Advertisement
ತಾಲೂಕಿನ ಮಲ್ಲನಕುಪ್ಪೆ, ಚಿಕ್ಕರಸಿನಕೆರೆ, ದೊಡ್ಡರಸಿನಕೆರೆ ಗ್ರಾಮಗಳಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ಜಾತಿಯನ್ನು ಮುಂದಿಟ್ಟುಕೊಂಡು ಯಾರೂ ರಾಜಕಾರಣ ಮಾಡಬಾರದು.
ಗ್ರಾಮದಲ್ಲೂ ಸಾಕ್ಷಿ ಸಿಗಲಿದೆ. ಅದನ್ನು ನೋಡುವ ಕಣ್ಣು ಬೇಕು. ಇನ್ನು ಸುಮಲತಾ ಅವರಿಗಿರುವ ಅರ್ಹತೆ ಮೇಲೆ ಜಿಲ್ಲೆಯ ಅಭಿವೃದ್ಧಿ ಪರವಾಗಿ ಮತ ಕೇಳುತ್ತಿದ್ದಾರೆ. ಜನರ ಸೇವೆ ಮಾಡುವುದಕ್ಕೆ ಅವರಿಗೆ ಅವಕಾಶ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂಬರೀಶ್ ಬಗ್ಗೆ ಗೌರವವಿದ್ದ ಕಾರಣಕ್ಕೆ ಅಂಬರೀಶ್ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅಂಬರೀಶ್ ಇಂಡಿಯಾದಲ್ಲಿ ಪ್ರಸಿದ್ಧಿಯಾಗಿರುವುದಕ್ಕೆ ಇದು ಸಾಕ್ಷಿ ಎಂದ ಯಶ್, ಮೂರ್‍ನಾಲ್ಕು ಸುಮಲತಾ ಅವರನ್ನು ಕಣಕ್ಕಿಳಿಸಿ ಜನರನ್ನು ಮೂರ್ಖರನ್ನಾಗಿ ಮಾಡಲು ಮುಂದಾಗಿರುವವರಿಗೆ ಜನರೇ ಉತ್ತರ ನೀಡುವರು ಎಂದರು.
Related Articles
Advertisement
ಮಂಡ್ಯದ ಗಂಡು ಅಂಬಿ, ಮಂಡ್ಯದ ಗೌಡ್ತಿ ಸುಮಕ್ಕದೇಶದಲ್ಲಿ ಎಲ್ಲೇ ಹೋದರೂ ಮದ್ದೂರು ವಡೆ ಫೇಮಸ್. ಫೈವ್ ಸ್ಟಾರ್ ಹೋಟೆಲ್‌ಗಳಲ್ಲೂ ಮದ್ದೂರು ವಡೆ ಅಂತ ಬೋರ್ಡ್ ಹಾಕಿದ್ದಾರೆ. ಅದಕ್ಕೆ ಕಾರಣ ನಮ್ಮತನ. ಅದೇ ರೀತಿ ಅಂಬರೀಶಣ್ಣ ಮಂಡ್ಯದಿಂದ ಇಂಡಿಯಾವರೆಗೆ ಫೇಮಸ್ ಆಗಿದ್ದಾರೆ. ನಮ್ಮತನವನ್ನು ಬಿಟ್ಟು μಜ್ಜಾ, ಬರ್ಗರ್ ಆಸೆಗೆ ಬಿದ್ದರೆ ನಮ್ ಕಥೆ ಮುಗೀತು. ಮದ್ದೂರು ವಡೆ ಮಾದರಿಯಲ್ಲೇ ಮಂಡ್ಯದ ಗಂಡು ಅಂಬರೀಶ್, ಮಂಡ್ಯದ ಗೌಡ್ತಿ ಸುಮಕ್ಕ ನಮ್ಮ ಸ್ವಾಭಿಮಾನ ಎನ್ನುವುದನ್ನು ಯಾರೂ ಮರೆಯಬಾರದು ಎಂದು ನಟ ಯಶ್ ಹೇಳಿದರು. ಸುಮಲತಾ ಗೌಡ್ತಿನೇ ಅಲ್ಲ, ಹೊರಗಿನವರು ಎಂಬು ಬಿಂಬಿಸಲು ಹೊರಟರೆ ಜನರು ಮೂರ್ಖರಲ್ಲ. ಧೈರ್ಯ ಮಾಡಿ ಹೆಣ್ಣು ಮಗಳೊಬ್ಬಳು ಚುನಾವಣೆಗೆ ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಅವರನ್ನು ಬೆಂಬಲಿಸಿ ಪ್ರೋತ್ಸಾಹಿಸಬೇಕೇ ಹೊರತು ಕೀಳುಮಟ್ಟದ ಹೇಳಿಕೆ ನೀಡಬಾರದು ಎಂದರು.