಗೋಯಿಂಗ್‌ ಟು ಬಿ ಎ ಫಾದರ್‌’ ಎಂದು ಬರೆದುಕೊಂಡಿದ್ದಾರೆ. 

 ಖುಷ್‌ ಆಗಿರುವ ಯಶ್‌ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಭಾರೀ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next