ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್‌ನ 2018-19ರ ಮುಂಗಡ ಪತ್ರವನ್ನು ಪಂಚಾಯತ್ ಅಧ್ಯಕ್ಷೆಯಾದ ರೂಪವಾಣಿ ಆರ್. ಭಟ್ ಇವರ ಅಧ್ಯಕ್ಷತೆಯಲ್ಲಿ ಗ್ರಾ. ಪಂಚಾಯತ್ ಉಪಾಧ್ಯಕ್ಷ ಪುಟ್ಟಪ್ಪ ಕೆ. ಖಂಡಿಗೆ ಅವರು ಮಂಡಿಸಿದರು. ಈ ವರ್ಷದ ಮುಂಗಡ ಪತ್ರದಲ್ಲಿ ಕುಡಿಯುವ ನೀರು, ವಸತಿ ಸೌಕರ್ಯ ರಸ್ತೆಗಳ ಪುನಾರಾಭಿವೃದ್ಧಿ ಅದೇ ರೀತಿ ನೀರು ಇಂಗಿಸುವಿಕೆ ನೀರು ಮರುಪೂರಣ ಯೋಜನೆ, ಎಸ್‌ಸಿ-ಎಸ್‌ಟಿ ಮಕ್ಕಳ ಶಿಕ್ಷಣ ಮತ್ತು ವೃದ್ಧರ ಶ್ರೇಯೋಭಿವೃದ್ಧಿಗೆ ಬೇಕಾದ ಯೋಜನಾ ಮೊತ್ತವನ್ನು ಈ ವರ್ಷದ ಮುಂಗಡ ಪತ್ರದಲ್ಲಿ ಮೀಸಲಿರಿಸಲಾಗಿದೆ. ಅದೇ ರೀತಿ ಸಾವಯವ ಕೃಷಿಗೆ ಮತ್ತು ಸ್ವಾವಲಂಬನೆ ಜೀವನ ಕುರಿತಾಗಿ ಮುಂಗಡ ಪತ್ರದಲ್ಲಿ ಆದ್ಯತೆ ನೀಡಲಾಗಿದೆ. ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಜಯಶ್ರೀ ಕುಲಾಲ್, ಆಯಿಷಾ ಎ.ಎ., ಉದಯ ಚೆಟ್ಟಯಾರ್, ಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಸಿದ್ದಿಖ್, ಸಿದ್ದಿಕ್ ಒಳಮೊಗರು, ಶಾರದಾ ಎಂ. ಶೇಣಿ, ಪುಷ್ಪಾ ಎಂ., ಚಂದ್ರಾವತಿ, ಅನೀಫ ನಡುಬೈಲು, ಮಮತಾ ಯು. ರೈ, ಮಲ್ಲಿಕಾ ಜೆ. ರೈ, ಶಶಿಕಲಾ ವೈ., ಸತೀಶ್ ಕುಲಾಲ್ ನಲ್ಕ ಮತ್ತು ಪಂಚಾಯತ್ ಎಚ್.ಸಿ. ಸಂತೋಷ್ ಕುಮಾರ್, ಪಂಚಾಯತ್ ಸಿಬಂದಿ ಹಾಗೂ ನಿರ್ವಹಣಾ ಉದ್ಯೋಗಸ್ಥರು ಸಭೆಯಲ್ಲಿ ಹಾಜರಿದ್ದರು. ಪಂಚಾಯತ್ ಕಾರ್ಯದರ್ಶಿ ರೆಜಿ ಮೋನ್ ಸ್ವಾಗತಿಸಿದರು. ಪಂಚಾಯತ್ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಖಂಡಿಗೆ ವಂದಿಸಿದರು.