Advertisement
ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಸ್ವೀಕರಿಸಿ, ಕೆಲಸ ಮಾಡಿದ ಚಿತ್ರಗಳ ಮೇಲೆ ಅತೀವ ನಂಬಿಕೆ ಇಟ್ಟವರು. ನಂಬಿಕೆ ಹುಸಿಯಾದಾಗ, ಮತ್ತದೇ ನಂಬಿಕೆಯಲ್ಲೆ ಕೆಲಸ ಮಾಡುತ್ತ ಬಂದವರು. ಅವರೀಗ ಖುಷಿಯಲ್ಲಿದ್ದಾರೆ. ಆ ಖುಷಿಗೆ ಕಾರಣ, ಈ ವರ್ಷ ಅವರು ಅಭಿನಯಿಸಿರುವ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಆ ಕುರಿತು ಯಶಸ್ ಸೂರ್ಯ “ಉದಯವಾಣಿ’ ಜೊತೆ ಮಾತನಾಡಿದ್ದು ಹೀಗೆ.
Related Articles
Advertisement
ಆ ಟೀಮ್ ಕೂಡ ಯಾಕೋ, ಸುಮ್ಮನಾಯ್ತು. ನಾನು ಎರಡು ವರ್ಷ ಕಾದಿದ್ದೂ ವೇಸ್ಟ್ ಆಗೋಯ್ತು. ಅದರಿಂದ ನಾನು ಬಹಳಷ್ಟು ಪಾಠ ಕಲಿತಿದ್ದೂ ಉಂಟು. ಆ ಬಳಿಕ “ಚಕ್ರವರ್ತಿ’, “ಸೈಕೋ ಶಂಕ್ರ’,” “ಜಿಲೇಬಿ’ ಸೇರಿದಂತೆ ಒಂದಷ್ಟು ಚಿತ್ರ ಮಾಡಿದೆ. ಅವ್ಯಾವೂ ಸದ್ದು ಮಾಡಲಿಲ್ಲ. ಇನ್ನು ಮುಂದೆಯಾದರೂ ಸದ್ದು ಮಾಡವ ಚಿತ್ರದಲ್ಲಿ ನಾನಿರಬೇಕು ಅಂತ ನಿರ್ಧರಿಸಿದ್ದೇನೆ ಎಂಬುದು ಯಶಸ್ ಸೂರ್ಯ ಮಾತು.
“ರಾಮಧಾನ್ಯ’ ಚಿತ್ರದ ಬಿಡುಗಡೆಗೆ ಕಾದಿರುವ ಅವರು, “ಅದು ನನ್ನ ಪಾಲಿನ ವಿಶೇಷ ಎನ್ನಬಹುದು. ಯಾಕೆಂದರೆ, ಅದರಲ್ಲಿ ನನ್ನದು ನಾಲ್ಕು ಶೇಡ್ ಇರುವ ವಿಭಿನ್ನ ಪಾತ್ರ. ಈ ಹಿಂದೆ ಬೇರೆ ಜಾನರ್‌ನ ಕಥೆವುಳ್ಳ ಚಿತ್ರದಲ್ಲಿ ಮಾಡಿದ್ದೆ. ಇಲ್ಲಿ ಕನಕದಾಸರು, ರಾಮ ಕುರಿತ ವಿಷಯವಿದೆ. ಅಭಿನಯಕ್ಕೆ ಹೆಚ್ಚ ಒತ್ತು ಇರುವಂತಹ ಪಾತ್ರ ಇಲ್ಲಿದೆ. ಇನ್ನು, “ಚಿಟ್ಟೆ’ ನನಗೊಂದು ವಿಶೇಷ ಚಿತ್ರ.
ಅದೊಂದು ಗಂಡ-ಹೆಂಡತಿ ನಡುವಿನ ಸಾಮರಸ್ಯ ಸಾರುವ ಚಿತ್ರ. ಲವ್‌ಸ್ಟೋರಿ ಇದೆ, ರೊಮ್ಯಾನ್ಸ್ ಇದೆ. ಅದಕ್ಕಿಂತ ಹೆಚ್ಚಾಗಿ ಸಾಕಷ್ಟು ಸಂದೇಶವೂ ಇದೆ. ಈ ಚಿತ್ರ ಬಿಡುಗಡೆ ಎದುರು ನೋಡುತ್ತಿದ್ದೇನೆ. ನಂತರ “ಲಂಕಾಪುರ’ ಎಂಬ ಚಿತ್ರ ಸೆಟ್ಟೇರಲಿದೆ. ಒಂದಂತೂ ನಿಜ. ನನಗೊಂದು ಬ್ರೇಕ್ ಬೇಕು. ಅದಕ್ಕಾಗಿ ಕಾಯುತ್ತಿರುವುದಂತೂ ಸತ್ಯ. ಇದುವರೆಗೆ ಮಾಡಿದ ಚಿತ್ರಗಳೆಲ್ಲವೂ ಹೇಗೋ ಗೊತ್ತಿಲ್ಲ.
ಇನ್ನು ಮುಂದೆ ಗಟ್ಟಿ ಇರುವ ಕಥೆ, ಪಾತ್ರ ಒಪ್ಪಿ ಮಾಡುತ್ತೇನೆ. ಪ್ರತಿಯೊಬ್ಬ ನಟನಿಗೂ ತಾನು ಮಾಡಿದ ಚಿತ್ರದ ಮೇಲೆ ನಿರೀಕ್ಷೆ ಇರುತ್ತೆ. ಆರಂಭದಲ್ಲಿ ಕಥೆ ಹೇಳುವ ನಿರ್ದೇಶಕರು ಹಾಗೇ ಚಿತ್ರ ಮಾಡಿದರೆ, ಎಲ್ಲವೂ ಸರಿ ಇರುತ್ತೆ. ಆದರೆ, ಹಾಗೆ ಆಗಲ್ಲ. ನಾನೂ ಕೆಲವೊಮ್ಮೆ ಎಡವಿದ್ದೇನೆ. ಮುಂದೆ ಹಾಗೆ ಆಗುವುದಿಲ್ಲ ಎನ್ನುತ್ತಾರೆ ಯಶಸ್ ಸೂರ್ಯ.