Advertisement
ಯಡಮೊಗೆ – ಹೊಸಂಗಡಿಗೆ ಸಂಪರ್ಕ ಕಲ್ಪಿಸುವ ಹೊಸದಾದ ಹೊಸಬಾಳು ಸೇತುವೆ ಕಾಮಗಾರಿಗೆ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮುತುವರ್ಜಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ 2.5 ಕೋ.ರೂ. ಮಂಜೂರಾಗಿತ್ತು. ಈ ವರ್ಷದ ಜನವರಿಯಲ್ಲಿ ಆರಂಭಗೊಂಡ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗಿದ್ದು, ಈಗ ಕೊನೆಯ ಹಂತದಲ್ಲಿದೆ.
ಹೊಸಬಾಳು ಬಳಿ ಕುಬಾj ನದಿಗೆ 40 ವರ್ಷಗಳ ಹಿಂದೆ ನಿರ್ಮಿಸಿದ್ದ ಸೇತುವೆ ಶಿಥಿಲಗೊಂಡು 3 ವರ್ಷಗಳಾಗಿದ್ದವು.ಇದಲ್ಲದೆ ಅಪಾಯಕಾರಿಯೆಂದು ಈ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಳಿಸಿ, 2018ರಲ್ಲಿ ಪರ್ಯಾಯ ವಾಗಿ ತಾತ್ಕಾಲಿಕವಾಗಿ ಮೋರಿ ನಿರ್ಮಿಸ
ಲಾಗಿತ್ತು. ಅದು ಕೂಡ ಕಳೆದ ಮಳೆಗಾಲ ದಲ್ಲಿ ಕೊಚ್ಚಿ ಹೋಗಿ ಸಂಪರ್ಕ ಕಡಿತ ಗೊಂಡಿತ್ತು. ಯಡಮೊಗೆಯಿಂದ ಹೊಸಂಗಡಿಗೆ ಸಂಪರ್ಕಿಸುವ ಈ ಸೇತುವೆಯನ್ನು ಮರು ನಿರ್ಮಾಣ ಮಾಡಬೇಕು ಎನ್ನುವ ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಯಾಗಿತ್ತು. ಅದೀಗ ಈ ಮಳೆಗಾಲದ ಸಮಯಕ್ಕೆ ಈಡೇರಿದಂತಾಗಿದೆ. ಸುದಿನ ವರದಿ
ಯಡಮೊಗೆ – ಹೊಸಂಗಡಿ ಸಂಪರ್ಕಿಸುವ ಹೊಸಬಾಳು ಸೇತುವೆ ಶಿಥಿಲಗೊಂಡ ಬಗ್ಗೆ “ಉದಯವಾಣಿ’ಯು 2018ರ ಜೂ.10ರಂದು ವಿಶೇಷ ವರದಿ ಪ್ರಕಟಿಸಿ ಗಮನಸೆಳೆದಿತ್ತು.
Related Articles
ಜನವರಿಯಲ್ಲಿ 2.5 ಕೋ.ರೂ. ವೆಚ್ಚದ ಸೇತುವೆಗೆ ಗುದ್ದಲಿಪೂಜೆ ನೆರವೇರಿಸಲಾಗಿದ್ದು, ಈಗ ಮಳೆಗಾಲಕ್ಕೂ ಮೊದಲೇ ಪೂರ್ಣಗೊಂಡಿದೆ. ಇನ್ನು ಕೆಲ ದಿನಗಳಲ್ಲಿ ಸಂಚಾರಕ್ಕೆ ಅನುವು ಮಾಡಲಾಗುವುದು. ಯಡಮೊಗೆ ಸೇತುವೆಯಿಂದ ಕಮಲಶಿಲೆ ರಸ್ತೆ ಸಂಪರ್ಕದ ಸುಮಾರು
5 ಕಿ.ಮೀ. ರಸ್ತೆ ಅಭಿವೃದ್ಧಿಗೆ ನಮ್ಮ ಗ್ರಾಮ – ನಮ್ಮ ರಸ್ತೆ ಯೋಜನೆಯಡಿ 5 ಕೋ.ರೂ. ವೆಚ್ಚದ ಕಾಮಗಾರಿ ಕೂಡ ಆರಂಭವಾಗಿದೆ. ಚುನಾವಣೆ ವೇಳೆ ಕೊಟ್ಟ ಮಾತನ್ನು ಈಗ ಈಡೇರಿಸಿದ್ದೇನೆ.
– ಬಿ.ಎಂ. ಸುಕುಮಾರ್ ಶೆಟ್ಟಿ,, ಬೈಂದೂರು ಶಾಸಕರು
Advertisement
ಶೀಘ್ರ ಸಂಚಾರಕ್ಕೆ ಅನುವುಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯದಲ್ಲೇ ಉದ್ಘಾಟಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಸೇತುವೆಯ ಎರಡೂ ಬದಿ ಸ್ವಲ್ಪ ಸಮತಟ್ಟು ಮಾಡಲು ಬಾಕಿ ಇದೆ. ರಸ್ತೆಯ ಕಾಮಗಾರಿ ನಡೆಯುತ್ತಿದೆ.
– ದುರ್ಗಾದಾಸ್, ಕಾರ್ಯನಿರ್ವಾಹಕ ಎಂಜಿನಿಯರ್,
ಲೋಕೋಪಯೋಗಿ ಇಲಾಖೆ