Advertisement

ಇನ್ನೂ ಹತ್ತು ಕಡೆ ಐಟಿ ದಾಳಿ; ಹಾರ್ಡ್‌ಡಿಸ್ಕ್,ದಾಖಲೆಗಳ ವಶಕ್ಕೆ

12:30 AM Jan 05, 2019 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟರು ಹಾಗೂ ನಿರ್ಮಾಪಕರ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿ ಶುಕ್ರವಾರವೂ ಮುಂದುವರಿಯಿತು.

Advertisement

ಬೆಳಗ್ಗೆ 6 ಗಂಟೆಗೇ ಶೋಧ ಕಾರ್ಯ ಆರಂಭಿಸಿದ ಐಟಿ ಅಧಿಕಾರಿಗಳು, ಮೊದಲ ದಿನ ವಶಕ್ಕೆ ಪಡೆದ ದಾಖಲೆಗಳನ್ನು ಆಧರಿಸಿ ಮತ್ತೆ ಸುಮಾರು 10ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದರು. ನಟರಾದ ಶಿವರಾಜ್‌ ಕುಮಾರ್‌, ಪುನೀತ್‌ರಾಜ್‌ ಕುಮಾರ್‌, ಸುದೀಪ್‌, ಯಶ್‌, ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌, ವಿಜಯ್‌ ಕಿರಂಗದೂರು, ಸಿ.ಆರ್‌.ಮನೋಹರ್‌, ಜಯಣ್ಣ  ಹಾಗೂ ಅವರ ಕುಟುಂಬ ಸದಸ್ಯರು ಮತ್ತು ಮನೆ ಕೆಲಸದವರು ಸೇರಿದಂತೆ ಅವರಿಗೆ ಸಂಬಂಧಪಟ್ಟ ಇತರೆ ವ್ಯಕ್ತಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದರು.

ಮನೆಯ ಪ್ರತಿ ಸದಸ್ಯರನ್ನು ಪ್ರತ್ಯೇಕವಾಗಿ ಕರೆದೊಯ್ದು ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಅಗತ್ಯ ಬಿದ್ದರೆ ಮತ್ತೂಮ್ಮೆ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗುವುದು. ಎಲ್ಲರ ಹೇಳಿಕೆಗಳನ್ನು ತಾಳೆ ಹಾಕಿ ನೋಡಲಾಗುತ್ತದೆ. ಒಂದು ವೇಳೆ ವ್ಯತ್ಯಾಸ ಕಂಡುಬಂದರೆ ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ಐಟಿ ಅಧಿಕಾರಿಗಳು ಮಾಹಿತಿ ನೀಡಿದರು.

ಶೋಧ ಕಾರ್ಯದ ವೇಳೆ ಕೆಲ ನಟ ಮತ್ತು ನಿರ್ಮಾಪಕ ಮನೆಗಳಲ್ಲಿದ್ದ ಕಂಪ್ಯೂಟರ್‌ ಹಾರ್ಡ್‌ಡಿಸ್ಕ್, ಲ್ಯಾಪ್‌ಟಾಪ್‌ಗ್ಳು ಹಾಗೂ ಇತರೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ ಶನಿವಾರವು ಸಹ ಪರಿಶೀಲನೆ ಮುಂದುವರಿಯಲಿದೆ ಎಂದು ಐಟಿ ಅಧಿಕಾರಿಗಳು ಹೇಳಿದರು.

ಗುರುವಾರ ಮುಂಜಾನೆಯೇ ಕಾರ್ಯಾಚರಣೆ ಆರಂಭಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಡರಾತ್ರಿವರೆಗೂ ತಪಾಸಣೆ ನಡೆಸಿದ್ದರು. 

Advertisement

ಗೃಹ ಬಂಧನ!
ಸದಾ ಸಿನಿಮಾ ಚಿತ್ರೀಕರಣದಲ್ಲಿ ಬ್ಯೂಸಿಯಾಗಿರುತ್ತಿದ್ದ ನಟರು ಮತ್ತು ನಿರ್ಮಾಪಕರು ಎರಡು ದಿನಗಳಿಂದ ಗೃಹ ಬಂಧನಕ್ಕೊಳಗಾಗಿದ್ದಾರೆ. ಕಳೆದ 48 ಗಂಟೆಯಿಂದ ಐಟಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿರುವುದರಿಂದ ಅಭಿಮಾನಿಗಳನ್ನಾಗಲಿ, ಸಂಬಂಧಿಕರನ್ನಾಗಲಿ ಇತರೆ ವ್ಯಕ್ತಿಗಳನ್ನಾಗಲಿ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next