Advertisement

ಯಡಿಯೂರಪ್ಪ ಸುಳ್ಳು ಹೇಳ್ಕೊಂಡು ತಿರುಗುತ್ತಿದ್ದಾರೆ

11:23 AM Nov 13, 2017 | Team Udayavani |

ಮಂಗಳೂರು: ಕಾಂಗ್ರೆಸ್‌ ಸರಕಾರವನ್ನು ಟೀಕಿಸಲು, ನಮ್ಮ ಮೇಲೆ ಆರೋಪಕ್ಕೆ ಬಿಜೆಪಿಯವರಿಗೆ ಯಾವುದೇ ವಿಷಯಗಳಿಲ್ಲ. ಹೀಗಾಗಿ ಬಿ.ಎಸ್‌. ಯಡಿಯೂರಪ್ಪ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Advertisement

ಬೆಳ್ತಂಗಡಿಯಲ್ಲಿ ರವಿವಾರ ಖಾಸಗಿ ಕಾರ್ಯಕ್ರಮಕ್ಕಾಗಿ ಆಗಮಿಸಿದ ವೇಳೆ ಮಂಗಳೂರು ವಿಮಾನ ನಿಲ್ದಾಣ ದಲ್ಲಿ ಸುದ್ದಿ ಗಾರ ರೊಂದಿಗೆ ಮಾತ ನಾಡಿದರು.

ಬೆಳಗಾವಿ ಅಧಿವೇಶನದಲ್ಲಿ ತಮ್ಮ ವಿರುದ್ಧದ ಹಗರಣ ದಾಖಲೆ ಬಹಿರಂಗ ಪಡಿ ಸುವುದಾಗಿ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ “ನನ್ನ ಮೇಲಾಗಲಿ ಅಥವಾ ಸರಕಾರದ ಮೇಲಾಗಲಿ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ. ಯಡಿಯೂರಪ್ಪ ಮೇಲೆಯೇ ಹಲವು ಎಫ್‌ಐಆರ್‌ಗಳಿವೆ. ಅದರ ಬಗ್ಗೆ ಅವರೇನು ಹೇಳು ತ್ತಾರೆ? ಎಂದು ಪ್ರಶ್ನಿಸಿದರು.

ಸಿಎಂ ವಿರುದ್ಧ 30ಕ್ಕೂ ಹೆಚ್ಚು  ದೂರುಗಳಿದ್ದರೂ ಎಸಿಬಿ ಎಫ್ಐಆರ್‌ ದಾಖಲಿಸಿಲ್ಲ ಎಂಬ ಬಿಜೆಪಿ ಆರೋಪಕ್ಕೂ ಉತ್ತರಿಸಿದ ಸಿದ್ದರಾಮಯ್ಯ ಯಾವುದೇ ದಾಖಲೆ, ಆಧಾರಗಳಿಲ್ಲದೆ ಎಸಿಬಿಯವರು ಹೇಗೆ ಎಫ್‌ಐಆರ್‌ ಮಾಡಲು ಸಾಧ್ಯ ಎಂದರು.

ರಾಜ್ಯದಲ್ಲಿ ಪಿಎಫ್‌ಐ ಸಂಘಟನೆ ನಿಷೇಧಿಸಬೇಕೆಂಬ ಬಿಜೆಪಿ ಒತ್ತಾಯಕ್ಕೆ ಉತ್ತರಿಸಿದ ಅವರು, ನಾವು ಎಲ್ಲ ರೀತಿಯ ಮತೀಯ ಸಂಘಟನೆಯನ್ನು ತೀವ್ರ ವಾಗಿ ವಿರೋಧಿಸುತ್ತೇವೆ ಎಂದರು. ಇನ್ನು ಕಂಬಳದ ವಿರುದ್ಧ ಪೆಟಾ ದವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ವಿಚಾರದಲ್ಲಿ ಪ್ರತಿಕ್ರಿಯಿಸಿ, ಸರಕಾರ ಕಂಬಳದ ಪರ ವಾಗಿದೆ. ಕಂಬಳದ ರಕ್ಷಣೆಗೆ ಮಸೂದೆ ಸೇರಿದಂತೆ ಎಲ್ಲ ಪೂರಕ ಕ್ರಮ ಕೈಗೊಂಡಿದೆ ಎಂದು ಹೇಳಿದರು.

Advertisement

ಸಚಿವ ಬಿ. ರಮಾನಾಥ ರೈ, ಶಾಸಕ ಅಭಯಚಂದ್ರ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಕುಮಾರ್‌, ಎಸ್‌ಪಿ ಸುಧೀರ್‌ ಕುಮಾರ್‌ ರೆಡ್ಡಿ ಅವರು ಮುಖ್ಯ ಮಂತ್ರಿ ಯವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಬೆಳ್ತಂಗಡಿ ಭೇಟಿ

ಬಿಎಂಟಿಸಿ ಮಾಜಿ ಅಧ್ಯಕ್ಷ ನಾಭಿರಾಜ್‌ ಜೈನ್‌ ಅವರ ಪುತ್ರಿಯ ಮದುವೆ ಪ್ರಯುಕ್ತದ ತಾಳಿಬಂದಿ ಕಾರ್ಯ ಕ್ರಮಕ್ಕೆ ಗುರು ವಾಯನ ಕೆರೆ ಕಿನ್ಯಮ್ಮ ಸಭಾಂಗಣಕ್ಕೆ ರವಿವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದರು.

ಮಾಧ್ಯಮದ ಮಂದಿ ಮಾತ ನಾಡಿಸಿದಾಗ ಮದುವೆಗೆ ಬಂದವ ರಿಗೆ ಏನು ಪ್ರಶ್ನೆ ಕೇಳು ತ್ತೀರಿ ಎಂದು ಸೌಜನ್ಯದಿಂದ ನಿರಾಕರಿಸಿದರು. ಮಾಧ್ಯಮದ ಜತೆ ಮಾತನಾಡುವಂತೆ ಶಾಸಕರು ಮಾಡಿದ‌ ಒತ್ತಾಯಕ್ಕೂ ಮಣಿಯಲಿಲ್ಲ.

ಮದುವೆಗೆ ಆಗಮಿಸಿದ್ದ ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್‌ ಹಾಗೂ ಮಾಜಿ ಸಚಿವೆ ಸುಮಾ ವಸಂತ್‌, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಮೊದ ಲಾದವ ರನ್ನು ಮಾತ ನಾಡಿಸಿ ದರು. ಜಿಲ್ಲಾ ಉಸ್ತು ವಾರಿ ಸಚಿವ ಬಿ. ರಮಾ ನಾಥ ರೈ, ಶಾಸಕ ಕೆ. ವಸಂತ ಬಂಗೇರ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಜಿ.ಪಂ. ಸದಸ್ಯ ಸಾಹುಲ್‌ ಹಮೀದ್‌. ಬ್ಲಾಕ್‌ ಕಾಂಗ್ರೆಸ್‌ ನಗರ ಅಧ್ಯಕ್ಷ ಬಿ. ರಾಜಶೇಖರ ಅಜ್ರಿ ಮತ್ತಿತರರು ಮುಖ್ಯಮಂತ್ರಿಗಳ ಜತೆಗಿದ್ದರು.

ಜಿಲ್ಲಾಧಿಕಾರಿ ಶಶಿಕಾಂತ್‌, ಅಪರ ಜಿಲ್ಲಾಧಿಕಾರಿ ಕುಮಾರ್‌, ಸಹಾಯಕ ಕಮಿಷನರ್‌ ರಘುನಂದನ ಮೂರ್ತಿ, ಪೊಲೀಸ್‌ ಹೆಚ್ಚುವರಿ ವರಿಷ್ಠಾಧಿಕಾರಿ ಸಹಿತ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next