Advertisement

ಯಶ್‌ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರತಿಷ್ಠಾನ ಪ್ರಶಸ್ತಿ

12:57 AM Aug 29, 2019 | Lakshmi GovindaRaj |

ಬೆಂಗಳೂರು: ಚಿತ್ರರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ, ಕೊಡಮಾಡುವ “ದಾದಾ ಸಾಹೇಬ್‌ ಫಾಲ್ಕೆ ಫಿಲ್ಮ್ ಫೌಂಡೇಷನ್‌ ಅವಾರ್ಡ್‌ ಸೌತ್‌  2019’ಗೆ ಈ ಬಾರಿ ನಟ ಯಶ್‌ ಅವರು ಆಯ್ಕೆಯಾಗಿದ್ದಾರೆ.

Advertisement

ದಾದಾ ಸಾಹೇಬ್‌ ಫಾಲ್ಕೆ ಹೆಸರಲ್ಲಿ ಪ್ರಶಸ್ತಿ ನೀಡುತ್ತಾ ಬಂದಿರುವ ಪ್ರತಿಷ್ಠಾನ, ಈ ಬಾರಿಯಿಂದ  ದಕ್ಷಿಣ ಭಾರತದ ಕಲಾವಿದರಿಗೂ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಬೆಸ್ಟ್‌ ಪರ್ಫಾಮರ್‌ ಆಫ್ ದಿ ಇಯರ್‌, ಬೆಸ್ಟ್‌ ಯೂಥ್‌ ಐಕಾನ್‌ ಆಫ್ ದಿ ಇಯರ್‌ ಎಂಬ  ವಿಭಾಗಗಳಲ್ಲಿ, ಕಳೆದ ವರ್ಷ ಹೆಚ್ಚು ಜನಪ್ರಿಯತೆ ಗಳಿಸಿದ ನಟ ಯಾರು ಎಂಬುದನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ.

ಸೆ.20ರಂದು ಹೈದರಾಬಾದ್‌ನಲ್ಲಿ  ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಇದೇ ಮೊದಲ ಬಾರಿ ಪ್ರತಿಷ್ಠಾನವು ಫಾಲ್ಕೆ ಹೆಸರಲ್ಲಿ ಯುವ ನಟರಿಗೆ ಪ್ರಶಸ್ತಿ ಕೊಡುತ್ತಿರುವುದು ವಿಶೇಷ. ಇದು  ಕೇಂದ್ರ ಸರ್ಕಾರ ನೀಡುವ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಅಲ್ಲ. ದಾದಾ ಸಾಹೇಬ್‌ ಫಾಲ್ಕೆ ಹೆಸರಲ್ಲಿ ಪ್ರತಿಷ್ಠಾನ ನೀಡುವ ಪ್ರಶಸ್ತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next