Advertisement

ಮಸ್ಕಿಯಲ್ಲಿ ಯಡಿಯೂರಪ್ಪರೇ ಅಭ್ಯರ್ಥಿ

06:13 PM Apr 08, 2021 | Team Udayavani |

ಸಿಂಧನೂರು: ಪ್ರತಿಪಕ್ಷದಲ್ಲಿದ್ದ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿಸಲು ಪ್ರತಾಪ್‌ ಗೌಡ ಪಾಟೀಲ್‌ ರಾಜೀನಾಮೆ ನೀಡಿದ್ದರು. ಆದರೆ,
ಪ್ರತಿಪಕ್ಷಗಳು ಹಣಕ್ಕಾಗಿ ಮಾರಾಟವಾಗಿದ್ದಾರೆಂಬ ಆರೋಪದಲ್ಲಿ ಹುರುಳಿಲ್ಲ. ಈ ಕ್ಷೇತ್ರದ ನಿಜವಾದ ಅಭ್ಯರ್ಥಿ ಮುಖ್ಯಮಂತ್ರಿ ಯಡಿಯೂರಪ್ಪ ಎಂದು
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

Advertisement

ಅವರು ತಾಲೂಕಿನ ವಿರೂಪಾಪುರ ಗ್ರಾಮದಲ್ಲಿ ಬುಧವಾರ ನಡೆದ ಚುನಾವಣೆ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇತಿಹಾಸದಲ್ಲಿ ಪ್ರತಿಪಕ್ಷದಲ್ಲಿದ್ದಾಗ ರಾಜೀನಾಮೆ ಸಹಜ. ಆದರೆ, ಆಡಳಿತ ಪಕ್ಷದಲ್ಲಿದ್ದುಕೊಂಡು ಸಚಿವರಾಗಿದ್ದಾಗಲೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಪ್ರತಿಪಕ್ಷದಲ್ಲಿದ್ದ ಯಡಿಯೂರಪ್ಪ ಅವರನ್ನು ಬೆಂಬಲಿಸಿದ ಇತಿಹಾಸ ಈ ದೇಶದಲ್ಲೇ ಮೊದಲು.

ಅಲ್ಲಿ ತಮ್ಮ ಕ್ಷೇತ್ರದ ಕೆಲಸಗಳಾಗುತ್ತಿರಲಿಲ್ಲ. ಅಲ್ಲಿ ತಮಗೆ ಬೆಲೆ ಇಲ್ಲವೆಂದು ಗೊತ್ತಾದ ಮೇಲೆ ರಾಜೀನಾಮೆ ನೀಡಿ ಬಂದಿದ್ದಾರೆ. ಹಣಕ್ಕಾಗಿ ಮಾರಾಟವಾಗಿದ್ದಾರೆ ಎಂಬುದು ಸುಳ್ಳು. ಅತಿ ಹೆಚ್ಚು ಸೀಟುಗಳು ಬಿಜೆಪಿಗೆ ಬಂದಿದ್ದವು. ಕಡಿಮೆ ಸೀಟು ಬಂದರೂ ವಾಮಮಾರ್ಗದಲ್ಲಿ ಜೆಡಿಎಸ್‌, ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚಿಸಿತ್ತು. ಜನರ ಮನಸ್ಸನ್ನು ಅರಿತಿದ್ದ ಪ್ರತಾಪ್‌ಗೌಡರು, ಜನರಿಗೆ ಬೆಲೆ ಕೊಡುವುದರ ಜತೆಗೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿಸಲು ರಾಜೀನಾಮೆ ನೀಡಿದರು. ಯಾವುದೇ ಹಣದ ಆಮಿಷಕ್ಕಲ್ಲ ಎಂದರು.

ಕ್ಷೇತ್ರದಲ್ಲಿ ಈಗ ಬಿಜೆಪಿ ಅಲೆ: ಯಾವ ಕೆ.ಆರ್ .ಪೇಟೆ, ಶಿರಾದಲ್ಲಿ ನಾವು ಐತಿಹಾಸಿಕ ಗೆಲುವು ದಾಖಲಿಸಿದ್ದೇವು. ಅದೇ ಫಲಿತಾಂಶ ಮಸ್ಕಿಯಲ್ಲಿ ಬರಲಿದೆ. ವಾರದ ಹಿಂದೆ ಕಾಂಗ್ರೆಸ್‌ನವರು ತಾವೇ ಗೆದ್ದು ಬಿಟ್ಟಿದ್ದೇವೆ ಎಂಬಂತೆ ಭಾವಿಸಿದ್ದರು. ಈಗ ನೋಡಿ ಕ್ಷೇತ್ರದಲ್ಲಿ ಬಿಜೆಪಿ ಅಲೆ ಎದ್ದಿದೆ. ನಾಲ್ಕೈದು ದಿನಗಳಿಂದ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಯನ್ನು ನೀವು ನೋಡಬಹುದು. ಸುನಾಮಿ ಎದ್ದಿದೆ. ಕಾಂಗ್ರೆಸ್ ಉಪಚುನಾವಣೆ ನಡೆದ 15 ಕ್ಷೇತ್ರಗಳಲ್ಲಿ ಕೊಚ್ಚಿ ಹೋದಂತೆ ಮಸ್ಕಿಯಲ್ಲೂ ಧೂಳೀಪಟವಾಗಲಿದೆ.ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಸಚಿವ ಬೈರತಿ ಬಸವರಾಜ್‌ ಮಾತನಾಡಿ, ಮಸ್ಕಿ ಕ್ಷೇತ್ರಕ್ಕೆ ಬೇಕಾದ ಎಲ್ಲ ಕೆಲಸಗಳನ್ನು ಮಾಡಿಕೊಡಲು ಬಿಜೆಪಿ ಸರಕಾರ ಬದ್ಧವಾಗಿದೆ. ನನ್ನ ಇಲಾಖೆ ಅಲ್ಲ;
ಬೇರೆ ಇಲಾಖೆ ಕೆಲಸಗಳಿದ್ದರೂ ಸುಲಭವಾಗಿ ಆಗಲಿವೆ ಎಂದರು.

Advertisement

ಕಾಂಗ್ರೆಸ್‌ನವರಿಗೆ ನಿದ್ದೆ ಬರುತ್ತಿಲ್ಲ: ಮಾಜಿ ಸಚಿವ ರಾಜುಗೌಡ ಸುರಪುರ ಮಾತನಾಡಿ, ಕಾಂಗ್ರೆಸ್‌ನವರಿಗೆ ಸರಿಯಾಗಿ ನಿದ್ರೆ ಬರುತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ.
ಶಿವಕುಮಾರ್‌ ಅವರು ತಡರಾತ್ರಿ ಕೂಡ ವಿಜಯೇಂದ್ರ ಹೆಸರು ಹೇಳುತ್ತಿದ್ದಾರೆ. ರಾಜೀನಾಮೆ ನೀಡಿದವರಲ್ಲಿ ಬೈರತಿ ಬಸವರಾಜ್‌ ಅಂತಹ ಕೋಟ್ಯಾ ಧೀಶರಿದ್ದಾರೆ. ಅವರನ್ನು ಖರೀದಿಸುವ ಶಕ್ತಿ ಕಾಂಗ್ರೆಸ್‌ ಇದೆಯಾ? ವಿಜಯೇಂದ್ರ ಚಿಂತೆಯಲ್ಲಿರುವ ಕಾಂಗ್ರೆಸ್‌ನವರಿಗೆ ಮೊದಲು ತಾಯತ ಕಟ್ಟಿಸಬೇಕಿದೆ ಎಂದರು.

ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮರೇಗೌಡ ವಿರೂಪಾಪುರ ಮಾತನಾಡಿದರು. ಸಂಸದ ಸಂಗಣ್ಣ ಕರಡಿ, ಶಾಸಕ ಹಾಲಪ್ಪ ಆಚಾರ್‌, ಮಸ್ಕಿ ಮಂಡಲ
ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎಂ.ದೊಡ್ಡಬಸವರಾಜ್‌, ಪ್ರಸನ್ನ ಪಾಟೀಲ್‌, ವಿಶ್ವನಾಥ ತೋರಣದಿನ್ನಿ, ವೀರೇಶ ಸಾಲೋನಿ,
ಮಂಜುನಾಥ ಸಾಹುಕಾರ್‌ ಕುರುಕುಂದಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next