ಯಾದಗಿರಿ: ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ಸೋಮವಾರ ನಗರದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ -19 ಲಸಿಕೆ ಪಡೆದರು.
ನಂತರ ನಿಯಮದಂತೆ ಕೆಲ ನಿಮಿಷಗಳ ಕಾಲ ನಿಗಾಕೊಠಡಿಯಲ್ಲಿ ಇದ್ದು, ವೈದ್ಯಕೀಯತಪಾಸಣೆಗೆ ಸ್ಪಂದಿಸಿದರು. ಬಳಿಕಮಾತನಾಡಿದ ಅವರು, ದೇಶದಲ್ಲಿ ನೀಡಲಾಗುತ್ತಿರುವ ಕೋವಿಡ್ ಲಸಿಕೆಅತ್ಯಂತ ಸುರಕ್ಷಿತವಾಗಿದೆ. ಯಾವುದೇಅಡ್ಡ ಪರಿಣಾಮಗಳಿಲ್ಲ. ಹೀಗಾಗಿಅಧಿಕಾರಿ, ಸಿಬ್ಬಂದಿ ಭಯಪಡದೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈಗ ನಾನು ಲಸಿಕೆ ಹಾಕಿಸಿಕೊಂಡಿದ್ದು,ಯಾವುದೇ ತೊಂದರೆ ಇಲ್ಲ. ಹಾಗಾಗಿ ಲಸಿಕೆ ಪಡೆಕೊಳ್ಳುವರುಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ.ಅನೇಕ ದೇಶಗಳು ಭಾರತ ಸಿದ್ಧಪಡಿಸಿದಲಸಿಕೆ ಪಡೆಯಲು ಮನವಿ ಮಾಡಿವೆ.ಹೀಗಿರುವಾಗ ದೇಶದಲ್ಲಿ ಸಂಶೋಧನೆ ಮಾಡಿದ ಲಸಿಕೆ ಬಗ್ಗೆ ಸಂಶಯ ಪಡಬಾರದು ಎಂದರು.
ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿಕಂದಾಯ ಅಧಿಕಾರಿಗಳು, ಪೊಲೀಸ್‌ಸಿಬ್ಬಂದಿ, ಪೌರ ಕಾರ್ಮಿಕರುಸೇರಿದಂತೆ ಒಟ್ಟು 25 ಸಾವಿರ ಮುಂಚೂಣಿಯಲ್ಲಿರುವ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯ ಅಧಿಕಾರಿ ಡಾ| ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ| ಸಂಜೀವ್ ಕುಮಾರ್ ರಾಯಚೂರಕರ್, ಆರ್.ಸಿ.ಎಚ್. ಡಾ| ಸೂರ್ಯಪ್ರಕಾಶ್ ಕಂದಕೂರು, ಆರ್. ಎಮ್.ಒ ಡಾ| ನೀಲಮ್ಮ, ಕೋವಿಡ್ ನೋಡಲ್ ಅಧಿಕಾರಿ ಡಾ| ಸುನೀಲ್‌ಕುಮಾರ್ ಪಾಟೀಲ್, ಡಾ| ಪ್ರೇಮ, ಸಿಸ್ಟರ್ ಸಾವಿತ್ರಿ ಇದ್ದರು.