Advertisement

ಗೃಹೋಪಯೋಗಿ ಜಿಎಸ್ಟಿ:  ಜಿಎಸ್‌ಟಿ ಮಂಡಳಿಯ 28ನೇ ಸಭೆಯಲ್ಲಿ ನಿರ್ಧಾರ

06:00 AM Jul 22, 2018 | Team Udayavani |

ಹೊಸದಿಲ್ಲಿ: ಜಿಎಸ್‌ಟಿ ಮಂಡಳಿ ಮಹಿಳೆಯರಿಗೆ ಖುಷಿಯ ಸುದ್ದಿ ಕೊಟ್ಟಿದೆ. ಸ್ಯಾನಿಟರಿ ನ್ಯಾಪ್‌ಕಿನ್‌ ಅನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡ ಲಾಗಿದ್ದು, ಟಿವಿ, ಫ್ರಿಡ್ಜ್, ವಾಷಿಂಗ್‌ ಮೆಷಿನ್‌ ಮೇಲಿನ ತೆರಿಗೆ ಪ್ರಮಾಣವನ್ನು ಶೇ. 28ರಿಂದ  18ಕ್ಕೆ ಇಳಿಸಿದೆ. ದಿಲ್ಲಿಯಲ್ಲಿ ಶನಿವಾರ ನಡೆದ ಜಿಎಸ್‌ಟಿ ಮಂಡಳಿಯ 28ನೇ ಸಭೆ ಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದುವರೆಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಶೇ. 12ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಅದನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡುವ ಜತೆಗೆ ಬಿದಿರಿನ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆ ಪ್ರಮಾಣ ಶೇ. 12ಕ್ಕೆ ಇಳಿಕೆ ಮಾಡಲಾಗಿದೆ ಎಂದು ಸಭೆಯ ಬಳಿಕ ಕೇಂದ್ರ ವಿತ್ತ ಸಚಿವ ಪಿಯೂಷ್‌ ಗೋಯಲ್‌ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. 

Advertisement

ಪರಿಷ್ಕೃತ ದರಗಳು ಜು. 27ರಿಂದ ಜಾರಿಗೆ ಬರಲಿವೆ ಎಂದಿದ್ದಾರೆ. ರಾಖೀಗಳು, ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇಥೆನಾಲ್‌ ಮೇಲಿನ ತೆರಿಗೆಯನ್ನು ಶೇ. 5ಕ್ಕೆ ಇಳಿಕೆ ಮಾಡಲಾಗಿದೆ ಎಂದಿದ್ದಾರೆ ಗೋಯಲ್‌.ಜತೆಗೆ ಚರ್ಮದ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.28ರಿಂದ ಶೇ.18ಕ್ಕೆ ಇಳಿಸಲಾಗಿದೆ. ಮತ್ತೂಂದು ಮಹತ್ವದ ನಿರ್ಧಾರದಲ್ಲಿ ವಿಶೇಷ ಉಪಯೋಗದ ವಾಹನ, ಟ್ರಕ್‌, ಟ್ರೈಲರ್‌ (ದೊಡ್ಡ ಪ್ರಮಾಣ ಲಾರಿ)ಗಳಿಗೆ ತೆರಿಗೆ ಪ್ರಮಾಣ ಶೇ.18ಕ್ಕೆ ಇಳಿಸಲಾಗಿದೆ. ಸಕ್ಕರೆ ಮೇಲೆ ಸೆಸ್‌ ನಿರ್ಧಾರವನ್ನು ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.

ಏಳು ಸಾವಿರ ಕೋಟಿ ಕಮ್ಮಿ: ತೆರಿಗೆ ಪ್ರಮಾಣ ಕಡಿಮೆ ಮಾಡುವುದರಿಂದ ಕೇಂದ್ರ ಸರಕಾರಕ್ಕೆ 7 ಸಾವಿರ ಕೋಟಿ ರೂ. ತೆರಿಗೆ ಕಡಿಮೆಯಾಗಲಿದೆ. ಹೊಟೇಲ್‌ಗ‌ಳಿಗೆ ಘೋಷಣೆ ಮಾಡಲಾಗಿರುವ ತೆರಿಗೆ ಪ್ರಮಾಣದ ಬದಲಾಗಿ ಯಥಾಸ್ಥಿತಿ ಅನ್ವಯ ತೆರಿಗೆ ವಿಧಿಸಲಾಗುತ್ತದೆ.

ಅವಧಿ ವಿಸ್ತರಣೆ: ಜಿಎಸ್‌ಟಿ ವ್ಯಾಪ್ತಿಯಲ್ಲಿ ನೋಂದಣಿ ಮಾಡಿಕೊಳ್ಳುವ ಅವಧಿಯನ್ನು ಆ. 31ರ ವರೆಗೆ ವಿಸ್ತರಿಸಲಾಗಿದೆ.

ಫೈಲಿಂಗ್‌ ವಿಧಾನ ಸರಳ: ಮತ್ತೂಂದು ಮಹತ್ವದ ನಿರ್ಧಾರದಲ್ಲಿ ವಾರ್ಷಿಕವಾಗಿ 5 ಕೋಟಿ ರೂ.ವರೆಗೆ ವಹಿವಾಟು ಇರುವವರು ಸರಳವಾಗಿ ರಿಟರ್ನ್ಸ್ ಫೈಲ್‌ ಮಾಡಲು ಅವಕಾಶ ನೀಡಲಾಗಿದೆ. ಪ್ರತಿ ತಿಂಗಳು ಅವರು ತೆರಿಗೆ ಪಾವತಿ ಮಾಡಬೇಕಾಗಿದ್ದರೂ ತ್ತೈಮಾಸಿಕಕ್ಕೆ ಒಮ್ಮೆ ರಿಟರ್ನ್ಸ್ ಫೈಲ್‌ ಮಾಡಿದರೆ ಸಾಕು. ಇದೇ ವೇಳೆ ಡೀಲರ್‌ಗಳಿಗೆ ನೀಡಬೇಕಾಗಿದ್ದ ಪರಿಹಾರದ ಮೊತ್ತವನ್ನು ಹಾಲಿ 1 ಕೋಟಿ ರೂ.ಗಳಿಂದ 1.5 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ ಎಂದು ವಿತ್ತ ಸಚಿವರು ಹೇಳಿದ್ದಾರೆ. ಶೇ.93ರಷ್ಟು ಮಂದಿ ತೆರಿಗೆದಾರರು ಪ್ರತಿ ತ್ತೈಮಾಸಿಕಕ್ಕೆ ಪಾವತಿ ಮಾಡುತ್ತಿದ್ದಾರೆ. ಆ. 4ರಂದು ಮತ್ತೆ ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದೆ.

Advertisement

ಶೇ. 28ರಿಂದ 18
ಟಿವಿ, ಫ್ರಿಡ್ಜ್, ವೀಡಿಯೋ ಗೇಮ್ಸ್‌, ಲೀಥಿಯಂ ಬ್ಯಾಟರಿಗಳು, ವ್ಯಾಕ್ಯೂಮ್‌ ಕ್ಲೀನರ್‌ಗಳು, ಮಿಕ್ಸರ್‌, ಫ‌ುಡ್‌ ಗ್ರೈಂಡರ್‌ಗಳು l ಶೇವರ್‌ಗಳು, ಕೇಶ ವಿನ್ಯಾಸಕಗಳು, ವಾಟರ್‌ ಹೀಟರ್‌ಗಳು,ಇಸ್ರ್ತೀ ಪೆಟ್ಟಿಗೆ, ವಾಟರ್‌ ಕೂಲರ್‌, ಐಸ್‌ಕ್ರೀಮ್‌ ಫ್ರೀಜರ್‌, ಹ್ಯಾಂಡ್‌ ಡ್ರೈಯರ್‌, ಸೌಂದರ್ಯ ವರ್ಧಕಗಳು, ಪರ್ಫ್ಯೂಮ್‌ಗಳು, ಪೈಂಟ್‌, ವಾರ್ನಿಶ್‌,ಸುಗಂಧ ದ್ರವ್ಯ

ಇತರ ಬದಲಾವಣೆಗಳು
ಪೆಟ್ರೋಲ್‌, ಡೀಸೆಲ್‌ಗೆ ಮಿಶ್ರ ಮಾಡುವ ಇಥೆನಾಲ್‌ಗೆ ವಿಧಿಸುವ ತೆರಿಗೆ ಪ್ರಮಾಣ ಶೇ. 18 ರಿಂದ 5ಕ್ಕೆ ಇಳಿಕೆ
ಆಮದಿತ ಯೂರಿಯಾ ತೆರಿಗೆ ಶೇ.5ಕ್ಕೆ  ಇಳಿಕೆ
ಇ-ಬುಕ್‌ಗಳಿಗೆ ವಿಧಿಸ ಲಾಗುವ  ಶೇ.18ರಷ್ಟು ತೆರಿಗೆ ಶೇ.5ಕ್ಕೆ

ತೆರಿಗೆ ಮುಕ್ತ
ಸ್ಯಾನಿಟರಿ ಪ್ಯಾಡ್‌
ಮರ, ಮಾರ್ಬಲ್‌, ಕಲ್ಲುಗಳಿಂದ ಮಾಡಿದ ಮೂರ್ತಿಗಳು
ಬೆಲೆಬಾಳುವ ಲೋಹಗಳಿಲ್ಲದ ರಾಖೀಗಳು
ಪೊರಕೆ ತಯಾರಿಗೆ ಬಳಸುವ ಕಚ್ಚಾ ವಸ್ತುಗಳು
ಆರ್‌ಬಿಐ ಅಥವಾ ಸರಕಾರದಿಂದ ಬಿಡುಗಡೆ ಮಾಡಲಾಗುವ ಸ್ಮರಣಾರ್ಥ ನಾಣ್ಯಗಳು
ಮುತ್ತುಗದ ಎಲೆ 
ಫೋರ್ಟಿಫೈಡ್‌ ಮಿಲ್ಕ್ಶೇ.12ರಿಂದ 15ರ ತೆರಿಗೆ ವ್ಯಾಪ್ತಿ
ಕೈಮಗ್ಗದ ನೆಲಹಾಸು (ದರಿ)
ರಸಗೊಬ್ಬರ ಶ್ರೇಣಿಯ ಪಾಸ್ಪಾರಿಕ್‌ ಆ್ಯಸಿಡ್‌

Advertisement

Udayavani is now on Telegram. Click here to join our channel and stay updated with the latest news.

Next