ಯಲ್ಲಾಪುರ: ಮೀನು ಗಾಡಿ ಲಾರಿ ಮತ್ತು ದಾಳಿಂಬೆ ಸಾಗಿಸುತ್ತಿದ್ದ ಬೊಲೆರೋ ವಾಹನಗಳ ನಡುವೆ ರಾ.ಹೆದ್ದಾರಿ 63 ಗೇರಗದ್ದೆ ಕ್ರಾಸ್ ಬಳಿ ಜ.8ರ ಸೋಮವಾರ ಮುಸ್ಸಂಜೆ ಹೊತ್ತಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದಾನೆ.
ಯಲ್ಲಾಪುರ ಕಡೆಯಿಂದ ಅತೀವೇಗ ಹಾಗೂ ನಿಷ್ಕಾಳಜಿಯಿಂದ ಅಂಕೋಲಾ ಕಡೆ ಹೊರಟಿದ್ದ ಬೊಲೆರೋ ಹಾಗೂ ಎದುರಿನಿಂದ ಬಂದ ಮೀನು ಗಾಡಿ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿದೆ.
ಕಂಟೈನರ್ ಚಾಲಕ, ಆಂದ್ರಪ್ರದೇಶ ಮೂಲದ ಕೆ.ವಿ.ಸತ್ಯನಾರಾಯಣ ತೆಳ್ಳುವೂರು ಗಂಭೀರ ಗಾಯಗೊಂಡು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಕೆಲಕ್ಷಣದಲ್ಲಿ ಸಾವನ್ನಪ್ಪಿದ್ದಾರೆ.
ಪಿಕ್ ಅಪ್ ಬೊಲೆರೋ ಚಾಲಕ ಅಬ್ದುಲ್ ಅಜೀಜ್ ಮೋಹಿದ್ದಿನ್ಸಾಬ್ ದಖನಿ ಮಿಲತ್ ನಗರ ತಾಳಿಕೋಟಿ ಬೀಜಾಪುರ ಈತನ ವಿರುದ್ಧ ದೂರು ದಾಖಲಿಸಲಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳು ಜಖಂಗೊಂಡಿದೆ. ದಾಳಿಂಬೆ ಹಣ್ಣುಗಳು ಹೆದ್ದಾರಿಯಲ್ಲಿ ಚೆಲ್ಲಿ ಬಿದ್ದಿದ್ದು, ಅದನ್ನು ಹೆಕ್ಕಲು ಸಾರ್ವಜನಿಕರು ಮುಗಿಬಿದ್ದ ದೃಶ್ಯ ಕಂಡುಬಂತು. ದಾರಿಹೋಕರಿಗೆ ದಾಳಿಂಬೆ ಹಣ್ಣಿನ ಹಬ್ಬವಾಗಿದೆ.
ಅಪಘಾತದಿಂದ ಕೆಲಹೊತ್ತು ರಸ್ತೆ ಸಂಚಾರ ವ್ಯತ್ಯಯವಾಗಿತ್ತು. ನಂತರ ಪೊಲೀಲಿಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು.