Advertisement

ಕೋವಿಡ್ ಎಫೆಕ್ಟ್: ದೆಹಲಿಯಲ್ಲಿ ಯೆಲ್ಲೋ ಅಲರ್ಟ್-ಸಿನಿಮಾ ಥಿಯೇಟರ್, ಮಲ್ಟಿಫ್ಲೆಕ್ಸ್ ಬಂದ್

04:17 PM Dec 28, 2021 | Team Udayavani |

ನವದೆಹಲಿ:ರಾಷ್ಟ್ರರಾಜಧಾನಿಯಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿದ್ದು, ಶ್ರೇಣಿಕೃತ ಪ್ರತಿಕ್ರಿಯೆ ಕಾರ್ಯಾಚರಣೆ ಯೋಜನೆ(ಜಿಆರ್ ಎಪಿ) ಅಡಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ(ಡಿಸೆಂಬರ್ 28) ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಕೋವಿಡ್ ಭೀತಿ: ಚಿತ್ರ ಬಿಡುಗಡೆಯನ್ನು ಮುಂದೂಡಿದ ಶಾಹಿದ್ ಕಪೂರ್

ಕಳೆದ ಕೆಲವು ದಿನಗಳಿಂದ ರಾಜಧಾನಿಯಲ್ಲಿ ಕೋವಿಡ್ 19 ಪಾಸಿಟಿವಿಟಿ ದರ ಶೇ.0.5ಕ್ಕಿಂತ ಹೆಚ್ಚಳವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.

ಮುಂದಿನ ಆದೇಶದವರೆಗೆ ಸಿನಿಮಾ ಥಿಯೇಟರ್, ಮಲ್ಟಿಫ್ಲೆಕ್ಸ್ ತೆರೆಯುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದು, ದೆಹಲಿಯಲ್ಲಿ ಯಾವುದಕ್ಕೆ ನಿರ್ಬಂಧ, ಯಾವುದಕ್ಕೆ ಅನುಮತಿ ನೀಡಲಾಗಿದೆ ಎಂಬ ವಿವರ ಇಲ್ಲಿದೆ…

  • ಶಾಪಿಂಗ್ ಕಾಂಪ್ಲೆಕ್ಸ್, ಅಂಗಡಿಗಳನ್ನು ದಿನ ಬಿಟ್ಟು, ದಿನ ತೆರೆಯಲು ಅವಕಾಶ. ಬೆಳಗ್ಗೆ 10ರಿಂದ ರಾತ್ರಿ 8ಗಂಟೆವರೆಗೆ ವ್ಯವಹಾರ ನಡೆಸಲು ಮಾತ್ರ ಅನುಮತಿ.
  • ವಾರದ ಸಂತೆಯಲ್ಲಿ ಶೇ.50ರಷ್ಟು ಮಾರಾಟಗಾರರಿಗೆ ಮಾತ್ರ ಅವಕಾಶ.
  • ರೆಸ್ಟೋರೆಂಟ್ ಗಳು ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ಶೇ.50ರಷ್ಟು ಮಾತ್ರ ಆಸನ ವ್ಯವಸ್ಥೆಯೊಂದಿಗೆ ತೆರೆಯಲು ಅನುಮತಿ
  • ಬಾರ್ ಗಳು ಕೂಡಾ ಶೇ.50ರಷ್ಟು ಆಸನ ವ್ಯವಸ್ಥೆಯೊಂದಿಗೆ ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ತೆರೆಯಲು ಅವಕಾಶ.
  • ಸಿನಿಮಾ ಹಾಲ್, ಬ್ಯಾಂಕ್ವೆಟ್ ಹಾಲ್ ಗಳು, ಸ್ಪಾ, ಜಿಮ್ಸ್, ಔಟ್ ಡೋರ್ ಯೋಗ ಚಟುವಟಿಕೆ, ಈಜುಕೊಳ, ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆಗಳು ಸಂಪೂರ್ಣ ಬಂದ್.
  • ಖಾಸಗಿ ಕಚೇರಿಗಳು ಶೇ.50ರಷ್ಟು ಸಿಬಂದಿಗಳೊಂದಿಗೆ ಕಾರ್ಯಾಚರಿಸಲು ಅವಕಾಶ ನೀಡಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next