Advertisement

Yelandur: ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿ!

06:20 PM Aug 02, 2023 | Team Udayavani |

ಯಳಂದೂರು: ತಾಲೂಕಿನ ಮಲ್ಲಿಗೆಹಳ್ಳಿ ಕೆಸ್ತೂರು ಹೊನ್ನೂರು ಗ್ರಾಮಗಳಲ್ಲಿ ಕಳೆದ ಎರಡು ವಾರಗಳಿಂದ ಆತಂಕ ಸೃಷ್ಟಿಸಿದ ಚಾಲಾಕಿ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಫಲವಾಗಿದೆ.

Advertisement

ಸಮೀಪದ ಕುಂತೂರು ಗುಡ್ಡದಲ್ಲಿ ಬುಧವಾರ ಬೋನಿಗೆ ಈ ಚಿರತೆ ಬಿದ್ದಿದೆ ಅಂದಾಜು 5 ರಿಂದ 6 ವರ್ಷ ಪ್ರಾಯದ ಗಂಡು ಚಿರತೆ ಇದಾಗಿದೆ ಎಂದು ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಕಳೆದ ಶುಕ್ರವಾರದಿಂದ ಈ ಚಿರತೆ ಈ ಸ್ಥಳದಲ್ಲೇ ಬೀಳು ಬಿಟ್ಟಿತ್ತು. ಇದಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬೋನನ್ನು ಇಟ್ಟಿತ್ತು. ಇದಕ್ಕಾಗಿ ಚಿರತೆ ಕಾರ್ಯಪಡೆ ತಂಡದ ಸದಸ್ಯರು ಸಾತ್ ಕೊಟ್ಟಿದ್ದರು.

ಬಿ ಆರ್ ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕಿ ದೀಪ್ ಜೆ ಕಾಂಟ್ರಾಕ್ಟರ್ ಹಾಗೂ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಸಂತೋಷ್ ಕುಮಾರ್ ನೇತೃತ್ವದ ಅರಣ್ಯ ಇಲಾಖೆಯ ತಂಡ ಈ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next