Advertisement
ತಾಲೂಕಿನ ಬಳೂರ್ಗಿ ಗ್ರಾಮದ ವಾರ್ಡ್ ನಂ. 2ರಲ್ಲಿ ನಡೆಯುತ್ತಿರುವ ಅಂಗನವಾಡಿ ಕಾಮಗಾರಿ 2015-16ನೇ ಸಾಲಿನಲ್ಲಿ ಆರಂಭವಾಗಿದೆ. ಇಲ್ಲಿವರೆಗೂ ಕೇವಲ ಅರ್ಧ ಕಾಮಗಾರಿ ಮಾತ್ರ ಮಾಡಲಾಗಿದೆ. ಅಂಗನವಾಡಿಕಟ್ಟಡವನ್ನು ಗುತ್ತಿಗೆದಾರರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. ಹೀಗಾಗಿ ವರ್ಷ ಗತಿಸಿದರೂ ಕಾಮಗಾರಿ ಮುಗಿಯದೆ ಕುಂಟುತ್ತಾ ಸಾಗಿದೆ.
ಒಟ್ಟಿನಲ್ಲಿ ಹಳೆ ಅಂಗನವಾಡಿ ಕಟ್ಟಡವೀಗ ಶೌಚಾಲಯವಾಗಿ ಮಾರ್ಪಾಟಾಗಿದ್ದು, ಗ್ರಾಪಂ ಹೊರಗಡೆ ಅಂಗನವಾಡಿ ನಡೆಸಲಾಗುತ್ತಿದೆ. ಗ್ರಾಪಂ ಸಭೆ ಸಮಾರಂಭಗಳಿದ್ದರೆ ಅಂಗನವಾಡಿ ಮಕ್ಕಳು ಮನೆಗೆ ಹೋಗುವ ಪರಿಸ್ಥಿತಿ ಇದೆ. ಇದು 2-3 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಮಕ್ಕಳಿಗೆ ಸಮಸ್ಯೆ: ಇನ್ನೂ ಹೊಸ ಅಂಗನವಾಡಿ ಕಟ್ಟಡ ಕಾಮಗಾರಿ ಆರಂಭಗೊಂಡು ವರ್ಷ ಕಳೆದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಅಲ್ಲದೆ ಕಟ್ಟಡಕ್ಕೆ ನೀರು ಸರಿಯಾಗಿ ಬಳಸುತ್ತಿಲ್ಲ. ಸರಿಯಾಗಿ ನೀರು ಚುಮುಕಿಸದೆ ಇರುವುದರಿಂದ ಕ್ಯೂರಿಂಗ್ ಸರಿಯಾಗಿ ಆಗಿಲ್ಲ.
Related Articles
ಆಮೆಗತಿಯಲ್ಲಿ ಮತ್ತು ಕಳಪೆಯಾಗಿ ನಡೆಯುತ್ತಿರುವುದರಿಂದ ಬಹಳಷ್ಟು ಸಮಸ್ಯೆಯಾಗಿದೆ. ಒಂದು ಕಡೆ ಹಳೆ ಅಂಗನವಾಡಿ ಕಟ್ಟಡ ಶೌಚಾಲಯವಾಗಿ ಬದಲಾಗಿದ್ದರೆ, ಹೊಸ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಹೀಗಾಗಿ ಅಂಗನವಾಡಿ ಮಕ್ಕಳಿಗೆ ಬಹಳಷ್ಟು ಸಮಸ್ಯೆ ಉಂಟಾಗಿದೆ.
Advertisement
ಅಧಿಕಾರಿಗಳ ನಿರ್ಲಕ್ಷ್ಯ: ಹಳೆ ಕಟ್ಟಡ ಕಾಮಗಾರಿ ಒಂದು ಕಡೆ ಪಾಳು ಬಿದ್ದಿದ್ದರೆ, ಇನ್ನೊಂದು ಕಡೆ ಆಮೆಗತಿಯಲ್ಲಿ ಸಾಗಿರುವ ಹೊಸ ಅಂಗನವಾಡಿ ಕಟ್ಟಡವನ್ನು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಲಕ್ಷ್ಯವಹಿಸಿ ನೋಡುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನ ದಿಂದ ಅಂಗನವಾಡಿ ಮಕ್ಕಳ ಭವಿಷ್ಯ ಹಾಳಗುತ್ತಿರುವುದು ಮಾತ್ರ ಸತ್ಯಸಂಗತಿ. ಮಲ್ಲಿಕಾರ್ಜುನ ಹಿರೇಮಠ