ಗುರುವಾರ ಪಕ್ಷದ ರಾಜ್ಯಾಧ್ಯಕ್ಷ ಬಿ. ಎಸ್.ಯಡಿಯೂರಪ್ಪ ಕರೆದಿದ್ದ ಸಭೆಗೆ ಅತೃಪ್ತ ಮುಖಂಡರು ಗೈರು ಹಾಜರಾಗುವ ಮೂಲಕ ಸೆಡ್ಡು ಹೊಡೆದಿ ದ್ದಾರೆ. ಅಲ್ಲದೆ, ತಾವು ಈ ಹಿಂದೆ ಪತ್ರದಲ್ಲಿ ಪ್ರಸ್ತಾಪಿಸಿದ ಕೆಲವು ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದಾದರೆ
ಮಾತುಕತೆ ನಡೆಸಿ ಪ್ರಯೋಜನವಿಲ್ಲ. ಏನೇ ಇದ್ದರೂ ಈ ವಿಚಾರದಲ್ಲಿ ಹೈಕಮಾಂಡೇ ತೀರ್ಮಾನ ಕೈಗೊಳ್ಳಲಿ ಎಂದು ಮತ್ತೂಂದು
ಪತ್ರವನ್ನು ಕೆಲವು ಅತೃಪ್ತರು ಬರೆದಿದ್ದಾರೆ ಎನ್ನಲಾಗಿದೆ. ಭಿನ್ನಮತೀಯರ ಈ ನಡವಳಿಕೆಯಿಂದ ಕೆರಳಿರುವ ಯಡಿಯೂರಪ್ಪ, ಇನ್ನು ಮುಂದೆ ಪಕ್ಷದ ಆಂತರಿಕ ವಿಚಾರಗಳನ್ನು ಮಾಧ್ಯಮಗಳ ಮುಂದೆ ಕೊಂಡೊಯ್ದರೆ ಅದನ್ನು ಹೈಕಮಾಂಡ್ ಗಮನಕ್ಕೆ ತಂದು ಶಿಸ್ತು
ಕ್ರಮ ಜರುಗಿಸುವ ಎಚ್ಚರಿಕೆ ಸಂದೇಶ ನೀಡಿದ್ದಾರೆ.
Advertisement
ಇದರೊಂದಿಗೆಜ.21ಮತ್ತು 22ರಂದು ಕಲಬುರಗಿಯಲ್ಲಿ ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಣಿ ವೇಳೆಗೆ ಭಿನ್ನಮತತಾತ್ಕಾಲಿಕವಾಗಿ ಶಮನವಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಅಲ್ಲದೆ, ಕಾರ್ಯಕಾರಿಣಿಯಲ್ಲೂ ಭಿನ್ನಮತದ
ವಿಚಾರ ಪ್ರತಿಧ್ವನಿಸುವ ಸಾಧ್ಯತೆ ಕಾಣಿಸಿಕೊಂಡಿದೆ. ಯಡಿಯೂರಪ್ಪ ಅವರ ಒಟ್ಟಾರೆ ಕಾರ್ಯವೈಖರಿ ಬಗ್ಗೆ ಅಸಮಾಧಾನ
ವ್ಯಕ್ತಪಡಿಸಿ ಕೆಲವು ಹಾಲಿ ಮತ್ತು ಮಾಜಿ ಶಾಸಕರನ್ನು ಒಳಗೊಂಡಂತೆ 24 ಮಂದಿ ಮುಖಂಡರು ಇತ್ತೀಚೆಗೆ ತೀಕ್ಷ್ಣವಾಗಿ ಪತ್ರ ಬರೆದಿದ್ದರು.
ಎಂದು ಎಚ್ಚರಿಕೆಯನ್ನೂ ನೀಡಿದ್ದರು. ಪತ್ರ ಬರೆದವರೆಲ್ಲರೂ ಮೂಲ ಬಿಜೆಪಿಯವರಾಗಿದ್ದರಿಂದ ಆ ಪತ್ರ ಬಹಿರಂಗವಾಗುತ್ತಿದ್ದಂತೆ
ಯಡಿಯೂರಪ್ಪ ಅವರು 24 ಮಂದಿಯ ಪೈಕಿ 12 ಮಂದಿಯನ್ನು ಗುರುವಾರ ಮಾತುಕತೆಗೆ ಬರುವಂತೆ ಆಹ್ವಾನಿಸಿದ್ದರು. ಆದರೆ, ತುಮಕೂರಿನಲ್ಲಿ ಬುಧವಾರ ನಡೆದ ಸಭೆಯಲ್ಲಿ ಗುರುವಾರದ ಸಭೆಗೆ ಗೈರು ಹಾಜರಾಗಲು ಭಿನ್ನಮತೀಯರು ತೀರ್ಮಾನಿಸಿದ್ದರು. ಬಿಎಸ್‌ವೈ ಕಾದರೂ ಯಾರೂ ಬರಲಿಲ್ಲ:
ಸಂಜೆ 3.30ಕ್ಕೆ ಭಿನ್ನಮತೀಯರೊಂದಿಗೆ ಸಭೆಗೆ ಯಡಿಯೂರಪ್ಪ ಸಮಯ ನಿಗದಿಪಡಿಸಿದ್ದರಾದರೂ ಗಂಟೆ ನಾಲ್ಕಾದರೂ ಯಾರೂ ಬರಲಿಲ್ಲ. 5 ಗಂಟೆ ವೇಳೆಗೆ ಯಡಿಯೂರಪ್ಪ ಅವರು ಬಂದರೂ ಭಿನ್ನಮತೀಯ ಗುಂಪಿನ ಯಾರೂ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ, ಯಡಿಯೂರಪ್ಪ ಅವರು ಸಾಕಷ್ಟು ಹೊತ್ತು ಕಚೇರಿಯಲ್ಲೇ ಕುಳಿತು ಅವರಿಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಸಭೆಗೆ ಏಕೆ ಬರುತ್ತಿಲ್ಲ ಎಂಬ ಬಗ್ಗೆ ಭಿನ್ನಮತೀಯರು ಬರೆದಮತ್ತೂಂದು ಪತ್ರ ಕೈಸೇರಿತು. ಬಳಿಕ, ಅವರು ಪಕ್ಷದ ರಾಜ್ಯ ಕಾರ್ಯಕಾರಿಣಿ
ಕುರಿತ ಪೂರ್ವಸಿದಟಛಿತೆಗಳ ಬಗ್ಗೆ ಕೆಲವು ಮುಖಂಡರೊಂದಿಗೆ ಚರ್ಚಿಸಿ ವಾಪಸಾದರು ಎಂದು ತಿಳಿದು ಬಂದಿದೆ. ತಮ್ಮ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದಿದ್ದ 24 ಮಂದಿಯ ಪೈಕಿ 12 ಮಂದಿಯನ್ನು ಗುರುವಾರದ ಸಭೆಗೆ ಯಡಿಯೂರಪ್ಪ ಅವರು ಆಹ್ವಾನಿಸಿದ್ದರು. ವಿಧಾನ ಪರಿಷತ್ತಿನ ಹಾಲಿ ಸದಸ್ಯರಾದ ಎಂ.ಬಿ.ಭಾನುಪ್ರಕಾಶ್, ಸೋಮಣ್ಣ ಬೇವಿ
ನಮರದ, ಡಾ.ಎ.ಎಚ್.ಶಿವಯೋ ಗಿಸ್ವಾಮಿ, ಸಿದ್ದರಾಜು, ವಿಧಾನಸಭೆಯ ಹಾಲಿ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ,
ಮಾಜಿ ಸದಸ್ಯರಾದ ನಿರ್ಮಲ್‌ಕುಮಾರ್ ಸುರಾನಾ, ಎಸ್.ಎ.ರವೀಂದ್ರನಾಥ್, ನೇಮಿರಾಜ ನಾಯ್ಕ, ಬಿಜೆಪಿ
ಮುಖಂಡರಾದ ಮೈಸೂರಿನ ಮೈ.ವಿ.ರವಿಶಂಕರ್, ಶಿವಮೊಗ್ಗದ ಗಿರೀಶ್ ಪಟೇಲ್, ಬಾಗಲಕೋಟೆಯ ಅಶೋಕ್ ಗಸ್ತಿ, ಕೃಷ್ಣಾರೆಡ್ಡಿ ಅವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
Related Articles
ಮಾಜಿ ಸಚಿವ ಸೊಗಡು ಶಿವಣ್ಣ ಮತ್ತು ಎಂ.ಬಿ.ನಂದೀಶ್ ಅವರಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕು. ಹೊನ್ನಾಳಿಯ ಮಂಡಲ
ಅಧ್ಯಕ್ಷ ಹನುಮಂತಪ್ಪ ಅವರನ್ನು ಅಮಾನತು ಮಾಡಿರುವ ಹಾಗೂ ಇನ್ನಿತರ ಪಕ್ಷ ನಿಷ್ಠ ಕಾರ್ಯಕರ್ತರ ಮೇಲೆ ತೆಗೆದುಕೊಂಡ
ಕ್ರಮ ಕೈಬಿಡಬೇಕು. ಜತೆಗೆ, ರಾಜ್ಯ ವಕ್ತಾರರು, ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷ-ಪ್ರಧಾನ ಕಾರ್ಯದರ್ಶಿಗಳ ಆಯ್ಕೆ,
ಜಿಲ್ಲಾ ಅಧ್ಯಕ್ಷ-ಪ್ರಧಾನ ಕಾರ್ಯ ದರ್ಶಿಗಳನ್ನು ಯಾರೊಂದಿಗೂ ಚರ್ಚಿಸದೆ ಏಕಪಕ್ಷೀಯವಾಗಿ ನೇಮಕ ಮಾಡಿದ್ದು, ಅದನ್ನು
ಬದಲಾಯಿಸಿ ನಿಷ್ಠಾವಂತರಿಗೆ ಅವಕಾಶ ನೀಡಬೇಕು ಎಂಬಿತ್ಯಾದಿ ಹಲವು ಅಂಶಗಳನ್ನು ಪ್ರಸ್ತಾಪಿಸಿ ಈ ಹಿಂದೆ ಪತ್ರ ಬರೆಯಲಾಗಿತ್ತು. ಆದರೆ, ಅದಾವುದೂ ಸಾಧ್ಯವಿಲ್ಲ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೀರಿ. ಹೀಗಾಗಿ ಮಾತುಕತೆಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಹೈಕಮಾಂಡೇ ಈ ಕುರಿತು ನಿರ್ಧರಿಸಲಿ.
Advertisement