Advertisement

ಎತ್ತಿನಹೊಳೆ ಕಾಮಗಾರಿ ತ್ವರಿತ ಪೂರ್ಣ

03:09 PM Sep 16, 2019 | Team Udayavani |

ಗೌರಿಬಿದನೂರು: ಅವಿಭಜಿತ ಚಿಕ್ಕಬಳ್ಳಾಪುರ- ಕೋಲಾರ ಜಿಲ್ಲೆಯಲ್ಲಿ ತಲೆದೋರಿರುವ ಅಂತರ್ಜಲ ಕುಸಿತ ಹಾಗೂ ನೀರಿನ ಸಮಸ್ಯೆಯನ್ನು ಪರಿಹರಿಸಲು ಎತ್ತಿನಹೊಳೆ ಯೋಜನೆಯ ಕಾಮಗಾರಿಯು ತ್ವರಿತಗತಿಯಲ್ಲಿ ಪೂರ್ಣ ಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ನಗರದ ಬಸವೇಶ್ವರ ರಸ್ತೆಯಲ್ಲಿರುವ ವೀರಶೈವ ಸೇವಾ ಸಮಿತಿ ವತಿಯಿಂದ ನಿರ್ಮಾಣಗೊಂಡಿದ್ದ ನೂತನ ಕಟ್ಟಡಗಳ ಉದ್ಘಾಟನಾ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾವೇರಿ ಗೋದಾವರಿ ಹಾಗೂ ಕೃಷ್ಣಾ ನದಿಗಳ ಜೋಡಣೆ ಮೂಲಕ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರವು ನದಿ ಜೋಡಣೆ ಯೋಜನೆ ಕೈಗೆತ್ತಿಕೊಳ್ಳುತ್ತಿದೆ.

ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯ ಸಹಕಾರವನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೆ ನೀಡಲಿದೆ. ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವೀರಶೈವ ಎಂದರೆ ಕಾಯಕ ಮತ್ತು ದಾಸೋಹ ಎಂದು ಅರ್ಥ. ಇಂತಹ ಸೇವೆಯಿಂದಲೇ ಸಮುದಾಯದವರು ವೀರರಂತಿರಬೇಕಿದೆ. ಯಾರು ಕಾಯಕ ಮಾಡಿ ಆ ಮೂಲಕ ದಾಸೋಹ ಮಾಡುತ್ತಾರೋ ಅವರೇ ನಿಜವಾದ ವೀರಶೈವರು ಎಂದು ಪ್ರತಿಪಾದಿಸಿದರು.

ಕಾಯಕಕ್ಕೂ ಕರ್ತವ್ಯಕ್ಕೂ ಸ್ವಲ್ಪ ಅಂತರವಿದೆ. ಕಾಯಕದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಕೆಲಸ ಪೂರ್ಣಗೊಳ್ಳುವವರೆಗೆ ಹಿಂದಕ್ಕೆ ಹೆಜ್ಜೆಯಿಡದೆ ಕಾಯಕ ಮಾಡಿ ಅದು ಯಶಸ್ವಿಯಾದ ನಂತರ ಅದರ ಪ್ರತಿಫ‌ಲವನ್ನು ದಾಸೋಹಕ್ಕೆ ಬಳಸಿಕೊಳ್ಳುವುದೇ ವೀರಶೈವರ ಆದರ್ಶವಾಗಿದೆ ಎಂದರು. ವಿದ್ಯಾರ್ಥಿ ನಿಲಯಗಳನ್ನು ನಿರ್ಮಾಣ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತಹ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಶ್ರಮಿಸಿದ ಗೌರಿಬಿದನೂರು ತಾಲೂಕು ವೀರಶೈವ ಸೇವಾ ಸಮಿತಿ ಅಧ್ಯಕ್ಷ ಎಲ್.ಮಹದೇವಯ್ಯನವರು ಅಭಿನಂದನೆಗೆ ಅರ್ಹರು ಎಂದರು.

Advertisement

ನನ್ನ ಅವಧಿಯಲ್ಲಿ ನೀರಾವರಿ ಯೋಜನೆ: ಈ ಹಿಂದೆ ಬೃಹತ್‌ ನೀರಾವರಿ ಸಚಿವನಾಗಿದ್ದಾಗ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಲ್ಲಿನ ನೀರು ಮತ್ತು ಅಂತರ್ಜಲ ಸಮಸ್ಯೆಯನ್ನು ಮನಗಂಡು ಎತ್ತಿನಹೊಳೆ ಯೋಜನೆಯನ್ನು ರೂಪಿಸಿ ಸಮಗ್ರ ಯೋಜನಾ ವರದಿಯನ್ನು ತಯಾರಿಸಲಾಯಿತು.

ಅಂದಿನ ನಮ್ಮ ಸರ್ಕಾರ ನಮೂದನೆಯನ್ನು ನೀಡಿ ಆರ್ಥಿಕ ಅನುಮೋದನೆ ನೀಡಿತ್ತು ಎಂದು ತಿಳಿಸಿದರು. ಎತ್ತಿನಹೊಳೆ ಯೋಜನೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಡುವ ಮೂಲಕ ಕಾಲಮಿತಿಯಲ್ಲಿ ಎತ್ತಿನಹೊಳೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲು ಸರ್ಕಾರ ಆದ್ಯತೆ ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ, ತುಮಕೂರು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನುಬಳಿಗಾರ್‌, ತಾಲೂಕು ವೀರಶೈವ ಸೇವಾ ಸಮಿತಿ ಅಧ್ಯಕ್ಷ ಎಲ್.ಮಹಾದೇವಯ್ಯ, ಕಾರ್ಯಾಧ್ಯಕ್ಷ ಶಶಿಧರ್‌, ಎಸ್‌.ಎಸ್‌.ಪಾಟೀಲ್, ಕೆಪಿಟಿಸಿಎಲ್ ನಿರ್ದೇಶಕರಾದ ಶಿವಕುಮಾರ್‌, ಉಪಾಧ್ಯಕ್ಷ ಮಲ್ಲೇಶಣ್ಣ, ಕಾರ್ಯದರ್ಶಿಗಳಾದ ಶಿವಪ್ರಸಾದ್‌, ಖಜಾಂಚಿ ನಂಜಪ್ಪ, ವಿದ್ಯಾರ್ಥಿ ನಿಲಯದ ಅಧ್ಯಕ್ಷ ಚಿಕ್ಕಣ್ಣ, ನಿರ್ದೇಶಕರಾದ ನವೀನ್‌ ಕುಮಾರ್‌, ಉಮಾದೇವಿ, ಶಂಕ್ರಪ್ಪ, ರೇವಣಸಿದ್ದೇಶ್ವರ, ನಂಜುಂ ಡಪ್ಪ, ಪರಮೇಶ್‌, ಜಯಣ್ಣ ಕಾದಲವೇಣಿ, ಶಿವ ಶಂಕರ್‌, ಮಲ್ಲಿಕಾರ್ಜುನ್‌ ಪ್ರಭು ಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next