Advertisement

ಹಳಿ ಮೇಲೆ ಬಿದ್ದ ಮಣ್ಣು ತೆರವು ವಿಳಂಬ

11:23 AM Aug 10, 2018 | |

ಸುಬ್ರಹ್ಮಣ್ಯ : ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ ಬಳಿ ಬುಧವಾರ ಹಳಿ ಮೇಲೆ ಬಿದ್ದ ಮಣ್ಣು ತೆರವು ಕಾರ್ಯ ವಿಳಂಬವಾಗಿದೆ. ಗುರುವಾರವೂ ಕಾರ್ಮಿಕರು ತೆರವು ಕಾರ್ಯ ನಡೆಸಿದ್ದು ಮಳೆಗೆ ಗುಡ್ಡ ಮತ್ತೆ ಕುಸಿಯುತ್ತಿರುವುದು ಕಾರ್ಯಾಚರಣೆಗೆ ದೊಡ್ಡ ಸವಾಲಾಗಿದೆ. ತೆರವು ಕಾರ್ಯ ವಿಳಂಬ ಹಿನ್ನೆಲೆಯಲ್ಲಿ  ಗುರುವಾರ ಹಗಲು ಮತ್ತು ರಾತ್ರಿ ಎರಡು ಹೊತ್ತು ಸಂಚರಿಸುವ ರೈಲು ಯಾನವನ್ನು ರದ್ದುಪಡಿಸಲಾಗಿದೆ.

Advertisement

ಬುಧವಾರ ಹಳಿಯ ಮೇಲೆ ಬಿದ್ದಿದ್ದ ಗುಡ್ಡ ತೆರವು ಕಾರ್ಯಾಚರಣೆಯನ್ನು ಸಕಲೇಶಪುರ ಮತ್ತು ಮಂಗಳೂರು ವಿಭಾಗದ ಸುಮಾರು 50ರಷ್ಟು ಸಿಬಂದಿ ನಡೆಸಿದರು. ಸಂಜೆ ತನಕವಾದರೂ ಪೂರ್ಣವಾಗಿಲ್ಲ. ಈ ನಡುವೆ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ಕೂಡ ಕಾರ್ಯಾಚರಣೆಗೆ ಅಡ್ಡಿಯಾಗಿ ಪರಿಣಮಿಸಿದೆ. ಭಾರೀ ಮಳೆಯಿಂದಾಗಿ ಮತ್ತಷ್ಟು ಭೂ ಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಸಂಚರಿಸುವ ಎಲ್ಲ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.

ಸುಬ್ರಹ್ಮಣ್ಯ ರೋಡ್‌ ನೆಟ್ಟಣ ರೈಲು ನಿಲ್ದಾಣ-ಸಕಲೇಶಪುರ ನಡುವಿನ ಎಡಕುಮೇರಿ, ಸಿರಿಬಾಗಿಲು, ಕೊಡಗರವಳ್ಳಿ ಮೊದಲಾದೆಡೆ ಗುರುವಾರ ಭಾರೀ ಮಳೆಗೆ ಮೂರು ಕಡೆ ಮಣ್ಣು ಕುಸಿದು ಹಳಿಯ ಮೇಲೆ ಬಿದ್ದಿತ್ತು. ಇವುಗಳ ತೆರವು ಕಾರ್ಯಾಚರಣೆಯನ್ನು ರೈಲ್ವೇ ಇಲಾಖಾ ಸಿಬಂದಿ ನಡೆಸಿದರೂ ಮಣ್ಣು ಕುಸಿಯುತ್ತಿರುವ ಕಾರಣ ರೈಲು ಸಂಚಾರವನ್ನು ತಡೆಹಿಡಿಯಲಾಯಿತು ಎಂದು ರೈಲ್ವೇ ಅ ಧಿಕಾರಿಗಳು ತಿಳಿಸಿದ್ದಾರೆ.  ಮಂಗಳೂರಿನಿಂದ 85.47 ಮೈಲು ದೂರದ 23ನೇ ಸುರಂಗ ಬಳಿ ಹಾಗೂ ಇತರ ಸುರಂಗಗಳ ಪರಿಸರದಲ್ಲಿ ಗುಡ್ಡ ಕುಸಿತ ಉಂಟಾಗಿದ್ದರಿಂದ ಎರಡನೇ ದಿನವೂ ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next