“ಯಶೋಭೂಮಿ’ ಅನ್ನು ಇಂಡಿಯಾ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಆ್ಯಂಡ್ ಎಕ್ಸ್‌ಪೊ ಸೆಂಟರ್ ಎಂದೂ ಕರೆಯಲಾಗುತ್ತದೆ. ಒಟ್ಟು 8.9 ಲಕ್ಷ ಚ.ಮೀ. ವ್ಯಾಪ್ತಿಯಲ್ಲಿ ಕೇಂದ್ರ ಇದ್ದು, 1.8 ಲಕ್ಷ ಚ.ಮೀ. ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಲಾಗಿದೆ.
Advertisement
11,000 ಆಸನ ಸಾಮರ್ಥ್ಯ “ಯಶೋಭೂಮಿ’ ಒಟ್ಟು 15 ಸಮಾವೇಶ ಕೊಠಡಿಗಳನ್ನು ಹೊಂದಿದೆ. ಈ ಪೈಕಿ ಮುಖ್ಯ ಆಡಿಟೋರಿಯಂ, ಭವ್ಯವಾದ ಬಾಲ್‌ರೂಂ ಹಾಗೂ 13 ಮೀಟಿಂಗ್ ರೂಮ್‌ಗಳನ್ನು ಒಳಗೊಂಡಿದೆ. ಒಮ್ಮೆಗೆ ಒಟ್ಟು 11,000 ಪ್ರತಿನಿಧಿಗಳಿಗೆ ಆಸನ ವ್ಯವಸ್ಥೆ ಹೊಂದಿದೆ.
ವಿಶ್ವದ ಅತಿದೊಡ್ಡ ಪ್ರದರ್ಶನ ಸಭಾಂಗಣ ಪೈಕಿ ಒಂದನ್ನು ಯಶೋಭೂಮಿ ಹೊಂದಿದೆ. ಇದನ್ನು 1.07 ಲಕ್ಷ ಚ.ಮೀ. ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಭಾರತದ ಸಂಸ್ಕೃತಿ ಮತ್ತು ವಾಸ್ತುಶಿಲ್ಪಕ್ಕೆ ಅನುಗುಣ ವಾಗಿ ಕೇಂದ್ರ ನಿರ್ಮಿಸಲಾಗಿದೆ.
Related Articles
Advertisement
ದಿಲ್ಲಿ ಏರ್‌ಪೋರ್ಟ್ ಮೆಟ್ರೊ ಎಕ್ಸ್‌ಪ್ರೆಸ್ ಲೇನ್‌ನೊಂದಿಗೆ “ಯಶೋಭೂಮಿ’ ಸಂಪರ್ಕ ಹೊಂದಿದೆ. ಸೆ.17ರಂದೇ ಮೆಟ್ರೊ ನಿಲ್ದಾಣ ಉದ್ಘಾಟನೆ ಆಗಲಿದೆ.
ಭವ್ಯ ಬಾಲ್‌ರೂಂ
ಮುಖ್ಯ ಆಡಿಟೋರಿಯಂನಲ್ಲಿ ಒಟ್ಟು 6,000 ಪ್ರತಿನಿಧಿಗಳು, ಬಾಲ್‌ರೂಂನಲ್ಲಿ 2,500 ಅತಿಥಿಗಳಿಗೆ ಆಸನ ವ್ಯವಸ್ಥೆ ಇದೆ.