ಯಾದಗಿರಿ: ಕೋವಿಡ್ ಕಾರಣದಿಂದ ಸುಮಾರು ಕೆಲವು ತಿಂಗಳಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು ಹೊಸವರ್ಷದ ಮೊದಲ ದಿನವೇ ಆರಂಭವಾಗಿದ್ದು ಆರಂಭದಲ್ಲಿಯೇ ಮಕ್ಕಳು ಶಾಲೆಗೆ ಆಗಮಿಸಲು ನಿರುತ್ಸಾಹ ತೋರಿದ್ದು ಜಿಲ್ಲೆಯಲ್ಲಿ ಕೇವಲ ಶೇ.27 ಮಕ್ಕಳು ಹಾಜರಾಗಿರುವ ಮಾಹಿತಿ ಲಭ್ಯವಾಗಿದೆ.
ಕೋವಿಡ್ ಕಾಲದಲ್ಲಿ ಮಕ್ಕಳು ಶಾಲೆಯಿಂದ ದೂರ ಉಳಿದು ಕೆಲವರು ಮನೆಯಿಂದಲೇ ಆನ್‌ಲೈನ್ ತರಗತಿಗಳ ಮೂಲಕ ಪಾಠ ಆಲಿಸಿದರೆ, ಇನ್ನು ಸರ್ಕಾರಿ ಶಾಲೆ ಮಕ್ಕಳ ಜ್ಞಾನಾರ್ಜನೆಗೆಆರಂಭಗೊಂಡಿದ್ದ ಮೊದಲ ಹಂತದ ವಿದ್ಯಾಗಮಕ್ಕೆ ಕೆಲವೇ ತಿಂಗಳಲ್ಲಿ ಬ್ರೇಕ್ ಬಿದ್ದು ಮಕ್ಕಳ ಶೈಕ್ಷಣಿಕ ಜೀವನವೇ ಅಸ್ತವ್ಯಸ್ತಗೊಂಡಿತ್ತು.
ಈ ಮಧ್ಯೆಯೇ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ತಮಗೂ ತರಗತಿ ನಡೆಸಲು ಅನುಮತಿ ನೀಡಲು ಸರ್ಕಾರದ ಮೇಲೆ ಒತ್ತಡ ಹೇರುವುದು ನಿಲ್ಲಿಸಿರಲಿಲ್ಲ. ಕೊನೆಗೂ ಸರ್ಕಾರ ಕೋವಿಡ್‌ಮಾರ್ಗಸೂಚಿ ಹೊರಡಿಸಿ ಶಾಲೆ ಆರಂಭಿಸಲು ಮುಂದಾಗಿದ್ದು ಮಕ್ಕಳಲ್ಲಿ ಹಲವು ಭರವಸೆ ಮೂಡಿಸಿದೆ.
ಶಾಲೆಗಳ ಆರಂಭದ ಒಂದು ದಿನಮುಂಚಿತವಾಗಿಯೇ ಬಹುತೇಕ ಶಾಲೆಗಳಿಗೆಸ್ಯಾನಿಟೈಸ್ ಮಾಡಲಾಗಿತ್ತು, ಮೊದಲ ದಿನ ಜಿಲ್ಲೆಯಲ್ಲಿಶಾಲೆಗಳಿಗೆ ತಳಿರು- ತೋರಣಗಳ ಮೂಲಕ ಅಲಂಕರಿಸಿ, ಮಕ್ಕಳಿಗೆ ಸ್ಯಾನಿಟೈಸರ್ ನೀಡಿ ಸಾಲಾಗಿಶಾಲೆಗೆ ಪ್ರವೇಶ ನೀಡಿದ್ದು ಗುರುಮಠಕಲ್‌ನ ಸರ್ಕಾರಿಪ.ಪೂ ಕಾಲೇಜು ಪ್ರೌಢ ವಿಭಾಗದಲ್ಲಿ ಕಂಡು ಬಂತು.ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಕ್ಕಳುಆಗಮಿಸಿರಲಿಲ್ಲ. ಇಷ್ಟು ದಿನ ಮಕ್ಕಳು ಶಾಲೆಗಳಿಂದ ದೂರು ಉಳಿದು ಮನೆಯಲ್ಲಿಯೇ ಪಾಠ ಕೇಳುವುದುಅರ್ಥಮಾಡಿಕೊಳ್ಳಲು ಕಷ್ಟಸಾಧ್ಯವಾಗಿತ್ತು. ಈಗಶಾಲೆಗಳು ಆರಂಭವಾಗಿದ್ದು ಮಕ್ಕಳ ಮುಂದಿನಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿದೆ. ಶಾಲೆಆರಂಭದ ಮೊದಲ ದಿನವೇ ಯಾದಗಿರಿ ಜಿಪಂ ಮುಖ್ಯ ಕಾರ್ಯನಿರ್ವಹಣಾ ಕಾರಿಶಿಲ್ಪಾ ಶರ್ಮಾ ನಗರದ ಸ್ಟೇಷನ್ ಬಜಾರ್‌ಪ್ರೌಢ ಶಾಲೆಗೆ ಭೇಟಿ ನೀಡಿದರು. ಈ ವೇಳೆವಿದ್ಯಾರ್ಥಿಯಿಂದಲೇ ಜ್ಯೋತಿ ಬೆಳೆಗಿಸಿ ಶಾಲೆಆರಂಭಿಸಲಾಯಿತು. ಬಳಿಕ ತಾಲೂಕಿನ ಅಲ್ಲಿಪುರಪ್ರೌಢಶಾಲೆಗೆ ಭೇಟಿ ನೀಡಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ ಗಮನ ಸೆಳೆದರು.
ಜಿಲ್ಲೆಯಲ್ಲಿ ಶಾಲಾರಂಭದ ಮೊದಲ ದಿನಶೇ.27 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಇಲಾಖೆಯಎಲ್ಲ ನಿರ್ದೇಶನಗಳಲ್ಲಿ ಪಾಲಿಸಿ ತರಗತಿಆರಂಭಿಸಲಾಗಿದೆ. ಶಾಲಾ ಮುಖ್ಯಸ್ಥರು ಎಸ್ ಒಪಿ ನಿಯಮ ಪಾಲಿಸಲು ಸೂಚಿಸಲಾಗಿದೆ. ಎಲ್ಲ ಶಾಲೆಗಳನ್ನು ತೋರಣದಿಂದ ಅಲಂಕರಿಸಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಲಾಗಿದೆ.
-ಶ್ರೀನಿವಾಸರೆಡ್ಡಿ, ಡಿಡಿಪಿಐ, ಯಾದಗಿರಿ
ಶಾಲೆ ಆರಂಭಗೊಂಡಿದ್ದರಿಂದ ಮಕ್ಕಳು ಉತ್ಸಾಹದಲ್ಲಿದ್ದಾರೆ. ತೋರಣ ಕಟ್ಟಿ ಶೃಂಗರಿಸಿ ಅಗತ್ಯ ಎಚ್ಚರಿಕೆ ಮೂಲಕ ಮಕ್ಕಳನ್ನು ಶಾಲೆಗೆಸ್ವಾಗತಿಸಲಾಗಿದ್ದು, ಪಾಲಕರಿಗೆ ಅಗತ್ಯ ಸೂಚನೆ ನೀಡಲಾಗಿದೆ. ಸೋಮವಾರದಿಂದ ಹೆಚ್ಚಿನ ಮಕ್ಕಳು ತರಗತಿಗಳಿಗೆ ಬರುವ ನಿರೀಕ್ಷೆಯಿದೆ.
-ಕೃಷ್ಣಾರೆಡ್ಡಿ ಚಂಡರಕಿ, ಮುಖ್ಯಗುರು, ಗುರುಮಠಕಲ್
ಇಷ್ಟು ದಿನ ಮನೆಯಲ್ಲಿಯೇ ಅಭ್ಯಾಸ ಮಾಡಿದ್ದು ಸಾಕಷ್ಟು ವಿಷಯ ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಇದೀಗ ಸರ್ಕಾರ ಶಾಲೆ ಆರಂಭಿಸಿದ್ದು ಸಂತಸ ಮೂಡಿಸಿದೆ. ಮಾಸ್ಕ್ ಧರಿಸಿ ಶಾಲೆಗೆ ಆಗಮಿಸುತ್ತಿದ್ದು ಜತೆಗೆ ಕುಡಿವ ನೀರಿನ ಬಾಟಲ್ ಸಹ ತರುತ್ತಿದ್ದೇವೆ.
-ನಿಂಗಯ್ಯ, ವಿದ್ಯಾರ್ಥಿ