Advertisement

ಯೇನಪೊಯ ವಿ. ವಿ: ಇಸ್ಲಾಮಿಕ್‌ ಶಿಕ್ಷಣ, ಸಂಶೋಧನಾ ಕೇಂದ್ರ ಉದ್ಘಾಟನೆ

11:46 AM Apr 06, 2017 | |

ಮಂಗಳೂರು: ವಿ.ವಿ. ಶೈಕ್ಷಣಿಕ ಸಂಪನ್ಮೂಲಗಳನ್ನು ಗಂಭೀರ ವಿಷಯಗಳ ಮೇಲೆ ಆಳವಾಗಿ ಪ್ರತಿ ಬಿಂಬಿಸಲು ಮತ್ತು ಪ್ರಚಾರ ಹಾಗೂ ಅಂತರ-ವಿಭಾಗೀಯ ಶಿಕ್ಷಣದ ದೃಷ್ಟಿ ಕೋನದಿಂದ ಎಲ್ಲಾ ವಿಷಯಗಳ ಬಗ್ಗೆ ಜ್ಞಾನವನ್ನು ವೃದ್ಧಿಸಿ ಅಂತರ್‌ದೃಷ್ಟಿಯ
ಚಿಂತನೆಯನ್ನು ಸುಗಮಗೊಳಿಸಲು, ಯೇನಪೊಯ ವಿಶ್ವವಿದ್ಯಾನಿಲಯವು ಇಸ್ಲಾಮಿಕ್‌ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ್ದು, ಇದರ ಉದ್ಘಾಟನಾ ಸಮಾರಂಭವು ಎ. 4ರಂದು ನಡೆಯಿತು.

Advertisement

ಕುಲಪತಿ ಯೇನಪೊಯ ಅಬ್ದುಲ್ಲಾ ಕುಂಞಿ ಅವರು,  ಕೇಂದ್ರದ ಉದ್ಘಾಟನೆ ಬಗ್ಗೆ ಅಪಾರ ಸಂತೋಷ ವ್ಯಕ್ತಪಡಿಸಿ, ಇದು ಯೇನಪೊಯ ವಿ.ವಿ. ಇತಿಹಾಸದಲ್ಲಿ ಮತ್ತೂಂದು ಮೈಲಿ ಗಲ್ಲಾಗಲೆಂದು ಆಶಿಸಿದರು.  ಉಪ ಕುಲಪತಿಗಳಾದ ಡಾ| ವಿಜಯಕುಮಾರ್‌ ಅವರು ಸಂಕ್ಷಿಪ್ತ ವಾಗಿ ಕೇಂದ್ರದ ಕಾರ್ಯನಿರ್ವಹಣೆ ಯ ರೀತಿ ವಿವರಿಸಿ, ಸಲಹಾ ಮಂಡಳಿ ಮಾರ್ಗದರ್ಶನದಲ್ಲಿ ಕೇಂದ್ರವು ಬಯಸಿದ ಗುರಿಗಳನ್ನು ಸರಾಗವಾಗಿ ಸಾಸಲೆಂದು ಆಶಿಸಿದರು.

ಡಾ| ಜಾವೇದ್‌ ಜಮೀಲ್‌, ಬೃಹತ್‌ ಸಾಮರ್ಥ್ಯವನ್ನು ಹೊಂದಿದ ಕೆಲಸವನ್ನು ತಮಗೆ ವಹಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತಾ, “ಇಂದಿನ ಜಗತ್ತಿ ನಲ್ಲಿ ಜೀವನ ಮತ್ತು ಮಾನವ ಕುಲದ ಯೋಗಕ್ಷೇಮದ ಬದಲಿಗೆ ಅರ್ಥಶಾಸ್ತ್ರಕ್ಕೆ ಹೆಚ್ಚು ಪ್ರಾಮುಖ್ಯತೆ
ನೀಡುತ್ತ ಧಾರ್ಮಿಕ ಮೌಲ್ಯಗಳನ್ನು ಪಕ್ಕಕ್ಕೆ ಸರಿಸಿರುವುದು  ಪ್ರಪಂಚದಲ್ಲಿ ಚಾಲ್ತಿಯಲ್ಲಿರುವ ಎಲ್ಲ ಗೊಂದಲ ಮತ್ತು ವಿವಿಧ ರೋಗಗಳ ಹರಡು ವಿಕೆಗೆ ಕಾರಣವಾಗಿದೆ’ ಎಂದು ಹೇಳಿದರು. 

ಅವರು ಇಸ್ಲಾಮಿಕ್‌ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವನ್ನು ಒಂದು ಪೂರ್ಣ ಪ್ರಮಾಣದ ವಿಭಾಗವಾಗಿ ಅಭಿವೃದ್ಧಿಪಡಿಸುವ ಅಗತ್ಯವನ್ನು ವ್ಯಕ್ತಪಡಿಸುತ್ತಾ,  ಯೆನೆಪೋಯ ವಿಶ್ವ ವಿದ್ಯಾಲಯದ ಇಂತಹ ವಿನೂತನ ಪ್ರಯತ್ನವು ಇಡೀ ವಿಶ್ವದ ಗಮನ ಸೆಳೆಯಲೆಂದು ಆಶಿಸಿದರು. ಕುಲಸಚಿವ ಡಾ| ಶ್ರೀಕುಮಾರ್‌ ಮೆನನ್‌, ಹಣಕಾಸು ನಿರ್ದೇಶಕ ´‚‌ರ್ಹಾದ್‌ ಯೇನಪೊ ಮೊದಲಾದವರು ಉಪಸ್ಥಿತರಿದ್ದರು.

ಈ ಕೇಂದ್ರವು ಆರೋಗ್ಯ ಮತ್ತು ಸಮಾಜ ವಿಜ್ಞಾನ ಸೇರಿದಂತೆ ಇಸ್ಲಾಂನ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸುವಲ್ಲಿ ಸಹಕರಿಸುತ್ತದೆ. ಖ್ಯಾತ ಚಿಂತಕ ಮತ್ತು ಇಸ್ಲಾಮಿಕ್‌ ಅಧ್ಯಯನಗಳ ಮೇಲೆ ಹೆಚ್ಚು ಪುಸ್ತಕಗಳನ್ನು ಬರೆದಿರುವ ಡಾ| ಜಾವೇದ್‌ ಜಮೀಲ್‌ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next