Advertisement

Yellapura: ಉರುಳಿ ಬಿದ್ದ ಖಾಸಗಿ ಬಸ್‌; ಚಾಲಕ ಸಾವು

10:26 AM Jul 22, 2023 | Team Udayavani |

ಯಲ್ಲಾಪುರ: ಖಾಸಗಿ ಸಂಸ್ಥೆಯ ಬಸ್ಸೊಂದು ಉರುಳಿ ಬಿದ್ದು ಚಾಲಕ ಮೃತಪಟ್ಟ ಧಾರುಣ ಘಟನೆ ಜು.22ರ‌ ಶನಿವಾರ ಬೆಳ್ಳಂಬೆಳಿಗ್ಗೆ ಯಲ್ಲಾಪುರ ತಾಲೂಕಿನ  ರಾ.ಹೆದ್ದಾರಿ 63 ಅಪಾಯಕಾರಿ ಸ್ಥಳ ಕೆ.ಮಿಲನ್ ಹೋಟೆಲ್ ಬಳಿ ಸಂಭವಿಸಿದೆ.

Advertisement

ಘಟನೆಯಲ್ಲಿ ಇಬ್ಬರಿಗೆ ತೀವೃ ಗಾಯಗಳಾಗಿದ್ದು, ತುರ್ತು ಚಿಕಿತ್ಸೆಗೆ ಹುಬ್ಬಳ್ಳಿಗೆ ಕಳಿಸಲಾಗಿದೆ. ಒಟ್ಟು 25 ಜನ ಪ್ರಯಾಣಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ತಾಲೂಕು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿಪಿಐ ರಂಗನಾಥ ನೀಲಮ್ಮನವರ್ ಮತ್ತು ಪಿಎಸ್ಐ ರವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ಚಾಲಕನ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next