Advertisement
ಕರಾವಳಿ ಜನತೆಯ ಬಹುದಿನದ ಬೇಡಿಕೆ ಈಡೇರಿದ್ದು ಬೆಂಗಳೂರು ಕಾರವಾರ ವಾಸ್ಕೋ ನಡುವೆ ನೇರ ಸಂಪರ್ಕ ಸಾಧ್ಯವಾಗಲಿದೆ.
Related Articles
Advertisement
ಕೊಂಕಣ ರೈಲ್ವೇ ಹಳಿಯಲ್ಲಿ ಈಗಾಗಲೇ ನಿಗದಿಗಿಂತ ಹೆಚ್ಚು ರೈಲು ಓಡಾಟ ನಡೆಸುತ್ತಿದ್ದರೂ ರೈಲ್ವೇ ಸಚಿವರ ಆದೇಶದ ಮೇರೆಗೆ ಕೊಂಕಣ ರೈಲ್ವೇ ನಿಗಮವು ಹೊಸ ರೈಲು ಓಡಾಟಕ್ಕೆ ದಾರಿ ಅನುವು ಮಾಡಿಕೊಟ್ಟಿದೆ. ಇದೀಗ ರಾಜ್ಯದ ರೈಲ್ವೇ ಇಲಾಖೆ ಸಚಿವರು ಕರಾವಳಿಗೆ ಕೊಡುಗೆ ನೀಡಿದ್ದಾರೆ.
ರೈಲ್ವೇ ಬೇಡಿಕೆ ವಿಳಂಬ ಆಗುತ್ತಿದ್ದಂತೆ ಕೊಂಕಣ ರೈಲ್ವೇ ಇಲಾಖೆ ಸಚಿವ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬ ಅಪವಾದ ಕೇಳಿ ಬಂದಿತ್ತು. ಇದೀಗ ಸಚಿವ ಆದೇಶದ ಮೇರೆ ಹೊಸ ರೈಲು ಶೀಘ್ರ ಓಡಾಟ ಆರಂಭಿಸಲಿರುವುದರಿಂದ ಕರಾವಳಿ ಭಾಗದ ಜನತೆಯಲ್ಲಿ ಹರ್ಷವುಂಟಾಗಿದೆ.
ಹೊಸ ರೈಲು ಓಡಾಟಕ್ಕೆ ಸುರತ್ಕಲ್ ಆಪದ್ಭಾಂಧವ ಸಂಸ್ಥೆ ಸಂತಸ ವ್ಯಕ್ತಪಡಿಸಿದೆ. ಉಡುಪಿ -ಸುರತ್ಕಲ್ -ಬೆಂಗಳೂರಿಗೆ ನೇರ ಓಡಾಟಕ್ಕೆ ಅವಕಾಶವಾಗಿದ್ದು, ಈ ನಿಟ್ಟಿನಲ್ಲಿ ರೈಲ್ವೇ ರಾಜ್ಯ ಸಹಾಯಕ ಸಚಿವ ಸುರೇಶ್ ಅಂಗಡಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅಧ್ಯಕ್ಷ ಉಮೇಶ್ ದೇವಾಡಿಗ ಹೇಳಿದ್ದಾರೆ.