Advertisement

Yash 19; ರಾಜ್ಯೋತ್ಸವಕ್ಕೆ ಯಶ್‌ ಹೊಸ ಚಿತ್ರ ಘೋಷಣೆ?

12:51 PM Sep 29, 2023 | Team Udayavani |

ನಟ ಯಶ್‌ ಅವರ ಹೊಸ ಚಿತ್ರದ ಘೋಷಣೆ ಯಾವಾಗ? – ಹೀಗೊಂದು ಕುತೂಹಲ ಸಿನಿಮಾ ಪ್ರೇಮಿಗಳನ್ನು ಕಾಡುತ್ತಲೇ ಇದೆ. ಕೇವಲ ಕನ್ನಡ ಸಿನಿಮಾ ಪ್ರೇಮಿಗಳಿಗಷ್ಟೇ ಸೀಮಿತವಾಗದೇ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಕುತೂಹಲ ಎದ್ದಿದೆ ಎಂಬುದು ವಿಶೇಷ. ಯಶ್‌ ಹುಟ್ಟುಹಬ್ಬ ದಿಂದ ಹಿಡಿದು ಪ್ರತಿ ಹಬ್ಬದ ಸಮಯದಲ್ಲೂ ಹೊಸ ಚಿತ್ರದ ಘೋಷಣೆ ಕುರಿತಾದ ಕುತೂಹಲ ಮುಂದುವರೆಯುತ್ತಲೇ ಇದೆ.

Advertisement

ಈಗ ಮತ್ತೂಮ್ಮೆ ಯಶ್‌ ಚಿತ್ರದ ಕುರಿತಾದ ಕುತೂಹಲ ಎದ್ದಿದೆ. ಯಶ್‌ ಅವರ (ಯಶ್‌ 19) ಹೊಸ ಚಿತ್ರ ರಾಜ್ಯೋತ್ಸವ ಸಮಯದಲ್ಲಿ ಅನೌನ್ಸ್‌ ಆಗಲಿದೆಯಂತೆ.

ನವೆಂಬರ್‌ 1 ರಂದು ಕನ್ನಡ ರಾಜ್ಯೋತ್ಸವ ಸಮಯದಲ್ಲಿ ಹೊಸ ಚಿತ್ರದ ಕುರಿತಾದ ಬಿಗ್‌ ಅನೌನ್ಸ್‌ಮೆಂಟ್‌ ಹೊರಬೀಳಲಿದೆ ಎನ್ನಲಾಗಿದೆ. ಆದರೆ, ಈ ಕುರಿತು ಅಧಿಕೃತವಾಗಿ ಯಶ್‌ ಆಗಲೀ, ಅವರ ಹೊಸ ಚಿತ್ರತಂಡವಾಗಲೀ ಘೋಷಿಸಿಕೊಂಡಿಲ್ಲ. ಆದರೆ, ಸಿನಿಮಾ ಘೋಷಣೆಯ ಹಿನ್ನೆಲೆಯಲ್ಲಿ ತೆರೆಮರೆಯಲ್ಲಿ ಕೆಲಸಗಳು ಜೋರಾಗಿ ನಡೆಯುತ್ತವೆ ಎನ್ನಲಾಗಿದೆ. ಸದ್ಯ ಯಶ್‌ ಕೂಡಾ ವಿದೇಶದಲ್ಲಿದ್ದು, ಇದೇ ಕೆಲಸದಲ್ಲಿ ತೊಡಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದ್ದು, ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

ಇನ್ನು, ಯಶ್‌ ಅವರ ಹೊಸ ಚಿತ್ರವನ್ನು ಯಾರು ನಿರ್ಮಿಸುತ್ತಾರೆ, ನಿರ್ದೇಶಿಸುತ್ತಾರೆ ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next