Advertisement

ಯತ್ನಾಳ ಬಿಜೆಪಿ ಸೇರ್ಪಡೆಗೆ ಆಗ್ರಹಿಸಿ ಪಾದಯಾತ್ರೆ

01:00 PM Mar 05, 2018 | |

ಮುದ್ದೇಬಿಹಾಳ: ಮೇಲ್ಮನೆ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಆದಷ್ಟು ಬೇಗ ಬಿಜೆಪಿಗೆ ಸೇರಿಸಿಕೊಳ್ಳಬೇಕು ಮತ್ತು ಅವರನ್ನು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು
ಎಂದು ಬಿಜೆಪಿಯ ರಾಜ್ಯ, ರಾಷ್ಟ್ರ ನಾಯಕರನ್ನು ಒತ್ತಾಯಿಸಲು ಮಾ. 6ರಂದು ಮುದ್ದೇಬಿಹಾಳದಿಂದ ವಿಜಯಪುರದವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಯತ್ನಾಳ ಅಭಿಮಾನಿ ಬಳಗದ ಮುಖಂಡರು ತಿಳಿಸಿದ್ದಾರೆ.

Advertisement

ಇಲ್ಲಿನ ಪ್ರವಾಸಿ ಮಂದಿರದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುಖಂಡರಾದ ಉದಯ ರಾಯಚೂರ, ರಾಜಶೇಖರ ಹೊಳಿ ಮತ್ತಿತರರು, ಅಂದು ಬೆಳಗ್ಗೆ ಇಲ್ಲಿನ ಗ್ರಾಮದೇವತೆ ಕಟ್ಟೆ ಮೇಲಿರುವ ದುರ್ಗಾದೇವಿ ದೇವಸ್ಥಾನದಲ್ಲಿ ಮಹಾ ಮಂಗಳಾರತಿ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಬಸರಕೋಡ, ಬಸವನಬಾಗೇವಾಡಿ, ಮನಗೂಳಿ ಮಾರ್ಗವಾಗಿ ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನ ತಲುಪಿದ ಮೇಲೆ ಅಲ್ಲಿ ಯತ್ನಾಳರ ಬಿಜೆಪಿ ಸೇರ್ಪಡೆ, ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಲ್ಲಿ ಸ್ಪರ್ಧೆ ಸಂಬಂಧ ಬಿಜೆಪಿ ಜಿಲ್ಲಾದ್ಯಕ್ಷರ ಮೂಲಕ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಪಾದಯಾತ್ರೆಯಲ್ಲಿ 80-100 ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಗ್ರಾಮಾಂತರ ಪ್ರದೇಶಗಳಿಂದ ಯತ್ನಾಳರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಳ್ಳುತ್ತಾರೆ. ಈ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲೇಬೇಕಾಗಿದೆ. ಇದಕ್ಕಾಗಿ ಯತ್ನಾಳ ಅವರೇ ಸೂಕ್ತ ಅಭ್ಯರ್ಥಿ ಆಗಿದ್ದಾರೆ. ನಾವು ಯತ್ನಾಳರ ಅಭಿಮಾನಿಗಳು. ಆದರೆ ಯಾರ ಹಿಂಬಾಲಕರೂ ಅಲ್ಲ. ಅಭಿಮಾನವೇ ಬೇರೆ,
ಹಿಂಬಾಲಿಸುವಿಕೆಯೇ ಬೇರೆ ಎಂದು ಅವರು ತಿಳಿಸಿದರು.

ಸ್ಥಳೀಯ ನಾಯಕರಲ್ಲಿ ಗೊಂದಲ ಮೂಡಬಾರದು. ಆರ್‌.ಎಸ್‌. ಪಾಟೀಲರ ಹಿಂಬಾಲಕರು, ಎಂ.ಎಸ್‌. ಪಾಟೀಲರ ಹಿಂಬಾಲಕರು ಎನ್ನುವ ಕಪ್ಪುಚುಕ್ಕೆ ನಮಗ್ಯಾರಿಗೂ ಬರಬಾರದು ಎಂದು ತೀರ್ಮಾನಿಸಿ ಮುದ್ದೇಬಿಹಾಳ ಮತಕ್ಷೇತ್ರದ ಗೆಲುವಿನ ಹಿಂಬಾಲಕರೆನ್ನಿಸಿಕೊಳ್ಳುವ ಉದ್ದೇಶದಿಂದ ಗೆಲ್ಲುವ ವ್ಯಕ್ತಿ ಯತ್ನಾಳರೇ ಇಲ್ಲಿ ಸ್ಪ ರ್ಧಿಸಬೇಕು ಎನ್ನುವ ಅಪೇಕ್ಷೆ ನಮ್ಮೆಲ್ಲರದ್ದಾಗಿದೆ
ಎಂದು ಸ್ಪಷ್ಟಪಡಿಸಿದರು. 

ರಾಘವೇಂದ್ರ ಪತ್ತಾರ, ಕೇಶವ ಪತ್ತಾರ, ಮಹಾಂತೇಶ ಹಡಪದ, ದೀಪಕ ರಾಯಚೂರ, ಶಿವಪ್ರಸಾದ ಬಳ್ಳೊಳ್ಳಿ, ವಿಠ್ಠಲ ಪತ್ತಾರ, ಹೊನ್ನೇಶ ಕೋಲಕಾರ, ಈರಣ್ಣ ಕೋಲಕಾರ, ಪ್ರಶಾಂತ ಸಜ್ಜನ, ಸಚಿನ ಸಾಳುಂಕೆ, ಉದಯ ನಲವಡೆ, ಶರಣಪ್ಪ ಯರಝರಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next