Advertisement

2023 Flashback: ಭಾರತದಲ್ಲಿ ಬಿಡುಗಡೆಯಾದ ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳಿವು…

04:37 PM Jan 01, 2024 | Team Udayavani |

2023 ರಲ್ಲಿ ಹೆಚ್ಚಿನ ಕಾರು ತಯಾರಕ ಕಂಪೆನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಿವೆ. ಅಷ್ಟು ಮಾತ್ರವಲ್ಲದೆ ಮೊದಲು ಸಣ್ಣ ಪ್ರಮಾಣದ ಕಾರುಗಳನ್ನು ತಯಾರಿಸಿದ ಕಂಪೆನಿ ಇದೀಗ ದೊಡ್ಡ ದೊಡ್ಡ ಐಷಾರಾಮಿ ವಾಹನಗಳನ್ನು ಉತ್ಪಾದಿಸುವ ಮಟ್ಟಕ್ಕೆ ಏರಿಸುವ ಮೂಲಕ ಪ್ರಯಾಣಿಕರಿಗೂ ಅನುಕೂಲವಾಗುವಂತೆ EV ಕಾರುಗಳನ್ನು ಪರಿಚಯಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಸಾಕಷ್ಟು ಉತ್ಪಾದನೆಯನ್ನು ಕಂಡುಕೊಂಡಿದ್ದು. 2023 ರಲ್ಲಿ ಬಿಡುಗಡೆಯಾದ ಎಲೆಕ್ಟ್ರಿಕ್ ಕಾರುಗಳ ಪೈಕಿ ಕೆಲವೊಂದು ಕಾರುಗಳು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು ಹಾಗಾದರೆ 2023 ರಲ್ಲಿ ಬಿಡುಗಡೆಯಾದ ಅತ್ಯತ್ತಮ ಕರುಗಳ ಪೈಕಿ ಐದು ಕಾರುಗಳ ಪರಿಚಯವನ್ನು ನಿಮ್ಮ ಮುಂದೆ ಇಡಲಿದ್ದೇವೆ.

Advertisement

1. ಎಂಜಿ ಕಾಮೆಟ್ ಇವಿ:
ಎಂಜಿ ಕಾಮೆಟ್ ಇವಿಯು ಎಂಜಿ ಮೋಟಾರ್ ಇಂಡಿಯಾ ಪರಿಚಯಿಸಿದ ಎರಡನೇ ಆಲ್-ಎಲೆಕ್ಟ್ರಿಕ್ ಕಾರು ಮತ್ತು ಇದು ಕಾಂಪ್ಯಾಕ್ಟ್ ವಿನ್ಯಾಸದೊಂದಿಗೆ ನಾಲ್ಕು ಆಸನಗಳನ್ನು ಹೊಂದಿದೆ. ಕಾಮೆಟ್ ಇವಿ ಭಾರತದಲ್ಲಿ ಬಿಡುಗಡೆಯಾದ ಅತ್ಯಂತ ಚಿಕ್ಕ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ. ಬ್ಯಾಟರಿ ಬ್ಯಾಕಪ್ 17.3 ಕಿಲೋವ್ಯಾಟ್ ಆಗಿದೆ. ಗರಿಷ್ಠ ವೇಗ ಗಂಟೆಗೆ 100 ಕಿ.ಮೀ ಪ್ರಯಾಣಿಸಲಿದೆ.

2. ಟಾಟಾ ನೆಕ್ಸಾನ್ ಇವಿ (ಫೇಸ್ ಲಿಫ್ಟ್)
2023ರಲ್ಲಿ ಟಾಟಾ ಕಂಪೆನಿ ಪರಿಚಯಿಸಿದ ನೆಕ್ಸಾನ್ ಇವಿ ಫೇಸ್‌ಲಿಫ್ಟ್ ಅನ್ನು ಎರಡು ರೂಪಾಂತರಗಳಲ್ಲಿ ಪರಿಚಯಿಸಲಾಯಿತು. ಒಂದು ಮಧ್ಯಮ ಶ್ರೇಣಿ ಮತ್ತು ಇನ್ನೊಂದು ದೀರ್ಘ ಶ್ರೇಣಿಯ ಕಾರು. 30 ಕಿಲೋವ್ಯಾಟ್ ಬ್ಯಾಟರಿ ಪೂರ್ಣ ಚಾರ್ಜ್‌ನಲ್ಲಿ 325 ಕಿಲೋವ್ಯಾಟ್‌ಗಳ ಮಧ್ಯಮ ಶ್ರೇಣಿಯಲ್ಲಿ ಒದಗಿಸಿದರೆ. ದೀರ್ಘ-ಶ್ರೇಣಿಯ 40.5 ಕಿಲೋವ್ಯಾಟ್ ಬ್ಯಾಟರಿಯು ಬ್ಯಾಕ್‌ಅಪ್‌ನಲ್ಲಿ 465 ಕಿಮೀ ಕ್ರಮಿಸಲಿದೆ.

Advertisement

3. ಸಿಟ್ರೊಯೆನ್ ಇಸಿ3
ಸಿಟ್ರೊಯೆನ್ ಇಸಿ3, 13 ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಇದು ಐದು ಆಸನಗಳನ್ನು ಹೊಂದಿದ್ದು. ಈ ವರ್ಷದ ಫೆಬ್ರವರಿಯಲ್ಲಿ ಕಾರನ್ನು ಬಿಡುಗಡೆ ಮಾಡಲಾಗಿತ್ತು. ಸುಮಾರು 83 ಪ್ರತಿಶತ ಬಳಕೆದಾರರು EC3 ನಲ್ಲಿ ತೃಪ್ತರಾಗಿದ್ದಾರೆ. Citroen EC3 ಬೆಲೆ 11.61 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ.

4. ಹುಂಡೈ ಅಯೋನಿಕ್ 5
Ioniq 5 ಪರಿಸರ ಸ್ನೇಹಿ ವಸ್ತುಗಳಿಂದ ಮಾಡಿದ ಕ್ಯಾಬಿನ್ ಅನ್ನು ಹೊಂದಿದೆ. ಕಾರು ಸ್ಲೈಡಿಂಗ್ ಸೆಂಟರ್ ಕನ್ಸೋಲ್, ವರ್ಧಿತ ರಿಯಾಲಿಟಿ ಹೆಡ್ಸ್-ಅಪ್ ಡಿಸ್ಪ್ಲೇ (ARHUD), ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಸಂಯೋಜಿತ ಡ್ಯುಯಲ್ 12.3-ಇಂಚಿನ ಡಿಸ್ಪ್ಲೇಗಳು, ಸನ್ ರೂಫ್ ಜೊತೆಗೆ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯಂತಹ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಇತರ ವೈಶಿಷ್ಟ್ಯಗಳಲ್ಲಿ Apple CarPlay ಅಥವಾ Android Auto ಸೌಲಭ್ಯವನ್ನು ಹೊಂದಿದ್ದು, 8-ಸ್ಪೀಕರ್ ಬಾಸ್ ಸೌಂಡ್ ಸಿಸ್ಟಮ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಸೇರಿವೆ. ಹುಂಡೈ ಐನಿ 5 EBD ಜೊತೆಗೆ ABS, ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಮಕ್ಕಳ ಸೀಟ್‌ಗಳಿಗಾಗಿ Isofix ಮೌಂಟ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಹ್ಯುಂಡೈ ಹೈವೇ ಡ್ರೈವಿಂಗ್ ಅಸಿಸ್ಟ್ 2, ಫಾರ್ವರ್ಡ್ ಕೊಲಿಶನ್-ಅವಾಯಿಡೆನ್ಸ್ ಅಸಿಸ್ಟ್, ಹೈ ಬೀಮ್ ಅಸಿಸ್ಟ್ ಮತ್ತು ಡ್ರೈವರ್ ಅಟೆನ್ಶನ್ ವಾರ್ನಿಂಗ್ ಸೇರಿದಂತೆ ವಿವಿಧ ADS ವೈಶಿಷ್ಟ್ಯಗಳನ್ನು ಸಹ ಇದು ಹೊಂದಿದೆ.

5. ಮಹೀಂದ್ರ ಎಕ್ಸ್ ಯುವಿ 400 (XUV 400)
ಮಹೀಂದ್ರ ಎಕ್ಸ್ ಯುವಿ400 ಇವಿ ಬೆಲೆ ೮ ಲಕ್ಷದಿಂದ ಪ್ರಾರಂಭವಾಗುತ್ತದೆ. 15.99 ಲಕ್ಷಗಳವರೆಗೆ ಇರಲಿದ್ದು.
ಎಕ್ಸ್ ಯುವಿ400 ಇವಿ ಅನ್ನು 4 ರೂಪಾಂತರಗಳಲ್ಲಿ ನೀಡಲಾಗುತ್ತದೆ – ಎಕ್ಸ್ ಯುವಿ400 ಇವಿ ಯ ಮೂಲ ಮಾದರಿಯು EC ಮತ್ತು ಉನ್ನತ ಮಾದರಿಯು ಮಹೀಂದ್ರ ಎಕ್ಸ್ ಯುವಿ400 ಇವಿ EL ಫಾಸ್ಟ್ ಚಾರ್ಜರ್ DT ಆಗಿದೆ. ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಮತ್ತು 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಸೀಟ್‌ಗಳು ಮತ್ತು ಕೆಲವು ADAS ಉಪಕರಣಗಳಂತಹ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next