Advertisement

Yelimale: ಅಕ್ರಮ ಗೋ ಸಾಗಾಟ ತಡೆದು ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಸ್ಥಳಿಯರು

03:50 PM May 23, 2024 | Team Udayavani |

ಗುತ್ತಿಗಾರು: ರಾತ್ರಿ ವೇಳೆ ದನಗಳನ್ನು ಪಿಕಪ್ ನಲ್ಲಿ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಎಲಿಮಲೆ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ‌.

Advertisement

ಎಲಿಮಲೆಯ ಅಂಬೆಕಲ್ಲು ಕಡೆಯಿಂದ ರಾತ್ರಿ 3 ಗಂಟೆಯ ವೇಳೆಗೆ 4 ದನಗಳನ್ನು ಪಿಕ್ಅಪ್ ವಾಹನದಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದ ವೇಳೆ ಮಾಹಿತಿ ತಿಳಿದ ಸ್ಥಳೀಯ ಯುವಕರು ಎಲಿಮಲೆ-ಅಂಬೆಕಲ್ಲು ರಸ್ತೆಯ ಕಲ್ಲುಪಣೆ ಎಂಬಲ್ಲಿ ವಾಹನ ಅಡ್ಡಗಟ್ಟಿದ್ದಾರೆ.

ಈ ವೇಳೆ ವಾಹನದಿಂದ ಓಡಿದ ಇಬ್ಬರನ್ನು ಸ್ಥಳೀಯರು ಹಿಡಿದರೆಂದು ತಿಳಿದು ಬಂದಿದೆ. ಪುತ್ತೂರಿನ ಹರೀಶ್ ಮತ್ತು ಕೋಣಾಜೆಯ ಇಬ್ರಾಹಿಂ ಎಂಬವರನ್ನು ಸ್ಥಳೀಯರು ಹಿಡಿದಿದ್ದಾರೆ. ಎಲಿಮಲೆ ಭಾಗದಿಂದ ಈ ಹಿಂದೆಯೂ ಅಕ್ರಮವಾಗಿ ದನ ಸಾಗಾಟ ನಡೆಯುತ್ತಿತ್ತೆನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next