ರಾಂಚಿ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ತಮ್ಮ ಅದ್ಭುತ ಬ್ಯಾಟಿಂಗ್ ಮುಂದುವರಿಸಿದ್ದಾರೆ. ರಾಂಚಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಯಶಸ್ವಿ, ಮಾಜಿ ಆಟಗಾರ ವೀರೆಂದ್ರ ಸೆಹವಾಗ್ ದಾಖಲೆ ಮುರಿದಿದ್ದಾರೆ.
ಒಂದು ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್ ಬಾರಿಸಿದ್ದ ಸೆಹವಾಗ್ ಅವರು 16 ವರ್ಷಗಳ ಹಿಂದಿನ ಭಾರತೀಯ ದಾಖಲೆಯನ್ನು ಜೈಸ್ವಾಲ್ ಶನಿವಾರ ಮುರಿದರು.
ಜೈಸ್ವಾಲ್ ಅವರು ಇಂಗ್ಲೆಂಡ್ ಸ್ಪಿನ್ನರ್ ಶೋಯೆಬ್ ಬಶೀರ್ ಅವರ ಎಸೆತದಲ್ಲಿ ಲಾಂಗ್ ಆನ್‌ನಲ್ಲಿ ಸಿಕ್ಸರ್‌ಗೆ ಹೊಡೆದು ಸೆಹವಾಗ್ ಅವರ ದಾಖಲೆಯನ್ನು ಮುರಿದರು. ಜೈಸ್ವಾಲ್ 2024 ರ ತನ್ನ ಐದನೇ ಪಂದ್ಯದಲ್ಲಿ ಸೆಹವಾಗ್ ಅವರ ಸಂಖ್ಯೆಯನ್ನು ಮೀರಿಸಿದ್ದಾರೆ, ಆದರೆ ಮಾಜಿ ಆರಂಭಿಕ ಆಟಗಾರ ಈ ದಾಖಲೆಗಾಗಿ 14 ಪಂದ್ಯಗಳು ಮತ್ತು 27 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು.
ಸೆಹವಾಗ್ ಅವರು 2008ರಲ್ಲಿ ಟೆಸ್ಟ್ ನಲ್ಲಿ 22 ಸಿಕ್ಸರ್ ಬಾರಿಸಿದ್ದರು. 2022ರಲ್ಲಿ ರಿಷಭ್ ಪಂತ್ ಅವರು 21 ಸಿಕ್ಸರ್ ಸಿಡಿಸಿದ್ದರು. ಇದೀಗ ಯಶಸ್ವಿ ಜೈಸ್ವಾಲ್ ಅವರು 23 ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದಾರೆ.
ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್ ಹೊಡೆದ ಭಾರತೀಯರು
ಯಶಸ್ವಿ ಜೈಸ್ವಾಲ್: 2024 ರಲ್ಲಿ 23* ಸಿಕ್ಸರ್
ವೀರೆಂದ್ರ ಸೆಹವಾಗ್: 2008ರಲ್ಲಿ 22 ಸಿಕ್ಸರ್
ರಿಷಬ್ ಪಂತ್: 2022 ರಲ್ಲಿ 21 ಸಿಕ್ಸರ್
ರೋಹಿತ್ ಶರ್ಮಾ: 2019 ರಲ್ಲಿ 20 ಸಿಕ್ಸರ್
ಮಯಾಂಕ್ ಅಗರ್ವಾಲ್: 2019 ರಲ್ಲಿ 18 ಸಿಕ್ಸರ್