Advertisement

ಮಲೆ ಮಾದಪ್ಪನ ದರ್ಶನ ಪಡೆದು ಕಾಲ್ನಡಿಗೆಯಲ್ಲಿಯೇ ನಾಗಮಲೆಗೆ ತೆರಳಿದ ಯತೀಂದ್ರ ಸಿದ್ಧರಾಮಯ್ಯ

07:25 PM Nov 28, 2020 | mahesh |

ಹನೂರು(ಚಾಮರಾಜನಗರ): ಪ್ರಸಿದ್ದ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ಮತ್ತು ನಾಗಮಲೆ ಕ್ಷೇತ್ರಗಳಿಗೆ ವರುಣಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುತ್ರ ಯತೀಂದ್ರ ಸಿದ್ಧರಾಮಯ್ಯ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Advertisement

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಶುಕ್ರವಾರ ತಡರಾತ್ರಿಯೇ ಆಗಮಿಸಿದ್ದ ಯತೀಂದ್ರ ಸಿದ್ಧರಾಮಯ್ಯ ರಾಷ್ಟ್ರಪತಿ ಭವನ (ಅತಿಥಿ ಗೃಹ) ದಲ್ಲಿ ವಾಸ್ತವ್ಯ ಹೂಡಿದ್ದರು. ಬಳಿಕ ಬೆಳ್ಳಂಬೆಳಗ್ಗೆಯೇ 6 ಗಂಟೆಯ ವೇಳೆಗೆ ಮಲೆ ಮಾದಪ್ಪನ ದರ್ಶನ ಪಡೆದರು. ಬಳಿಕ ನಾಗಮಲೆಗೆ ತೆರಳುವ ಇಂಗಿತ ವ್ಯಕ್ತಪಡಿಸಿದ ಯತೀಂದ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಮತ್ತು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮಾದೇಶ್ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರ ಜೊತೆ ಇಂಡಿಗನತ್ತ ಗ್ರಾಮದವರೆಗೆ ಜೀಪ್‍ನಲ್ಲಿ ತೆರಳಿ ಬಳಿಕ ಕಾಲ್ನಡಿಗೆಯ ಮೂಲಕ ಶ್ರೀ ನಾಗಮಲೆ ಕ್ಷೇತ್ರಕ್ಕೆ ತೆರಳಿ ಸ್ವಾಮಿಯ ದರ್ಶನ ಪಡೆದರು.

ಬಳಿಕ ನಾಗಮಲೆ ಕ್ಷೇತ್ರದಿಂದ ಬೆಟ್ಟ ಇಳಿದು ವಾಹನದ ಮೂಲಕ ಗೋಪಿನಾಥಂಗೆ ತೆರಳಿ ಅಲ್ಲಿಂದ ಮಲೆ ಮಹದೇಶ್ವರ ಬೆಟ್ಟ ತಲುಪಿದರು.

ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ: ಈ ವೇಳೆ ಯತೀಂದ್ರ ಸಿದ್ಧರಾಮಯ್ಯ ಆಗಮಿಸಿರುವುದನ್ನು ತಿಳಿದ ಕೆಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಅವರನ್ನು ಮಾತನಾಡಿಸಲು ಶ್ರೀ ಕ್ಷೇತ್ರದಲ್ಲಿ ಕಾದು ಕುಳಿತಿದ್ದರು. ಈ ವೇಳೆಗೆ ಆಗಮಿಸಿದ ಯತೀಂದ್ರ ಕುಶಲೋಪರಿ ವಿಚಾರಿಸಿ ಔಪಚಾರಿಕ ಚರ್ಚೆ ನಡೆಸಿ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಕಿವಿಮಾತು ಹೇಳಿದರು. ಈ ವೇಳೆ ಕೆಲ ಮುಖಂಡರು ಕಾರ್ಯಕರ್ತರು ಸೆಲ್ಫಿ ತೆಗೆದುಕೊಳ್ಳಲು, ಭಾವಚಿತ್ರ ತೆಗೆಸಿಕೊಳ್ಳಲು ಮುಗಿಬಿದ್ದದ್ದು ಕಂಡುಬಂದಿತು. ಬಳಿಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next