Advertisement

BJP: ಯತ್ನಾಳ್‌ ಪ್ರತಿಪಕ್ಷದ ನಾಯಕ-ಅಶ್ವತ್ಥನಾರಾಯಣಗೆ ರಾಜ್ಯಾಧ್ಯಕ್ಷ ಸ್ಥಾನ?

09:53 PM Jun 20, 2023 | Team Udayavani |

ಬೆಂಗಳೂರು: ಅಡ್ಜಸ್ಟ್‌ಮೆಂಟ್‌ ರಾಜಕಾರಣ ಆರೋಪದ ಬಿಸಿ ಬಿಜೆಪಿಯಲ್ಲಿ ಇನ್ನೂ ತಳಮಳ ಸೃಷ್ಟಿಸುತ್ತಲೇ ಇದ್ದು, ವಿಪಕ್ಷ ನಾಯಕ ಸ್ಥಾನ ಹಾಗೂ ರಾಜ್ಯಾಧ್ಯಕ್ಷ ಹುದ್ದೆಗೆ ಹೊಸಬರ ನೇಮಕ ಸಾಧ್ಯತೆಗೆ ದಾರಿ ಮಾಡಿಕೊಟ್ಟಿದೆ.

Advertisement

ವಿಪಕ್ಷ ನಾಯಕ ಸ್ಥಾನಕ್ಕೆ ಬಸನಗೌಡ ಪಾಟೀಲ್‌ ಯತ್ನಾಳ್‌ ನೇಮಕ ಬಹುತೇಕ ಅಂತಿಮವಾಗಿದೆ. ಅದೇ ರೀತಿ ರಾಜ್ಯಾಧ್ಯಕ್ಷ ಹುದ್ದೆಗೆ ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಜತೆಗೆ ಶಾಸಕ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ. ಈ ಕಾಂಬಿನೇಷನ್‌ನಲ್ಲಿ ಲೋಕಸಭಾ ಚುನಾವಣೆ ಎದುರಿಸುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ಬಲವಾಗಿ ನಡೆಯುತ್ತಿದೆ.

ಈ ಬೆಳವಣಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಕಂದಾಯ ಸಚಿವ ಆರ್‌.ಅಶೋಕ ಜೋಡಿ ಕಳವಳಗೊಳ್ಳುವಂತೆ ಮಾಡಿದೆ. ಯತ್ನಾಳ್‌, ಅಶ್ವತ್ಥನಾರಾಯಣ್‌ ಪಕ್ಷದ ಎರಡು ಆಯಕಟ್ಟಿನ ಹುದ್ದೆಗಳಲ್ಲಿ ಪ್ರತಿಷ್ಠಾಪನೆಗೊಂಡರೆ ಹಳೆ ತಲೆಮಾರಿನ ನಾಯಕರೆಲ್ಲರೂ ಬಹುತೇಕವಾಗಿ ತೆರೆಗೆ ಸರಿಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಾವಿನ್ನು ಸಕ್ರಿಯ ರಾಜಕಾರಣದಲ್ಲಿ ಪ್ರಸ್ತುತ ಎಂಬುದನ್ನು ಬಿಂಬಿಸಿಕೊಳ್ಳುವುದಕ್ಕೆ ಬೊಮ್ಮಾಯಿ- ಅಶೋಕ್‌ ಜೋಡಿ ಪ್ರಯತ್ನಿಸುತ್ತಿದೆ. ಹೀಗಾಗಿಯೇ ರಾಜ್ಯ ಸರ್ಕಾರದ ವಿರುದ್ಧ ಆಕ್ರಮಣಕಾರಿ ನಡೆಯನ್ನು ಇವರಿಬ್ಬರು ಪ್ರದರ್ಶಿಸುತ್ತಿದ್ದಾರೆ ಎಂಬ ವ್ಯಾಖ್ಯಾನ ಈಗ ಬಿಜೆಪಿ ವಲಯದಲ್ಲೇ ಕೇಳಿ ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next