Advertisement

ಯೆಸ್‌ ಬ್ಯಾಂಕ್‌ ಆರ್ಥಿಕ ಬಿಕ್ಕಟ್ಟು ರಾಜಕೀಯ ವಾಗ್ಯುದ್ಧ

10:22 AM Mar 09, 2020 | Team Udayavani |

ಹೊಸದಿಲ್ಲಿ: ಯೆಸ್‌ ಬ್ಯಾಂಕ್‌ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವಂತೆಯೇ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ರಾಜಕೀಯ ವಾಕ್ಸಮರ ಆರಂಭವಾಗಿದೆ. ಯುಪಿಎ ಅವಧಿಯಲ್ಲಿ ನೀಡಲಾದ ಸಾಲದಿಂದಲೇ ಯೆಸ್‌ ಬ್ಯಾಂಕ್‌ ಈ ಸ್ಥಿತಿಗೆ ತಲುಪಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಆರೋಪಿಸಿದ್ದರು.

Advertisement

ಅದಕ್ಕೆ ಶನಿವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ, ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ, ಬಿಜೆಪಿ ಸರಕಾರವು ಹಣಕಾಸು ಸಂಸ್ಥೆಗಳ ನಿರ್ವಹಣೆಯಲ್ಲಿ ಮಾಡಿರುವ ತಪ್ಪುಗಳೇ ಯೆಸ್‌ ಬ್ಯಾಂಕ್‌ನ ಇಂದಿನ ಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ. ಜತೆಗೆ, ಈ ಕುರಿತು ಆರ್‌ಬಿಐ ಸೂಕ್ತ ತನಿಖೆಯನ್ನು ನಡೆಸಿ, ಅವಾಂತ ರಕ್ಕೆ ಹೊಣೆಗಾರರು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದೂ ಒತ್ತಾಯಿಸಿದ್ದಾರೆ.

2014ರ ಮಾರ್ಚ್‌ನಲ್ಲಿ ಯೆಸ್‌ ಬ್ಯಾಂಕ್‌ ನೀಡಿರುವ ಸಾಲದ ಪ್ರಮಾಣ 55,633 ಕೋಟಿ ರೂ. ಇತ್ತು. 2019ರ ಮಾರ್ಚ್‌ ವೇಳೆಗೆ ಅದು 2.41 ಲಕ್ಷ ಕೋಟಿ ರೂ. ಆಗಿದ್ದು ಹೇಗೆ? ಈ ಅವಧಿಯಲ್ಲಿ ನಾನೇನೂ ವಿತ್ತ ಸಚಿವನಾಗಿರಲಿಲ್ಲ ತಾನೇ ಎಂದೂ ಪ್ರಶ್ನಿಸಿದ್ದಾರೆ. 2016-17 ಮತ್ತು 17-18ರಲ್ಲಿ ಅಂದರೆ ನೋಟು ಅಮಾನ್ಯಗೊಂಡ ಬೆನ್ನಲ್ಲೇ ಈ ಮೊತ್ತ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವೇನು? ಇದಕ್ಕೆ ಸರಕಾರ ಅಥವಾ ಆರ್‌ಬಿಐನ ಯಾರೂ ಹೊಣೆಗಾರ ರಲ್ಲವೇ ಎಂದೂ ಕೇಳಿದ್ದಾರೆ. ಜತೆಗೆ, ಆರ್ಥಿ ಕತೆಯ ನಿರ್ವಹಣೆಯ ಅತ್ಯುತ್ತಮ ತೀರ್ಪುಗಾರ ಮಾರುಕಟ್ಟೆಯೇ ಹೊರತು ವಿತ್ತ ಸಚಿವರಾಗಲೀ, ಮಾಜಿ ವಿತ್ತ ಸಚಿವರಾಗಲೀ, ಪತ್ರಿಕೆಗಳಾಗಲೀ ಅಲ್ಲ ಎಂದಿದ್ದಾರೆ.

ಈ ನಡುವೆ, ಯೆಸ್‌ ಬ್ಯಾಂಕ್‌ ಸಿಇಒ ರಾಣಾ ಕಪೂರ್‌ರನ್ನು ಶನಿವಾರ ಜಾರಿ ನಿರ್ದೇಶನಾಲಯ ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next