Advertisement

ಎಳೆಯರ ಚಿತ್ರಕ್ಕೆ ಶೇ.50 ರಿಯಾಯಿತಿ

03:54 PM Jun 04, 2017 | Team Udayavani |

ಕೆಲವು ಸಿನಿಮಾಗಳು ಆಗಾಗ ಅಂಥದ್ದೊಂದು ಸುದ್ದಿ ಮಾಡುತ್ತವೆ. ಈಗ ಮೊನ್ನೆಯಷ್ಟೇ ಬಿಡುಗಡೆಗೊಂಡಿದ್ದ “ಎಳೆಯರು ನಾವು ಗೆಳೆಯರು’ ಚಿತ್ರ ಈಗ ಹೊಸದ್ದೊಂದು ಸುದ್ದಿಗೆ ಕಾರಣವಾಗಿದೆ.

Advertisement

ಚಿತ್ರವನ್ನು ನೋಡಿರುವ ಬಹುತೇಕ ಮಂದಿ, ಎಳೆಯರ ಅಭಿನಯವನ್ನು ಕೊಂಡಾಡಿದ್ದಾಗಿದೆ. ಈಗ ಹೊಸ ವಿಷಯವೆಂದರೆ, ಚಿತ್ರತಂಡ, ಇಂತಹ ಚಿತ್ರ ಎಲ್ಲಾ ಮಕ್ಕಳಿಗೂ ತಲುಪಬೇಕು ಎಂಬ ಉದ್ದೇಶದಿಂದ, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಶೇ.50 ರ ರಿಯಾಯಿತಿ ದರದಲ್ಲಿ ಟಿಕೆಟ್‌ ನೀಡಲು ಸಜ್ಜಾಗಿದೆ. ಅಂದಹಾಗೆ, ಈ ಶೇ.50 ರ ರಿಯಾಯಿತಿ ದರ, ಮಲ್ಟಿಪ್ಲೆಕ್ಸ್‌ಗೆ ಅನ್ವಯಿಸುವುದಿಲ್ಲ. ಈ ಸಿನಿಮಾವನ್ನು ಮಕ್ಕಳು ನೋಡಬಹುದಾದ ಅಂಶಗಳನ್ನು ಹೊಂದಿದೆ. ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಈ ಸಿನಿಮಾ ತಲುಪಬೇಕು ಎಂಬ ಉದ್ಧೇಶ ಇಟ್ಟುಕೊಂಡಿರುವ ನಿರ್ಮಾಪಕರು, ವಿದ್ಯಾರ್ಥಿಗಳಿಗೆ ಶೇ.50 ರ ರಿಯಾಯಿತಿ ದರದಲ್ಲಿ ಟಿಕೆಟ್‌ ವಿತರಿಸಲು ಮುಂದಾಗಿದ್ದಾರೆ.

ಅಂದಹಾಗೆ, ಮಲ್ಟಿಪ್ಲೆಕ್ಸ್‌ ಹೊರತುಪಡಿಸಿ, ಚಿತ್ರ ಬಿಡುಗಡೆಯಾಗಿರುವ ಎಲ್ಲಾ ಚಿತ್ರಮಂದಿರಗಳಲ್ಲೂ ಸೋಮವಾರದಿಂದ ಗುರುವಾರದವರೆಗೆ ಈ ವಿಶೇಷ ರಿಯಾಯಿತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಶಾಲೆಯ ಗುರುತಿನ ಪತ್ರವನ್ನು ಟಿಕೆಟ್‌ ಕೌಂಟರಿನಲ್ಲಿ ತೋರಿಸಿ, ರಿಯಾಯಿತಿಯನ್ನು ಪಡೆಯಬಹುದಾಗಿದೆ. ಈ ಚಿತ್ರದಲ್ಲಿ ತುಷಾರ್‌, ಮಹೇಂದ್ರ, ಸೂರಜ್‌, ನಿಹಾಲ್‌, ತೇಜಸ್ವಿನಿ, ಪುಟ್ಟರಾಜು, ಅಚಿಂತ್ಯ, ಅಭಿಷೇಕ್‌, ಅಮೋಘ…, ಮಹತಿ ಮತ್ತಿತರರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next